
ನಗರದ ಗಿರೀಶ ನಗರ ಮತ್ತು ರಾಮೇಶ್ವರ ಕಾಲನಿಯಲ್ಲಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆ ಸವಿತಾ ಸಿದ್ರಾಮ ಹೊಳೆಪ್ಪಗೊಳ ಅವರಿಗೆ ಅವಾಚ್ಯ ಶಬ್ದಗಳ ನಿಂದನೆ ಮತ್ತು ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆರೋಪಿಗಳಾದ ಅಬ್ದುಲರಜಾಕ್ ಲಾಲಸಾಬ. ಗೋಮರ್ಶೆ, ಚಾಂದಸಾಬ ಲಾಲಸಾಬ. ಗೋಮರ್ಶೆ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದು ಪ್ರಕರಣ ಧಾಖಲಿಕೊಂಡಿದ್ದಾರೆ.
ಘಟನೆಯ ವಿವರ:
ಆಶಾ ಕಾರ್ಯಕರ್ತೆ ಗೀರಿಶ ನಗರ ಮತ್ತು ರಾಮೇಶ್ವರ ಕಾಲನಿಯಲ್ಲಿ ಮನೆ ಮನೆಗಳಿಗೆ ಭೆಟ್ಟಿ ಕೊಟ್ಟು ಕೊರೊನಾ ವೈರಸ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆರೋಪಿತರ ಕುಟುಂಭದ ಮಾಹಿತಿ ಪಡೆದುಕೊಂಡು ಆರೋಗ್ಯದ ಬಗ್ಗೆ ವಿಚಾರಿಸುತ್ತಿರುವಾಗ ಆರೋಪಿತರು ನಿಮ್ಮ ಹತ್ತಿರ ಏನು ದಾಖಲೆಗಳಿವೆ. ನಾವು ಮಾಹಿತಿ ಕೊಡುವದಿಲ್ಲ, ನಿಮ್ಮ ಐಡಿ ತೋರಿಸಿ ಎಂದು ಬೆದರಿಸಿ ಮಾಹಿತಿ ತುಂಬಿದ ದಾಖಲೆಗಳನ್ನು ಕಸಿದುಕೊಂಡು ಗೀಚು ಹಾಕಿ ಇಲ್ಲಿಂದ ಹೊಗುತ್ತಿರೋ ಇಲ್ಲೋ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಇನ್ನೊಮ್ಮೆ ಇಲ್ಲಿ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವದಿಲ್ಲಾ ಎಂದು ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.
ಕೋಟ್
ಕೋವಿಡ್-19 ಕಾರ್ಯ ನಿರ್ವಹಿಸುತ್ತಿರುವ ಪೋಲಿಸ, ಆಶಾ, ಆರೋಗ್ಯ ಸಿಬ್ಬಂದಿಗಳ ಕರ್ತವ್ಯಕ್ಕೆ ಯಾರಾದರು ಅಡ್ಡಿ ಪಡಿಸಿದರೆ ಅಂತವರ ಮೇಲೆ ನಿರ್ದಾಕ್ಷಣ್ಯವಾಗಿ ಕಠೀಣ ಕ್ರಮ ಕೈಗೊಳ್ಳಲಾಗುವದು ಮತ್ತು ಪ್ರಕರಣ ಧಾಖಲಿಸಿ ಕಠೀಣ ಶಿಕ್ಷೆಗೊಳಪಡಿಸಲಾಗುವದು.
ಆಶಾ ಕಾರ್ಯಕರ್ತೆಯರು ಯಾವುದೆ ಭಯದಲ್ಲಿ ಕಾರ್ಯನಿರ್ವಹಿಸದಿರಿ ಸರಕಾರವೇ ನಿಮ್ಮ ರಕ್ಷಣೆಗೆ ಇದೆ. ನೀವು ಧೈÀರ್ಯವಾಗಿ ಕಾರ್ಯನಿರ್ವಹಿಸಿ, ಯಾವುದೇ ಇಂತಹ ಘಟಣೆಗಳು ಮರುಕಳಿಸಿದರೆ ನಮ್ಮ ಗಮನಕ್ಕೆ ತರಬೇಕು. ಆರೋಗ್ಯ ಇಲಾಖೆ ಇವರಿಗೆ ಸಂಪೂರ್ಣ ಸಹಕಾರ ನೀಡಬೇಕು.
**ಡಾ. ಸಿದ್ದು ಹುಲ್ಲೊಳ್ಳಿ. ಆಮಖಂಡಿ ಉಪವಿಭಾಗಾಧಿಕಾರಿ.