ಬ್ರೇಕಿಂಗ್ ನ್ಯೂಸ್ ಲಾಕ್‌ಡೌನ ಉಲ್ಲಂಘಿಸಿ ಗುಂಪಾಗಿ ತಿರುಗಾಡುತ್ತಿದ್ದ ಯುವಕರಿಗೆ ತಿಳಿಹೇಳಲುಹೋದ ಅಬಕಾರಿ ಇಲಾಖೆ ಉಪನಿರೀಕ್ಷಕಿ ಮೇಲೆ ಹಲ್ಲೆ 20/04/202020/04/20201 min read admin ಜಮಖಂಡಿ: ಲಾಕ್‌ಡೌನ ಉಲ್ಲಂಘಿಸಿ ಗುಂಪು ಗುಂಪಾಗಿ ತಿರುಗಾಡುತ್ತಿದ್ದ ಯುವಕರಿಗೆ ತಿಳಿಹೇಳಲುಹೋದ ಅಬಕಾರಿ ಇಲಾಖೆ ಉಪನಿರೀಕ್ಷಕಿ ಮೇಲೆ ತಾಲೂಕಿನ ಹುನ್ನೂರ ಗ್ರಾಮದಲ್ಲಿ ಪುಂಡರ ಗುಂಪೊAದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.ತಾಲೂಕಿನ ಅಬಕಾರಿ ಉಪ ನಿರೀಕ್ಷಕಿ ಸುಹಾಸಿನಿ ಎನ್ನುವವರ ಮೇಲೆ ಹಲ್ಲೆಗೆ ಕಿಡಿಗೇಡಿಗಳು ಮುಂದಾಗಿದ್ದು ಘಟನೆಗೆ ಸಂಬAದಿಸಿದAತೆ ಯುವಕ ಶಂಕರ ಬಳಗಾರ ಎಂಬಾತನ್ನು ಪೋಲಿಸರು ವಿಚಾರಣೆಗೆ ಒಳಪಡಿಸಲಾಗಿದ್ದು ಇನ್ನೂ ಕೆಲವರು ಪರಾರಿಯಾಗಿದ್ದಾರೆ.ಹುನ್ನೂರ ಗ್ರಾಮದ ಹೊರವಲಯದ ಗುಂಡೇಶ್ವರ ದೇವಸ್ಥಾನದ ಬಳಿ ರಾತ್ರಿ ವೇಳೆ ಯುವಕರು ಗುಂಪು ಗುಂಪಾಗಿ ಇದ್ದರು. ಇದನ್ನು ಕಂಡ ಅಬಕಾರಿ ಉಪ ನಿರೀಕ್ಷಕಿ ಲಾಕ್‌ಡೌನ ಇದ್ದು ಮನೆಯಿಂದ ಆಚೆ ಬರಬಾರದು ಎಂದು ಸಲಹೆ ನೀಡಿದ್ದಾರೆ. ಆದರೆ ಪುಂಡರ ಗುಂಪು ಇದು ನಿಮಗೆ ಸಂಬAಧಿಸಿದ ವಿಷಯವಲ್ಲ ನಮಗೆ ಹೇಳಲು ನೀವ್ಯಾರು? ಎಂದು ವಾದಕ್ಕಿಳಿದು ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.ಈ ಸಂದರ್ಭದಲ್ಲಿ ಅಧಿಕಾರಿಯ ಸಹೋದರ ವೈದ್ಯ ಮಧ್ಯ ಪ್ರವೇಶಿಸಿದಕ್ಕೆ ಅವರ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಅಬಕಾರಿ ಇಲಾಖೆ ಉಪನಿರೀಕ್ಷಕಿ ಪೋಲಿಸರಿಗೆ ಮೌಖಿಕವಾಗಿ ದೂರು ನೀಡಿದ್ದಾರೆ.ಈ ಪುಂಡರ ವರ್ತನೆಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.್ದ ಇಂಥವರ ದುರ್ವರ್ತಣೆಗೆ ಕೊನೆ ಯಾವಾಗ?? Share