
ಬೈಲಹೊಂಗಲ : ಪಟ್ಟಣದ ನಮೋನಗರದ ಯಡಳ್ಳಿ ಲೇಔಟ್ಗೆ ಹೊಂದಿಕೊAಡಿರುವ ಗಂಗಾ ನರ್ಸಿಂಗ್ ಹೋಮನಲ್ಲಿ ಕೊರೊನಾ ಶಂಕಿತರನ್ನು ಸ್ಥಳಾಂತರಿಸದAತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಉಪವಿಭಾಗಾಧಿಕಾರಿಗಳಿಗೆ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಹಿರಿಯರಾದ ಶಂಕರೆಪ್ಪ ಯಡಳ್ಳಿ ಮಾತನಾಡಿ, ಜನ ಓಡಾಡುವ ಪ್ರದೇಶವಾಗಿರುವ ಗಂಗಾ ನರ್ಸಿಂಗ್ ಹೋಮನಲ್ಲಿ ಕೊರೊನಾ ಶಂಕಿತರನ್ನು ಸ್ಥಳಾಂತರಿಸಲು ಮುಂದಾಗಿರುವ ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಆಸ್ಪತ್ರೆ ಪಕ್ಕದಲ್ಲಿಯೇ ನೂರಾರು ಕುಟುಂಬಗಳಿವೆ. ವೃದ್ಧರು, ಮಕ್ಕಳು, ಯುವಕರು ವಾಸಿಸುತ್ತಾರೆ. ಇದರಿಂದ ಯಾರಿಗೂ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಗಂಗಾ ನರ್ಸಿಂಗ್ ಹೋಮಗೆ ಶಂಕಿತರನ್ನು ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿದರು. ಶ್ರೀಶೈಲ ಯಡಳ್ಳಿ, ಶಂಕರ ಹಣಬರ, ಮಹಾಂತೇಶ ಮೂಗಿ, ಶಿದ್ದಪ್ಪ ಶೀಗಿಹಳ್ಳಿ, ಬಸಲಿಂಗಯ್ಯ ಚರಂತಿಮಠ, ಶಂಕರ ಹಣಬರ, ಸಂಜಯ ಹಡಪದ ಉಪಸ್ಥಿತರಿದ್ದರು.