ಮಹಾವೀರ ಆರೋಗ್ಯ ಸೇವಾ ಸಂಘದಿಂದ ತ್ರತೀಯ ಲಿಂಗಿಗಳಿಗೆ ಆಹಾರ ಸಾಮಗ್ರಿ ವಿತರಣೆ

ಚಿಕ್ಕೋಡಿ :- ಬೆಳಗಾವಿ ಜಿಲ್ಲೆಯ ನಿಪ್ಪಾಣಿ
 ಪಟ್ಟಣದ ಮಾಸ್ಕ್ ಗ್ರೂಪ್ ನಡೆಸುತ್ತಿರುವ ಮಹಾವೀರ ಆರೋಗ್ಯ ಸೇವಾ ಸಂಘದ ವತಿಯಿಂದ ನಿಪ್ಪಾಣಿ ಪಟ್ಟಣದ ತ್ರತೀಯ ಲಿಂಗಿಗಳಿಗೆ ನಗರಸಭೆ ಪೌರಾಯುಕ್ತ ಮಹಾವೀರ. ಬೋರಣ್ಣವರ ಆಹಾರ ಸಾಮಗ್ರಿ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡಿದರು. ಮತ್ತು ಮಾಸ್ಕ ಗ್ರೂಪ್ ನ ಅಧ್ಯಕ್ಷ ಪ್ರಕಾಶ.ಶಾಹ ಹಾಗೂ ಸದಸ್ಯರು ಆಹಾರದ ಸಾಮಗ್ರಿಗಳನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿತರಿಸಿದರು ಈ ಹಿಂದೆ ನಮ್ಮ ಸಮಾಜದ ಅಗತ್ಯವಿರುವ ನಾಗರಿಕರಿಗೆ ಪಡಿತರ,ವಸ್ತು, ಮುಖವಾಡ ಮತ್ತು ಸ್ಯಾನಿಟೈಜರ್‌ಗಳನ್ನು ವಿತರಿಸಿದ್ದು ಈಗಾಗಲೇ
ಲಾಕ್‌ಡೌನ್‌ನಿಂದಾಗಿ ಬಡವರಿಗೆ ಕೆಲಸ ಮಾಡಲು ಸಾಧ್ಯವಾಗುತಿಲ್ಲ ಆದ್ದರಿಂದ ಅವರ ಪರಿಸ್ಥಿತಿ ಹದಗೆಡುತ್ತಿದೆ ಪ್ರಕಾಶ. ಶಾಹಾ ಸಂಸ್ಥೆಯು ಜಾರಿಗೊಳಿಸುತ್ತಿರುವ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. “ನಾನು ನಿಜವಾಗಿಯೂ ಸಮಾಜ ಕಾರ್ಯ ಮಾಡಲು ಹೆಮ್ಮೆಪಡುತ್ತೇನೆ” ಎಂದು ಅವರು ಹೇಳಿದರು.

ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಜನರು ಹೊರಗಡೆ ಕೆಲಸಕ್ಕೆ ಹೋಗದೆ ಕಾರಣ
ಕಳೆದ ಎರಡು ಮೂರು ತಿಂಗಳಗಳಿಂದ ಸಮಾಜದ ಸೇವೆಯಲ್ಲಿ ನಿರತರಾಗಿರುವ ಮಾಹಾವಿರ ಆಸ್ಪತ್ರೆಯು ನಿಪ್ಪಾಣಿ ನಗರದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮಾಸ್ಕ ವಿತರಣೆ ಕಡು ಬಡವರಿಗೆ ರೇಷನ ವಿತರಣೆ ಮಾಡುವ ಮೂಲಕ ನಮ್ಮ ನಗರಕ್ಕೆ ತುಂಬಾ ಸಹಾಯ ಮಾಡಿದ್ದಾರೆ ನಮ್ಮ ನಗರ ಸಭೆಯ ವತಿಯಿಂದ ಸರ ನಮ್ಮ ಸಾರ್ವಜನಿಕರಿಗೆ ಯಾವುದಾದರೂ ಒಂದು ಸಮಸ್ಯೆ ಇದೆ ಎಂದು ಹೇಳಿದರೆ ಸಾಕು ಅದಕ್ಕೆ ತಕ್ಷಣ ಸಹಾಯ ಮಾಡುತ್ತಾರೆ ಎಂದು ನಗರ ಸಭೆಯ ಪೌರಾಯುಕ್ತ ಮಾಹಾವಿರ ಬೊರನ್ನವರ ಸಂತೋಷ ವ್ಯಕ್ತಪಡಿಸಿದರು .

ಈ ಸಂಧರ್ಭದಲ್ಲಿ ಸಂಸ್ಥೆಯ
  ಅಧ್ಯಕ್ಷ ಪ್ರಕಾಶ. ಶಾಹಾ, ಉಪಾಧ್ಯಕ್ಷ ಸತೀಶ.ವಕಾರಿಯಾ ಕಾರ್ಯದರ್ಶಿ ಪ್ರತೀಕ್ ಶಾಹಾ, ಮಿಲಿಂದ. ಮೆಹ್ತಾ, ರಾಜೇಶ. ಶಾ, ಸುಗಮ ಚವಾನ, ಸುಜಿತ. ಸ್ವಾಮಿ, ಜವಾಹರ. ಶಾಹಾ, ಸಾಗರ್ ಶಾಹಾ, ಸಂದೀಪ.ಮಾನೆ,ರಾಜು. ಮೆಹ್ತಾ ಮುಂತಾದವರ ಉಪಸ್ಥಿತಿಯ
ಲ್ಲಿ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದರು

Share
WhatsApp
Follow by Email