ಬ್ರೇಕಿಂಗ್ ನ್ಯೂಸ್ ಎ ಎಸ್ ಪಾಟೀಲ(ನಡಹಳ್ಳಿ) ನಡಹಳ್ಳಿಯಿಂದ ಮುಖ್ಯಮಂತ್ರಿ ಬಿ ಎಸ್ ವೈ ಗೆ ಪತ್ರ 30/04/202030/04/2020 admin ಮುದ್ದೇಬಿಹಾಳ: ದೇಶದಾದ್ಯಂತ ಕೊರೊನಾ ಲಾಕ್ ಡೌನ ಹಿನ್ನೇಲೆಯಲ್ಲಿ ವಿಜಯಪುರ ಜಿಲ್ಲೇ ಮುದ್ದೇಬಿಹಾಳ ಮತಕ್ಷೇತ್ರದ ಈಗಾಗಲೇ ಗೋವಾ, ಮಹಾರಾಷ್ಟç, ಕೆರಳ ಆಂದ್ರ ಸೇರಿದಂತೆ ಇತರೇ ಅಂತರಾಜ್ಯದಲ್ಲಿ ಕೂಲಿ ಕೆಲಸಕ್ಕೆಂದು ಗುಳೆ ಹೊಗಿ ವಾಪಸ್ ಬರಲು ಸಾಧ್ಯವಾಗದೇ ಒಂದು ಹೊತ್ತು ಊಟಕ್ಕೂ ಪರದಾಡುವಂತ ಸ್ಥಿತಿಗತಿಯಲ್ಲಿರುವ ಕಾರಣ ಅವರನ್ನು ನನ್ನ ಮತಕ್ಷೇತ್ರ ಆಯಾ ಗ್ರಾಮಗಳ ಕಾರ್ಮಿಕರನ್ನು ಅವರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುವ ಮೂಲಕ ಅವರವರ ಮನೆಗೆ ತಲುಪಿಸುವುದು ಶಾಸಕನಾಗಿ ನನ್ನ ಜವಾಬ್ಧಾರಿಯೂ ಕೂಡ ಆಗಿದೆ. ತಾಲೂಕಿನ ಸುಮಾರು 8ರಿಂದ 10 ಸಾವಿರ ಕಾರ್ಮಿಕರು ಸ್ಥಳಿಯ ಶಾಸಕನಾಗಿದ್ದರಿಂದ ನಿತ್ಯ ನಿರಂತರ ನೂರಾರು ಜನ ದೂರವಾಣಿ ಮೂಲಕ ತಮ್ಮ ನೋವನ್ನು ಅಳಲನ್ನು ನನ್ನೊಂದಿಗೆ ತೊಂಡಿದ್ದಾರೆ ಕಾರಣ ಅವರನ್ನೇಲ್ಲ ವಾಪಸ್ ಕರೆ ತರುವಲ್ಲಿ ಅವಕಾಶ ಕಲಿಸಬೇಕು ಜೊತೆಗೆ ಅವರ ಆರೋಗ್ಯ ತಪಾಸಣೆ ನಡೆಸುವ ಮೂಲಕ ಆಯಾ ರಾಜ್ಯಗಳಲ್ಲಿನ ಸರಕಾರ ಅಲ್ಲಿಂದಲೇ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕೈಗೊಳ್ಳುವಂತೆ ಅನುಮತಿ ನೀಡಬೇಕು ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಬುಧುವಾರ ಪತ್ರ ಬರೆದಿದ್ದಾರೆ Share