ಪಾಲಘಡ ಘಟನೆ ಖಂಡಿಸಿ ರಾಯಬಾಗಲ್ಲಿ ಉಪವಾಸ ಸತ್ಯಾಗ್ರಹ

ಪಾಲಘಡ ಘಟನೆ ಖಂಡಿಸಿ ರಾಯಬಾಗಲ್ಲಿ ಉಪವಾಸ ಸತ್ಯಾಗ್ರಹ

ರಾಯಬಾಗ : ಹಿಂದೂ ಧರ್ಮ ಆಚಾರ್ಯಸಭಾ ಮತ್ತು ವಿಶ್ವಹಿಂದೂ ಪರಿಷತ್ತ ಕರೆಕೊಟ್ಟ ಹಿನ್ನಲೆಯಲ್ಲಿ ಮಹಾರಾಷ್ಟçದ ಪಾಲಘಡದಲ್ಲಿ ಹಿಂದೂ ಸಾಧು ಸಂತರನ್ನು ಕ್ರೆöÊಸ್ತ ಮಿಷನರಿಗಳು ಪೈಶಾಚಿಕವಾಗಿ ಅಮಾನವಿಯ ರೀತಿಯವಾಗಿ ಕೊಂದು ಹಾಕಿದ ಹೀನಕೃತ್ಯವನ್ನು ಖಂಡಿಸಿ ಮಂಗಳವಾರ ಪಟ್ಟಣದ ಶಿವಾಜಿ ಪಾರ್ಕದ ಮಾಚಕನೂರ ಹಾಗೂ ಬಾಗಿ ಕುಟುಂಬದವರು ತಮ್ಮ ತೋಟದ ಮನೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.
ಮಹಾರಾಷ್ಟçದ ಪಾಲಘಡದಲ್ಲಿ ಇತ್ತಿಚಿಗೆ ಹಿಂದೂ ಸಾಧು ಸಂತರಾದ ಪೂಜ್ಯಶ್ರೀ ಕಲ್ಪವೃಕ್ಷಗಿರಿ ಮಹಾರಾಜರು ಹಾಗೂ ಪೂಜ್ಯಶ್ರೀ ಸುಶೀಲಗಿರಿ ಮಹಾರಾಜರನ್ನು ವಸಾಹತು ಶಾಹಿ ಕ್ರೆöÊಸ್ತ ಮಿಷನರಿಗಳು ನಕ್ಸಲರ ಹೆಸರಿನಲ್ಲಿ ಪೈಶಾಚಿಕವಾಗಿ ಹೊಡೆದು ಸಾಯಿಸಿದ ಹೀನಕೃತ್ಯವನ್ನು ಖಂಡಿಸಿ ಮಾಚಕನೂರ ಕುಟುಂಬದವರು ತಮ್ಮ ತೋಟದ ಮನೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಇಂತಹ ಹೀನಕೃತ್ಯ ಎಸಗಿದ ಎಲ್ಲರ ಮೇಲೂ ಮಹಾರಾಷ್ಟç ಸರಕಾರ ಮೇಲೆ ಸೂಕ್ತ ಕ್ರಮಕೈಗೊಂಡು ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನು ಗಲ್ಲು ಶಿಕ್ಷೆಗೆ ಗುರಿಮಾಡಬೇಕು ಮತ್ತು ಮತ್ತೆಂದೂ ದೇಶದಲ್ಲಿ ಇಂತಹ ಹೀನ ಕೃತ್ಯ ನಡೆಯದಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಎಚ್ಚರವಹಿಸಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಏಕನಾಥ ಮಾಚಕನೂರ, ಭರಮಾ ಮಾಚಕನೂರ, ಅನ್ನಪೂರ್ಣಾ ಬಾಗಿ, ರೂಪಾ ಮಾಚಕನೂರ, ಸುಜಾತಾ ಮಾಚಕನೂರ, ವಿಠ್ಠಲ ಬಾಗಿ, ಕಸ್ತೂರಿ ಮಾಚಕನೂರ, ಮಂಜುಳಾ ಬಾಗಿ, ಸೇರಿದಂತೆ ಮಾಚಕನೂರ ಕುಟುಂಬದವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೋಂಡಿದ್ದರು.
Share
WhatsApp
Follow by Email