
ಕಿಣೆಯ ಗ್ರಾಮದ ಬಳಿ ಬೋಲೆರೋ ಗೂಡ್ಸ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೆಳಗಾವಿ ತಾಲೂಕಿನ ಬಸರಿಕಟ್ಟಿಯ ಪ್ರಮೋದ ಸಿದ್ದರಾಯಿ ನಾಗರೋಳಿ(20), ಅಮೋಲ್ ರಾಜು ಪೂಜೇರಿ(28) ಎಂಬುವರನ್ನು ಬಂದಿಸಿದ ಪೋಲಿಸರು ಅವರಿಂದ ರೂ.4655. ಮೌಲ್ಯದ ವಿವಿಧ ಕಂಪನಿಯ ಮಧ್ಯ ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ.
ಅದರಂತೆ ಪಿರನವಾಡಿ ನಾಕಾಬಳಿ ವಾಹನದಲ್ಲಿ ಅಕ್ರಮವಾಗಿ ಮಧ್ಯ ಸಾಗಿಸುತಿದ್ದ ರಾಯಬಾಗ ತಾಲೂಕಿನ ಹಾರೂಗೇರಿಯ ಮಹಾದೇವ ಮಾರುತಿ ಗಾಣಿಗೇರ(32), ಪಾಲಬಾಂವಿ ಗ್ರಾಮದ ಬಾಳೇಶ ಭರಮಪ್ಪ ತಳವಾರ (30) ಅಳಗವಾಡಿಯ ಶಾನೂರ ರಾಜು ಗಾಡಿವಡ್ಡರ ಬಂದಿತ ಆರೋಪಿಗಳು ಇವರಿಂದ 10.980 ರೂ ಮೌಲ್ಯದ ವಿವಿಧ ಕಂಪನಿ ಮಧ್ಯದ ಬಾಟಲಿಗಳನ್ನು ಹಾಗೂ ವಾಹನ ಜಪ್ತಿ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೋಲಿಸ ಠಾಣೆ ಇನ್ಸ್ಪೆಕ್ಟರ ಸುನೀಲಕುಮಾರ ನಂದೇಶ್ವರ ನೇತೃತ್ವದಲ್ಲಿ ದಾಳಿಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರತ್ಯೆಕ ಪ್ರಕರಣಗಳು ದಾಖಲಾಗಿವೆ.
ವದರಿ: ಸಿ.ಎಸ್. ಹೀರೆಮಠ