ಬ್ರೇಕಿಂಗ್ ನ್ಯೂಸ್ ಬೈಲಹೊಂಗಲದಲ್ಲಿ ಮಳೆ, ಗಾಳಿಗೆ ಧರೆಗುರುಳಿದ ಗಿಡಮರ, ವಿದ್ಯುತ್ ಕಂಬಗಳು 19/04/202019/04/20201 min read admin ಬೈಲಹೊoಗಲ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಾತ್ರಿ ಭಾರಿ ಪ್ರಮಾಣದ ಮಳೆ, ಗಾಳಿ, ಸಿಡಿಲಿಗೆ ಬೃಹತ್ ಗಾತ್ರದ ಗಿಡಮರ, ವಿದ್ಯುಂತ್ ಕಂಬಗಳು ಧರೆಗುರುಳಿದವು.ಪ್ರಮುಖ ಬಜಾರ ರಸ್ತೆಯ ರಾಯಣ್ಣ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರವನ್ನು ಶನಿವಾರ ಬೆಳಗ್ಗೆ ಹೆಸ್ಕಾಂ, ಅರಣ್ಯ ಇಲಾಖೆ, ಪುರಸಭೆ ಸಿಬ್ಬಂದಿ ತೆರುವುಗೊಳಿಸಿದರು. ಸತತ ಆರು ಗಂಟೆಗಳಕಾಲ ಕಾರ್ಯ ಚಟುವಟಿಕೆ ನಡೆಸಿ ಮರದಲ್ಲಿ ಸಿಲುಕಿಕೊಂಡಿದ್ದ ವಿದ್ಯುತ್ ಪರಿಕರ, ಕಂಬಗಳನ್ನು ಟ್ರ‍್ಯಾಕ್ಟರ್ ಮೂಲಕ ಹೊರಗಡೆ ತೆಗೆದರು. ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತುಂಡರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮರ ಬಿದ್ದ ರಭಸಕ್ಕೆ ಕೆಲ ಅಂಗಡಿಮುಗ್ಗಟ್ಟು, ದಿನಸಿ ಸಾಮಗ್ರಿಗಳು ಹಾನಿಗೆ ಒಳಗಾಗಿವೆ. ಅದೃಷ್ಠವಷಾತ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ. ಶುಕ್ರವಾರ ರಾತ್ರಿ ಏಕಾಏಕಿ ಗುಡುಗು, ಮಿಂಚು, ಗಾಳಿಯೊಂದಿಗೆ ಸುರಿದ ಮಳೆಗೆ ಚರಂಡಿಗಳು ತುಂಬಿ ಹರಿದವು. ರಸ್ತೆ ಮದ್ಯದಲ್ಲಿ ಗಟಾರ ಗಲೀಜು ಬಂದು ಸಂಗ್ರಹವಾಗಿತ್ತು. ಪುರಸಭೆ ಸಿಬ್ಬಂದಿ ಗಲೀಜು ಶುಚಿಗೊಳಿಸಿದರು.ಪ್ರಾಣ ಉಳಿಸಿದ ಯುವಕರು:ರಾತ್ರಿ ರಾಯಣ್ಣ ರಸ್ತೆ ಮದ್ಯದಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ಕಂಡ ಕೆಲ ಯುವಕರು, ಮಯೂರ ಝರಾಕ್ಸ್ ಸೆಂಟರ, ಹಾಲು ವಿತರಕರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ತಂತಿ ತೆರುವುಗೊಳಿಸುವಂತೆ ಹೆಸ್ಕಾಂಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದರು. ಅದÀð ಗಂಟೆಗೂ ಹೆಚ್ಚು ಸಮಯ ರಾಯಣ್ಣ ವೃತ್ತದಲ್ಲಿ ಯಾವುದೇ ವಾಹನ, ವ್ಯಕ್ತಿಗಳು ಓಡಾದಂತೆ ರಸ್ತೆಯಲ್ಲಿ ನಿಂತು ಕೈ ಮುಗಿದು ವಿನಂತಿಸಿದರು. ಇಲ್ಲದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಮರ ಬಿದ್ದ ಸ್ಥಳದಲ್ಲಿ ವಯೋವೃದ್ದ ಅಜ್ಜಿಯೊಬ್ಬಳು ಮಳೆಯಿಂದ ಮರದ ಆಶ್ರಯ ಪಡೆದಿದ್ದಳು. ದೇವರ ಧಯೆ ಮರ ಬಿದ್ದ ವೇಳೆ ಅಜ್ಜಿ ಅಲ್ಲಿಂದ ತೆರಳಿದ್ಧಳು. ಅಜ್ಜಿ ತೆರಳಿದ್ದ ಕೆಲವೇ ಸೆಕೆಂಡುಗಳಲ್ಲಿ ಮರ ನೆಲಕ್ಕೆ ಅಪ್ಪಳಿಸಿತು. ನಂತರ ಬಂದ ಹೆಸ್ಕಾಂ ಸಿಬ್ಬಂದಿ ಜಾಗರುಕತೆಯಿಂದ ತಮ್ಮ ಕರ್ತವ್ಯ ಪ್ರಜ್ಞ ಮೆರೆದು ರಸ್ತೆಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿಗಳನ್ನು ತೆರುವುಗೊಳಿಸಿದರು. ಒಂದು ವಿದ್ಯುತ್ ಪರಿಕರ ಸೇರಿದಂತೆ ಐದಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ತಂತಿಗಳು ನೆಲಕುರುಳಿವೆ. ಅವುಗಳೆಲ್ಲವನ್ನು ದುರಸ್ತಿಗೊಳಿಸಲಾಗುತ್ತಿದೆ. ಅಂದಾಜು ಎರಡುವರೆ ಲಕ್ಷ ರೂ.ಹಾನಿ ಹೆಸ್ಕಾಂ ವ್ಯಾಪ್ತಿಗೆ ಧಕ್ಕೆ ಆಗಿದೆ ಎಂದು ಶಾಖಾಧಿಕಾರಿ ಎಸ್.ಜಿ.ಬಡಿಗೇರ ತಿಳಿಸಿದರು. Share