ನಿಸರ್ಗಧಾಮ ಗ್ರಾಮೀಣಾಭಿವೃದ್ದಿ ಸಂಸ್ಥೆ & ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ವತಿಯಿಂದ ದಿನಸಿ ಸಾಮಗ್ರಿ ವಿತರಣೆ.

ಮುಗಳಖೋಡ: ಪ್ರಪಂಚವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ರೋಗದಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಗಳಖೋಡ ಪಟ್ಟಣದ ನಿಸರ್ಗಧಾಮ ಗ್ರಾಮೀಣಾಭಿವೃದ್ದಿ ಸಂಸ್ಥೆ & ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಹಾಗೂ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಆಹಾರ ಪದರ‍್ಥಗಳಾದ ಬಾಳೆಹಣ್ಣು ತರಕಾರಿ ವಿವಿಧ ಆಹಾರ ಸಾಮಗ್ರಿಗಳನ್ನು ಸುಮಾರು 200 ಮನೆಗಳಿಗೆ ವಿತರಿಸಿ ಕರೋನ ವೈರಸ್ ತಡೆಗಟ್ಟುವ ವಿಧಾನ ಹಾಗೂ ನಾಟಿ ಔಷಧಿಗಳ ಬಗ್ಗೆ ಮಾಹಿತಿ ನೀಡುತ್ತಾ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ನಾಟಿವೈದ್ಯ ಅಲ್ಲಯ್ಯಾ ಹಿರೇಮಠ ಜನಜಾಗೃತಿಯನ್ನು ಮೂಡಿಸಿದರು.
ಅವರು ಮಾತನಾಡಿ ಕರೋನ ಮಹಾಮಾರಿ ರೋಗದಿಂದ ದೇಶದ ಜನರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯನ್ನು ನಾವು ಎಂದು ಕಂಡಿರಲಿಲ್ಲ. ಈ ಭಯಾನಕ ಕೊರೊನಾ ರೋಗ ಬಂದು ನಮ್ಮ ದೇಶದ ಜನಜೀವನವನ್ನು ದುಸ್ಥಿತಿಗೆ ತಂದಿದೆ. ಈ ಸಮಯದಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ಮಾನವೀಯತೆ ಹಾಗೂ ನಮ್ಮೇಲ್ಲರ ಕತ೯ವ್ಯವಾಗಿದೆ. ನಮ್ಮ ಊರಿನ ಹಿರಿಯರಾದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಜೊತೆಗೂಡಿ ಅಂತಹ ಮಹನೀಯರ ಸಂಸ್ಥೆಯ ವಿಧ್ಯರ‍್ಥಿಗಳು ಇಂದು ಈ ಸಾಮಗ್ರಿ ವಿತರಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳುತ್ತಾ ಆದಷ್ಟು ಬೇಗನೆ ಮಹಾಮಾರಿ ಕೊರೊನಾ ನಮ್ಮ ದೇಶ ಹಾಗೂ ಇಡೀ ಪ್ರಪಂಚವನ್ನೆ ಬಿಟ್ಟು ತೊಲಗಲಿ ಎಂದು ಆ ದೇವರಲ್ಲಿ ಪ್ರಾಥಿ೯ಸುವೆ ಎಂದು ಹೇಳಿದರು.
ಈ ಸಂರ‍್ಭದಲ್ಲಿ ಕಾಲೇಜಿನ ಪ್ರಾಚಾಯ೯ರಾದ ಪ್ರೊ. ಪ್ರಕಾಶ ಕಂಬಾರ, ಪಿ.ಓ ಸಂಗಮೇಶ ಹಿರೇಮಠ, ಪತ್ರಕರ್ತ ಬಾಳು ಕೋಟಿನತೋಟ್, ಶ್ರೀಶೈಲ ಕುಲಿಗೋಡ, ಮಹಾಂತೇಶ ಕುಲಿಗೋಡ, ಕೃಷ್ಣಾ ಬದನೆಕಾಯಿ, ಶ್ರೀಕಾಂತ ಕೆಂಚಣ್ಣವರ, ರಾಜು ಕುಲಿಗೋಡ ಹಾಗೂ ವಿಧ್ಯರ‍್ಥಿಗಳು ಪಾಲ್ಗೊಂಡಿದ್ದರು.
Share
WhatsApp
Follow by Email