ಬೆಳಗಾವಿ ಜಿಲ್ಲೆಯಲ್ಲಿ ತಬ್ಲೀಕಿ ಹೊರತು ಪಡಿಸಿ ಮೊದಲ ಬಾರಿ 2 ಕೇಸ್ ಪತ್ತೆ..51ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

ಮಹಾಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಮತ್ತೆ ಇಂದು ಹಿರೇಬಾಗೇವಾಡಿಯಲ್ಲಿ ಹೊಸದಾಗಿ 6 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹಾಫ್ ಸೆಂಚೂರಿ ಗಡಿ ದಾಟಿದ್ದು. ಕುಂದಾನಗರಿ ಜನರನ್ನು ಬೆಚ್ಚಿ ಬೀಳಿಸಿದೆ.
ಹೌದು ಇಷ್ಟು ದಿನ ಹಿರೇಬಾಗೇವಾಡಿ ಹಾಗೂ ಕುಡಚಿಯಲ್ಲಿ ತಬ್ಲೀಕಿಗಳಿಗೆ ಮಾತ್ರ ಸಿಮೀಮತವಾಗಿದ್ದ ಕೊರೊನಾ ವೈರಸ್ ಇಂದು ಹಿರೇಬಾಗೇವಾಡಿ ಗ್ರಾಮದ ನಿವೃತ್ತ ಪೊಲೀಸ್ ಪೇದೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಓರ್ವರಿಗೆ ಸೋಂಕು ಹರಡುವ ಮೂಲಕ ಬಿಗ್ ಶಾಕ್ ನೀಡಿದೆ. ತಬ್ಲೀಕಿಗಳನ್ನು ಹೊರತು ಪಡಿಸಿ ಮೊದಲ ಬಾರಿಗೆ 2 ಕೇಸ್‍ಗಳು ಕಂಡು ಬಂದಿದ್ದು ಕುಂದಾನಗರಿ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು 51ಕ್ಕೆ ಏರಿಕೆ ಆದ್ರೂ ಕೂಡ ಜಿಲ್ಲಾಡಳಿತ ಲಾಕ್‍ಡೌನ್ ಸಡಿಲಿಕೆ ಮಾಡಿದ್ದು ಎಷ್ಟು ಸೂಕ್ತ ಎಂಬ ಪ್ರಶ್ನೆಗಳು ಸಧ್ಯ ಎಲ್ಲರನ್ನು ಕಾಡುತ್ತಿದ್ದು. ಈ ಆಘಾತಕಾರಿ ಬೆಳವಣಿಗೆ ಇಂದಾದ್ರೂ ಎಚ್ಚೆತ್ತುಕೊಂಡು ಇನ್ನಷ್ಟು ಕಠಿಣ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳುತ್ತಾ ಎಂದು ಕಾಯ್ದು ನೋಡಬೇಕಿದೆ.
Share
WhatsApp
Follow by Email