ಲಾಕ್ ಡೌನ್ ಬಂದೋಬಸ್ತಿಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು

ಲಾಕ್ ಡೌನ್ ಬಂದೋಬಸ್ತಿಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು

ಬೆಳಗಿನ ಜಾವ ಮನೆಯಿಂದ ಠಾಣೆಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು ….
ಬೆಳಗಾವಿ- ಬೆಳಗಿನ ಜಾವ ಮನೆಯಿಂದ ಕರ್ತವ್ಯ ನಿಭಾಯಿಸಲು ಠಾಣೆಗೆ ಬರುತ್ತಿದ್ದ ಬೆಳಗಾವಿಯ ಖಡೇಬಝಾರ್ ಠಾಣೆಯ ಪಿ ಎಸ್ ಐ ಗಣಾಚಾರಿ ಬೈಕ್ ಸ್ಕೀಡ್ ಆಗಿ ಬಿದ್ದು ಸ್ಥಳದಲ್ಲೇ ಸಾವನ್ನೊಪ್ಪಿದ್ದಾರೆ.
ಬೆಳಗಾವಿ ಮಹಾನಗರದಲ್ಲಿ ಲಾಕ್ ಡೌನ್ ಬಿಗಿಗೊಳಿಸಲು ಬೆಳಗಿನ ಜಾವದಿಂದಲೇ ಬೆಳಗಾವಿ ಪೋಲೀಸರು ಲಾಕ್ ಡೌನ್ ಬಿಗಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು
ಯಳ್ಳೂರ ರಸ್ತೆಯ ನಿವಾಸಿಯಾಗಿದ್ದ ಖಡೇಬಝಾರ್ ಪಿಎಸ್ಐ ಗಣಾಚಾರಿ ಬೈಕ್ ಮೇಲೆ ಠಾಣೆಗೆ ಬರುವಾಗ ಯಳ್ಳೂರ ರಸ್ತೆಯ ಕೆ ಎಲ್ ಈ ಆಸ್ಪತ್ರೆ ಬಳಿ ಬೈಕ್ ಸ್ಕೀಡ್ ಆದ ಪರಿಣಾಮ ತೆಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನೊಪ್ಪಿದ್ದಾರೆ
ಪಿ ಎಸ್ ಐ. ಗಣಾಚಾರಿ ಅವರು ಸೇವೆಯಿಂದ ನಿವೃತ್ತಿ ಪಡೆಯಲು ಕೇವಲ ಮೂರು ತಿಂಗಳಷ್ಟೇ ಬಾಕಿ ಇತ್ತು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಲ್ಲ ಹಿರಿಯ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಕೊರೋನಾ ಬಂದೊಬಸ್ತ ಕರ್ತವ್ಯಕ್ಕಾಗಿ ಬರುತ್ತಿದ್ದ ಪಿ ಎಸ್ ಐ ಸಾವು.
ಬೆಳಗಾವಿ ಖಡೆ ಬಝಾರ್ ಪಿ ಎಸ್ ಐ ಎಂ ಜಿ ಗಣಾಚಾರಿ ರಸ್ತೆ ಅಪಘಾತದಲ್ಲಿ ಸಾವನ್ನೊಪ್ಪಿದ್ದಾರೆ ಎಳ್ಳೂರ ಗ್ರಾಮದಿಂದ ಬೆಳಗಾವಿ ನಗರಕ್ಕೆ ಆಗಮಿಸುವಾಗ ಸ್ಕೀಡ್ ಆದ ಬೈಕ್.
ಖಡೆಬಝರ್ ಠಾಣೆ ಯ ವ್ಯಾಪ್ತಿಯಲ್ಲಿ ಬರುವ ರೇಣುಕಾ ಹೊಟೇಲ್ ಬಳಿ ಬೆಳ್ಳಿಗ್ಗೆ 6 ಗಂಟೆಯಿಂದ ಕರ್ತವ್ಯ ನಿರ್ವಹಿಸಬೇಕಿತ್ತು
Share
WhatsApp
Follow by Email