
ಮಹಾಲಿಂಗಪುರ : ಮೊನ್ನೆ ದಿನ ನಗರದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚು-ಗುಡುಗಿನಿoದ ಕೂಡಿದ ಧೂಳು ಸಮೇತ ಬಿರುಗಾಳಿಯು ಪಟ್ಟಣದಲ್ಲಿ ಆತಂಕ ತಂದೊಡ್ಡಿತ್ತು.
ಸಮೀಪದ ಕೋಡಿಹಾಳ ಗ್ರಾಮದಲ್ಲಿ ಇದೆ ಸಂದರ್ಭದಲ್ಲಿ ಧರೆಪ್ಪ ಮ0ಟೂರ್ ಮೇಲೆ ಗಾಳಿಯ ರಭಸಕ್ಕೆ ಸಿಮೆಂಟ್ ಕಂಬ ಕಿತ್ತುಕ್ಕೊಂಡು ಬಿದ್ದ ಪರಿಣಾಮ ಸಾವಿನ ದವಡೆಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಆತನನ್ನು ನಗರದ ಕನಕರೆಡ್ಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿ ಚೇತರಿಸಿಕ್ಕೊಳ್ಳುತಿದ್ದಾನೆ ಎಂದು ಸ್ಥಳೀಯ ವ್ಯಕ್ತಿ ಸಿದ್ದು ಮಾಳಗಿ ತಿಳಿಸಿದ್ದಾರೆ.
ಶನಿವಾರ ಸಾಯಂಕಾಲ 5-30ರ ಸುಮಾರಿಗೆ ಬೀಸಿದ ಬಿರು ಗಾಳಿಯ ರಭಸದ ಪರಿಣಾಮ ಅನೇಕ ಗಿಡ ಮರಗಳು ಧರೆಗುರುಳಿವೆ. ಮತ್ತು ಪತ್ರಾಸ್ ಶೆಡ್ಡಗಳು ಹಾರಿ ಹೋಗಿ ಜನರು ಪರದಾಡುವಂತೆ ಮಾಡಿತು. ಆರ್.ಸಿಸಿ ಮನೆ,ಜೋಪಡಿಗಳ ಮೇಲೆ ಮರಗಳು ಬಿದ್ದು ಹಾನಿ ಉಂಟಾಗಿದೆ