
ಅಥಣಿ ಮತ್ತು ಕಾಗವಾಡ ಎರಡು ಮತಕ್ಷೇತ್ರದಲ್ಲಿ ನೇರೆ ಮಹಾರಾಷ್ಟ್ರ ದಿಂದ ಮಧ್ಯ ಬರುತಿಲ್ಲ. ಸ್ಥಳಿಯ ಮಧ್ಯದ ಅಂಗಡಿ ಮಾಲಿಕರೆ ಕಾಳ ಸಂತೆಯಲ್ಲಿ ಕದ್ದು ಮಾರುತಿದ್ದಾರೆ. ಎಂಬ ಮಾಹಿತಿ ಇದೆ ಎಂದು ಹೇಳಿದರು.
ಕೊರೋನಾ ಸೋಂಕು ಒಂದು ಹಂತದಲ್ಲಿ ಹಿಡಿತದಲ್ಲಿ ಇದೆ. ಕೇವಲ ದಿಲ್ಲಿಯಲ್ಲಿ ಧಾರ್ಮಿಕ ಸಭೆಗೆ ಹೋಗಿ ಬಂದವರಿAದ ಜಿಲ್ಲೆಯ ಕುಡಚಿ ಮತ್ತು ಹಿರೆ ಬಾಗವಾಡಿಯಲ್ಲಿ ಹಬ್ಬಿತು. ಇದನ್ನು ಹಿಡಿತದಲ್ಲಿ ತರುವಲ್ಲಿ ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳು ಹಿಡಿದು ಕೆಳಹಂತದ ಎಲ್ಲ ಅಧಿಕಾರಿಗಳ ಕೆಳ ಹಂತದ ಎಲ್ಲ ಮಟ್ಟದಲ್ಲಿ ಬಹಳಷ್ಟು ಶ್ರಮ ಪಡುತ್ತಿದ್ದಿದಾರೆ ಎಂದು ಮುಕ್ತ ಅಧಿಕಾರಿಗಳನ್ನು ಹೊಗಳಿದರು.
ಎನ್.95 ಮಾಸ್ಕಗಳನ್ನು ಕೇವಲ ವೈಧ್ಯಕೀಯ ಸಿಬ್ಬದಂದಿಗೆ ಬಳಿಸಲು ಸೂಚನೆ ನೀಡಲಾಗಿದೆ. ಇನ್ನುಳಿದವರು ಬಟ್ಟೆ ಇಂದ ಮಾಸ್ಕ್ ತಯಾರಿಸಿ ಬಳಿಕೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯಃ ಎಲ್ಲ ಗ್ರಾಮಗಳಿಗೆ ಮತ್ತು ಅಥಣಿ ನಗರಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯ ಆಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಮಹೇಶ ಕುಮಟಳ್ಳಿ ಮಾತನಾಡಿ ಎಲ್ಲ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸಲಹೆ ಸೂಚನೆಗಳನ್ನು ಕೊಡುತ್ತಿದ್ದೇನೆ ಅಲ್ಲದೆ ಶಾಸಕನಾಗಿ ನಾನೇ ಜನತೆಯನ್ನು ಗುಂಪುಗೂಡಿಸಿಕೊAಡು ತಿರುಗಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಅಗ್ಗದ ಕ್ರಮವಾಗುತ್ತದೆ ಕಾರಣ ನಾನು ಕ್ಷೇತ್ರದ ತಿರುಗಾಡುತ್ತಿಲ್ಲ. ಕ್ಷೇತ್ರ ಸಮಸ್ಯೆಯನ್ನು ಕುರಿತು ಜಿಲ್ಲಾ ಉಸ್ತುವಾರಿಗಳ ಸಭೆಯಲ್ಲಿ ಹಾಗೂ ಚಿಕ್ಕೋಡಿಯ ಲೋಕಸಭಾ ಕ್ಷೇತ್ರದ ಸಭೆಯ ಸಂದರ್ಭದಲ್ಲಿ ಜರುಗಿದ ಸಭೆಯಲ್ಲಿ ಕ್ಷೇತ್ರದ ಸಮಸ್ಯೆ ಪ್ರಸ್ತಾಪ ಮಾಡಿದ್ದೆನೆ ಹಾಗೂ ನಿರಂತರ ಸರಕಾರದ ಜೊತೆ ಸಮಸ್ಯೆ ಕುರಿತು ಗಮನ ಸೆಳೆಯುತ್ತ ನನ್ನ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಾವಿನ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಬೇಡ. ನಾನು ತಿರುಗಾಡುವುದನ್ನು ಕಂಡು ಇನ್ನುಳಿದ ಮುಖಂಡರು ಗುಂಪುಗೂಡದು ಬೇಡ ಕಾರಣ ಎಲ್ಲರೂ ಸೇರಿ ಸರಕಾರದ ಆದೇಶ ಪಾಲಿಸುವ ಮೂಲಕ ಕೊರೋನಾದಿಂದ ಬಿಡುಗಡೆ ಪಡೆಯೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ತಹಶಿಲ್ದಾರ ರಾಜೇಂದ್ರ ಬುರ್ಲಿ. ಡಿವೈ ಎಸ್ಪಿ ಎಸ್ ವಿ ಗಿರೀಶ. ಸಿ ಪಿ ಐ ಶಂಕರಗೌಡ ಬಸನಗೌಡರ. ತಾಪಂ ಅಧಿಕಾರಿ ರವಿ ಬಂಗಾರಪ್ಪನವರ. ಡಾ ಮುತ್ತನ ಕೋಪದ. ಬಸವರಾಜ ಯಾದವಾಡ. ಜೆ ಡಿ ಗೊಂಡ್ಲೊರ. ಎಮ್ ವಿ ಬಿರಾದಾರ. ಬಿ ವಾಯ್ ಮುಲ್ತಾನಿ. ಇನಿತರು ತಾಲ್ಲೂಕ ಮಟ್ಟದ ಅಧಿಕಾರಿಗಳು ಇದ್ದರೂ.