ಮೂಡಲಗಿ : ಆರಿಹೋಯಿತು ಮೂಡಲಗಿ ದೀಪ : ಶ್ರೀ ಶ್ರೀಪಾದಭೋದ ಮಹಾಸ್ವಾಮಿಜಿಗಳು ಪಂಚಭೂತಗಳಲ್ಲಿ ಲೀನ

ಮೂಡಲಗಿ ತಾಲ್ಲೂಕು ಆಗುವಲ್ಲಿ ಅವಿರತ ಪ್ರಯತ್ನ ಪಟ್ಟು ಹೋರಾಟ ನಡೆಸಿದ್ದ ಮೂಡಲಗಿ ಸಿದ್ಧಸಂಸ್ಥಾನ ಮಠದ ಮಹಾಸ್ವಾಮೀಜಿ ಶ್ರೀ ಶ್ರೀಪಾದ ಬೋಧ ಮಹಾಸ್ವಾಮಿಗಳು ವಿಧಿವಶರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ರಾತ್ರಿಯೇ ಜರುಗಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಸಂತಾಪ: ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕೆ. ಪಿ. ಸಿ. ಸಿ ಕಾರ್ಯಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ, ಕೆ. ಎಮ್. ಎಫ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಜೆಡಿಎಸ್ ನ ಬೀಮಫ್ಪ ಗಡಾದ ಸ್ವಾಮಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.
ಕಂಬನಿ : ಅವರ ಅಗಲಿಕೆಗೆ ಮೂಡಲಗಿ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಕ್ಕಣ್ಣ ಸವಸುದ್ದಿ ಕಂಬನಿ ಮಿಡಿದು, ಸ್ವಾಮೀಜಿ ಅವರ ಮೂಡಲಗಿ ತಾಲೂಕು ಹೋರಾಟದ ಕ್ಷಣ ಕ್ಷಣಗಳನ್ನು ಸ್ಮರಿಸಿದ್ದಾರೆ

ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿಯ ಗೌರವ ಅಧ್ಯಕ್ಷರು ಆದ ಪರಮ ಪೂಜ್ಯ ಶ್ರೀ ಶ್ರೀ ಶ್ರೀಪಾದಬೋಧ ಮಹಾಸ್ವಾಮಿಗಳು ಶಿವಾಧಿನರಾಗಿದ್ದಕ್ಕೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
Share
WhatsApp
Follow by Email