ಮುದ್ದೇಬಿಹಾಳ ಪಟ್ಟಣದ ಶಿವಶರಣ ಸಮಗಾರ ಹರಳಯ್ಯಾ ಸಮಾಜದವರಿಂದ ವಿವಿಧ ಬೇಡಿಕೆ ಇಡೆರಿಸುವಂತೆ ಆಗ್ರಹ

ಮುದ್ದೇಬಿಹಾಳ: ಪಟ್ಟಣದ ಶಿವಶರಣ ಸಮಗಾರ ಹರಳಯ್ಯಾ ಸಮಾಜದವರಿಂದ ವಿವಿಧ ಬೇಡಿಕೆ ಇಡೆರಿಸುವಂತೆ ಆಗ್ರಹಿಸಿ ತಹಾಇಲ್ದಾರ ಜಿ ಎಸ್ ಮಳಗಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ದೇಶದಲ್ಲಿ ಕೊರೊನಾ ಹಿನ್ನೇಲೆಯಲ್ಲೆ ಸರಕಾರ ಲಾಕ್ ಡೌನ ಜಾರಿಗೊಳಿಸಿದೆ ಈ ವೇಳೆ ನಿತ್ಯ ಪಾದರಕ್ಷೇ ರೀಪೇರಿ ಹಾಗೂ ತಯಾರಿಕೆ ಮಾಡಿಕೊಂಡು ಕಾಯಕ ಜೀವಿಯಾಗಿ ದುಡಿದು ತಿನ್ನುವ ಶಿವ ಶರಣ ಸಮಗಾರ ಹರಳಯ್ಯಾ ಸಮೂದಾಯ ಕಳೇದ ಒಂದು ತಿಂಗಳಿAದ ಲಾಕ್ ಡೌನ ಆದೇಶದನ್ವಯ ತಲೇಮಾರಿನಿಂದ ವಂಶ ಪಾರಂಪರಗತವಾಗಿ ಮುನ್ನಡೆಸಿಕೊಂಡು ಬಂದ ಪಾದರಕ್ಷೇ ರೀಪೇರಿ ಹಾಗೂ ತಯಾರಿಕೆ ಉದ್ಯೋಗವನ್ನು ಸಧ್ಯ ನಿಲ್ಲಿಸಲಾಗಿದೆ ಇದರಿಂದಾಗಿ ಈ ವೃತ್ತಿಯನ್ನೇ ನಂಬಿ ಬದುಕುತ್ತಿರುವ ಹರಳಯ್ಯಾ ಸಮೂದಾಯ ತೀರಾ ನೂರಾರು ಕುಟುಂಭಗಳು ಸಂಕಷ್ಟ ಸ್ಥಿತಿಯಲ್ಲಿದೇ.
ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ವಾತಾವರಣ ನಿರ್ಮಾಣಗೊಂಡಿದೆ ಕಾರಣ ರಾಜ್ಯ ಸರಕಾರ ಈ ಕೂಡಲೇ ನಮ್ಮ ಶಿವಶರಣ ಹರಳಯ್ಯಾ ಸಮಾದಾಯಕ್ಕೆ ಪ್ರತ್ಯೇಕ ಅನುದಾನ ಬಿಡುಗಡೆಗೊಳಿಸುವ ಮೂಲಕ ಆರ್ಥಿಕ ನೆರವು ನೀಡಿ ನಮ್ಮನ್ನು ಕಷ್ಟದಿಂದ ಪಾರು ಮಾಡಬೇಕು ಇಲ್ಲವೆಂದರೇ ಘೋರ ಆನ್ಯಾಯ ಮಾಡಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ಶಿವ ಶರಣ ಸಮಗಾರ ಹರಳಯ್ಯಾ ಸಮಾಜದ ಸಂಘದ ಅಧ್ಯಕ್ಷ ಭಗವಂತ ಕಬಾಡೆ, ಉಪಾಧ್ಯಕ್ಷ ಹಣಮಂತ ಕುಂದರಗಿ, ಗೌರವಾಶಧ್ಯಕ್ಷ ಅಂಬಾಜಿ ಕಬಾಡೆ, ಖಜಾಂಚಿ ಮಂಜುನಾ ಕುಂದರಗಿ, ಕಾರ್ಯದರ್ಶಿ ಪರಶುರಾಮ ಶಿಂಧೆ, ಸಹಕಾರ್ಯದರ್ಶಿ ರಾಘವೇಂದ್ರ ಕುಂದರಗಿ ಸೇರಿದಂತೆ ಮತ್ತಿತರರು ಇದ್ದರು.
Share
WhatsApp
Follow by Email