ಮುಗಳಖೋಡ ಪುರಸಭೆಯಿಂದ ಸ್ಯಾನಿಟೈಸರ್ ವಿತರಣೆ

ಮುಗಳಖೋಡ: ಪಟ್ಟಣದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಪುರಸಭೆವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸ್‌ರ ವಿತರಿಸಲಾಯಿತು. ಈ ವೇಳೆ ಪುರಸಭೆ ಮುಖ್ಯೆ ವ್ಯವಸ್ಥಾಪಕ ಬಿ.ಕೆ.ತವಸಿ ಮಾತನಡಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜನರಿಗೆ ಕರೋನ ಜಾಗೃತಿ ಮೂಡಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮತ್ತು ಪುರಸಭೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
Share
WhatsApp
Follow by Email