
ಪಟ್ಟಣ ಪಂಚಾಯ್ತಿ ಸದಸ್ಯೆ ಲಕ್ಷ್ಮೀ ಗಡ್ಡೆ ಅವರು 18ನೇ ವಾರ್ಡಿನ ಎಲ್ಲಾ ಜನರಿಗೆ ಕಾಯಿಪಲ್ಲೆ ಚೀಲಗಳನ್ನು ವಿತರಿಸಿ ಮಾತನಾಡಿ ಕೊರೋನಾ ಮಹಾಮಾರಿಯನ್ನು ಒಡಿಸಲು ಪ್ರತಿಯೊಬ್ಬರು ಸರಕಾರ ಆದೇಶದ ಲಾಕ್‌ಡೌನ್‌ವನ್ನು ಕಡ್ಡಾಯವಾಗಿ ಪಾಲಿಸಬೇಕು ಅಂದಾಗ ಮಾತ್ರ ಕೊರೋನಾ ರೋಗವನ್ನು ಹತೋಟಿಗೆ ತರಲು ಸಾಧ್ಯವಿದೆ. ಲಾಕಡೌನ್ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಆಗುವು ತೊಂದರೆಯನ್ನು ಕಂಡು ನಾವು ಜನರಿಗೆ ವಿವಿಧ ಕಾಯಿಪಲ್ಲೆಗಳನ್ನೋಳಗೊಂಡ ಚೀಲಗಳನ್ನು ಮಾಡಿ ಈ ವಾರ್ಡಿನ ಎಲ್ಲಾ ಜನರಿಗೆ ನೀಡಿದ್ದೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ನ್ಯಾಯವಾಧಿ ಬಿ.ಎಸ್.ಗಡ್ಡೆ, ಪ.ಪಂ.ಸದಸ್ಯೆ ಲಕ್ಷಿö್ಮÃ ಗಡ್ಡೆ, ಅಪ್ಪು ಗಡ್ಡೆ, ಎಪಿಎಂಸಿ ಅಧ್ಯಕ್ಷ ಹಾಲಪ್ಪ ವಂಟಮೂರೆ, ಗ್ರಾ.ಪಂ.ಅಧ್ಯಕ್ಷ ಮಹಾದೇವ ಕೋಕಾಟೆ, ಹಣಮಂತ ಸಾನೆ, ವಸಂತ ಗಡ್ಡೆ, ಪ್ರಕಾಶ ಚವ್ಹಾಣ, ಮೈಬೂಬ ಶೇಖ ಸೇರಿದಂತೆ ಅನೇಕರು ಇದ್ದರು.