
ಅಥಣಿ ತಾಲೂಕಿನ ದಕ್ಷಿಣ ಭಾಗಗಳ ಗ್ರಾಮಗಳ ಗೌಳಿಗರಿಂದ ಸಂಗ್ರಹವಾದ ಹಾಲು ಜಮಖಂಡಿ ತಾಲೂಕಿನ ಹಿಪ್ಪರಗಿ, ಮುಧೋಳ ತಾಲೂಕಿನ ಮಹಾಲಿಂಗಪೂರಕ್ಕೆ ಸಾಗಿಸಲಾಗುತ್ತದೆ. ಕರೋನಾ ವೈರಸಗೆ ಹೆದರಿ ಹಿಪ್ಪರಗಿ ಡ್ಯಾಂ ಮೇಲಿನ ರಸ್ತೆ ಬಂದ ಮಾಡಿದ್ದರಿಂದ ಹಾಲು ತೆಗೆದುಕೊಂಡು ಹೋಗಲು ಬರುತ್ತಿದ್ದ ವಾಹನ ಬರುತ್ತಿಲ್ಲ . ಕೃಷ್ಣಾ ನದಿಯಲ್ಲಿ ಮಹಿಷವಾಡಗಿ-ರಬಕವಿ ಮಧ್ಯ ಸಂಚರಿಸಿ ಹಾಲು ಸಾಗಿಸಲು ಬೋಟ ವ್ಯವಸ್ಥೆ ಮಾಡಿಕೊಂಡಿದ್ದರು. ಈ ಬೋಟ್ ವ್ಯವಸ್ಥೆಯನ್ನು ಸಹ ಅಧಿಕಾರಿಗಳು ಬಂದಮಾಡಿದ್ದರಿAದ ಗೌಳಿಗರು ಸಂಗ್ರಹವಾದ ಹಾಲನ್ನು ಕೃಷ್ಣಾ ನದಿಯಲ್ಲಿ ಸುರುವುತ್ತಿದ್ದಾರೆ.
ಈ ಭಾಗದ ಮರ‍್ನಾಲ್ಕು ಗ್ರಾವiಗಳಲ್ಲಿ ದಿನನಿತ್ಯ 8 ಸಾವಿರ ಲೀಟರಗಳಿಗಿಂತಲೂ ಹಾಲು ಹೆಚ್ಚಿಗೆ ಸಂಗ್ರಹವಾಗುತ್ತದೆ. ಸಾಗಾಟದ ತೊಂದರೆ ಎದುರಾಗಿರುವುದರಿಂದ ರೈತರಿಂದ ಹಾಲನ್ನು ಸಂಗ್ರಹ ಮಾಡಿದರೂ ಸಾಗಿಸಲು ಯಾವುದೇ ಇಲಾಖೆಯಯವರು ಸಹಕಾರ ನೀಡುತ್ತಿಲ್ಲವಾದ್ದರಿಂದ ಗೌಳಿಗರು ರೈತರಿಂದ ಹಾಲು ಸಂಗ್ರಹ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೈನುಗಾರಿಯನ್ನೆ ಅವಲಂಭಿಸಿ ಜೀವನ ಸಾಗಿಸುತ್ತಿದ್ದ ಅನೇಕ ಕುಟುಂಬಗಳು ತೊಂದರೆ ಅನುಭವಿಸಿ ಬೀದಿಗೆ ಬರುವಂತಾಗಿದೆ. ಮುಂಜಾನೆ ಸಂಜೆ ಹಾಲು ಹಿಂಡಿಟ್ಟುಕೊAಡು ಗೌಳಿಗ ಬರುವುದನ್ನೆ ದಾರಿ ಕಾಯುತ್ತ ಕುಳಿತುಕೊಳ್ಳುವ ಮಹಿಳೆಯರು ಗೌಳಿಗ ಬರದೆ ಇದ್ದಾಗ ಹಾಲನ್ನು ಬೀದಿ ನಾಯಿಗಳಿಗೆ ಹಾಕುತ್ತಿದ್ದಾರೆ.
ಹಾಲು ಅಗತ್ಯ ವಸ್ತಗಳಲ್ಲಿ ಒಂದಾಗಿದೆಯAದು ಸರ್ಕಾರ ಹಾಲಿನ ಸಾಗಾಟಕ್ಕೆ ವಿನಾಯಿತಿ ನೀಡಿದರೂ ತೊಂದರೆ ಅನುಭವಿಸುತ್ತಿರುವ ರೈತರ, ಗೌಳಿಗರ ಹಿತ ಯಾರು ಕಾಪಾಡುವರು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎನ್ನುತ್ತಾರೆ ಈ ಭಾಗದ ಗೌಳಿಗರು. ಈ ಸಂದರ್ಭದಲ್ಲಿ ಅನೀಲ ಶಿರಹಟ್ಟಿ, ಚೇತನ ತೇರದಾಳ, ಸುಭಾಸ ಲಾಲಸಿಂಗಿ, ಲಕ್ಷö್ಮಣ ಪಡಸಲಗಿ, ಶ್ರೀಧರ ಶಿರಹಟ್ಟಿ, ರಾಜು ಯಲ್ಲಟ್ಟಿ, ಶಾಂತಿನಾಥ ನಂದಗಾAವ, ಗುರುರಾಜ ತಮದಡ್ಡಿ, ಸಿದ್ದಪ್ಪ ಬಳವಾಡ, ಪರಶು ಸುಂಕದ ಇದ್ದರು.
ಬಾಕ್ಸ ನ್ಯೂಸ್ “ ಹಾಲು ಸಾಗಾಟ ಮಾಡಲು ದಿನ ನಿತ್ಯ ತುಂಬಾ ತೊಂದರೆ ಅನುಭವಿಸಿ ರೈತರಿಂದ ಹಾಲು ಸಂಗ್ರಹ ಮಾಡುವುದನ್ನೆ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಗ್ರಾಮದ ಬೀಟ್ ಪೊಲೀಸ ಹಾಲು ಸಾಗಾಟ ಮಾಡುವಾಗ ಸುಮ್ಮನೆ ಕಿರುಕುಳ ನೀಡಿ ಅಡಚನೆ ಮಾಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.”
ಅನೀಲ ಶಿರಹಟ್ಟಿ. ಗೌಳಿಗ ಮಹಿಷವಾಡಗಿ
ಬಾಕ್ಸ ನ್ಯೂಸ್ 2 “ ಅಥಣಿ ದಕ್ಷಿಣ ಭಾಗದ ಮಹಿಷವಾಡಗಿ, ನಂದೇಶ್ವರ, ಜನವಾಡ ಮೊದಲಾದ ಗ್ರಾಮದವರ ಗೌಳಿಗರ ಹಾಲು ಸಾಗಾಟಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ ಈ ಕುರಿತು ಸಂಬAಧಿಸಿದವರ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು” ಅಪ್ಪಾಸಾಬ ಅವತಾಡೆ. ಕೆ.ಎಂ.ಎಫ್ ಸದಸ್ಯ ಅಥಣಿ