
ಬಡ ಕುಟುಂಬಗಳನ್ನು ನೋಡಿ ಮನಗೊಂಡ ನಾಡಿನಾದ್ಯಂತ ಪವಾಡಪುರುಷ ಎಂದು ಹೆಸರುವಾಸಿಯಾಗಿರುವ ಹಿಪ್ಪರಗಿಯ ಶ್ರೀ ಸಂಗಮೇಶ್ವರ ಮಹಾರಾಜರ ಮೊಮ್ಮಕ್ಕಳಾದ ಚಿಕ್ಕೋಡಿಯ ಬಸವೇಶ್ವರ ನಗರದ ಶೀಮತಿ ಉಮಾ ಎಸ್. ಮಠದ ದಂಪತಿಗಳು ಮತ್ತು ಸಹಾಯಕರಾಗಿ ಶ್ರೀಮತಿ ಉಮಾ ಹೊರಕೇರಿ ಅವರನ್ನು ಜೊತೆಗೂಡಿಸಿಕೊಂಡು ಮನೆಯಲ್ಲೆ 500 ಮಾಸ್ಕ ತಯಾರಿಸಿ ಹಂಚಿಕೆ ಮಾಡುತ್ತಾ ಜನರಲ್ಲಿ ಕರೋನ್ ಸೊಂಕಿನ ಬಗ್ಗೆ ಶ್ರೀಮತಿ ಉಮಾ ಎಸ್.ಮಠದ ಅವರು ಜಾಗೃತಿಯನ್ನು ಮೂಡಿಸಿದರು. ನಗರದ ಪ್ರತಿ ಮನೆ ಮನೆಗೆ ಉಚಿತವಾಗಿ ಮಾಸ್ಕ್ಗಳನ್ನ ತಯಾರಿಸಿ ಕೋಡುವುದಾಗಿ ತಿಳಿಸಿದ್ದಾರೆ.
ನಿವೃತ ಪ್ರಾಧ್ಯಾಪಕÀ ಎಸ್.ಎಸ್.ಮಠದ ಮಾತನಾಡಿ ಪ್ರತಿಯೊಬ್ಬರು ಸುರಕ್ಷೆತೆಯ ಅಂತರದೊAದಿಗೆ ಮನೆಯಲ್ಲಿ ವಾಸಿಸುವಂತೆ ಜನರಲ್ಲಿ ಮನವಿ ಮಾಡಿ ಕರೋನಾ ವೈರಸ್ ಹೋಗಲಾಡಿಸಲು ಜನರು ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೆ ವೇಳೆ ಚಿಕ್ಕೋಡಿ ಸಂಪಾದನಾ ಮಠದ ಸಂಪಾದನಾ ಸ್ವಾಮೀಜಿಯವರು ಕೂಲಿಕಾರ್ಮಿಕರಿಗೆ ಮತ್ತು ಬಡ ಕುಟುಂಬದವರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ. ಮಠದಲ್ಲಿ ಅನ್ನಪ್ರಸಾದ ವ್ಯವಸ್ಥೆಯಲ್ಲಿ ಪಾಲ್ಗೊಂಡ ಎಲ್ಲ ಜನರಿಗೂ ಕೂಡಾ ಮಾಸ್ಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಪಾದನಾ ಮಠದ ಸಂಪಾದನಾ ಸ್ವಾಮಿಜಿ, ಉಮಾ ಎಸ್. ಮಠದ, ಎಸ್.ಎಸ್.ಮಠದ, ಸಾಯಿ ಪರಿವಾರ ಸಂಘದವರು, ಶ್ರೀಮತಿ ಉಮಾ ಹೊರಕೇರಿ, ಮಠದ ದಂಪತಿಗಳು ಪಾಲ್ಗೊಂಡಿದ್ದರು.