
ನಗರದಲ್ಲಿನ ಇಬ್ಬರಿಗೆ ಕೊರೊನಾ ಸೊಂಕಿನ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಸುಮಾರು 61 ಜನರಿಗೆ ಕೊರಾಂಟೈನ್‌ನಲ್ಲಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೊರೊನಾ ಲಕ್ಷಣಗಳಿರುವ ಸುಮಾರು 15 ಜನರ ಮಾದರಿಯನ್ನು ಪರೀಕ್ಷೆಗೆ ತಾಲೂಕಾ ಆರೋಗ್ಯಾಧಿಕಾರಿಗಳು ಕಳುಹಿಸಿಕೊಡಲಾಗಿದ್ದು ವರದಿ ಬರಬೇಕಾಗಿದೆ.
ರೋಗಿಗಳ ಪರದಾಟ: ನಗರದಲ್ಲಿನ ಖಾಸಗಿ ಆಸ್ಪತ್ರೆಗಳು ಬಂದ ಇರುವ ಕಾರಣ ವಿವಿಧ ಕಾಯಿಲೆಗಳಿರುವ ರೋಗಿಗಳು ಪರದಾಡುವಂತಾಗಿದೆ, ಅದರಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆಂದು ಹೋದರೆ ಅಲ್ಲಿನ ವೈದ್ಯರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ರೋಗಿಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ.
ಸರ್ಕಾರಿ ವೈದ್ಯರ ಸೇವೆ: ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು, ದಾದಿಯರು, ಸಿಬ್ಬಂದಿಗಳು ಕೊರೋನಾ ಭಿತಿಯಲ್ಲೂ ಆಸ್ಪತ್ರೆಗೆ ಬರುವ ರೋಗಿಗಳೀಗೆ ಉತ್ತಮ ಸೇವೆ ನೀಡುತಿದ್ದಾರೆ.
ನಿಷೇಧಿತ ಪ್ರದೇಶ:

ಬಂದು ಪರೀಕ್ಷಿಸಿಕೊಳ್ಳಿ:
ನಗರದ ಹಳೇ ತಹಶೀಲ್ದಾರ ಕಚೇರಿಯ ಹತ್ತಿರದÀ ಭಾರತೀಯ ಸ್ಟೇಟ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಒಬ್ಬರಿಗೆ ಕೊರೋನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಏ. 13 ರ ಮಧ್ಯಾಹ್ನ 1.30 ರಿಂದ ಏ.15ರ ಮಧ್ಯಾಹ್ನ 1.30 ರವರೆಗೆ ಈ ಬ್ಯಾಂಕಿನ ಎಟಿಎಮ್ ಶಾಖೆಯಲ್ಲಿ ಹಣ ಡ್ರಾ ಮಾಡಿದವರು ತಾಲೂಕಾ ಆರೋಗ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು, ಅಥವಾ ಅವರೆಲ್ಲರೂ ಸ್ವಯಂ ಪ್ರೇರಿತರಾಗಿ ಹೋಮ ಕ್ವಾರೆಂಟೈನನಲ್ಲಿ ಇರಬೇಕು ಎಂದು
ಎಸಿ ಡಾ. ಸಿದ್ದು ಹುಲ್ಲೋಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.