
ಅರಟಾಳ ; ಭಗೀರಥ ಮಹಾರಾಜನಿಗೆ ಸಕಲ ವೈಭವಗಳಿದ್ದರೂ ಒಂದು ಕೊರಗಿತ್ತು. ಅವನ ತಂದೆ ತಾಯಂದಿರು ದೇವಗಂಗೆಯನ್ನು ಪಡೆಯಬೇಕು ಎನ್ನುವ ಅವರ ಆಸೆಯನ್ನು ಇಡೆರಿಸಲು ದೇವಗಂಗೆ ಕುರಿತು ತಪ್ಪಸು ಮಾಡಿದರು. ದೇವಗಂಗೆ ಪ್ರತ್ಯಕ್ಷವಾಗಿ ವರ ನೀಡಿದಳು ಎಂದು ತಾಪಂ ಸದಸ್ಯ ಶಿವಪ್ಪ ಹಟ್ಟಿ ಹೇಳಿದರು.
ಅವರು ಗುರುವಾರ ಸ್ಥಳೀಯ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಭಗೀರಥ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಗೀರಥರು ತೊಂಬತ್ತೊAತ್ತು ಅಶ್ವಮೇಧ ಯಾಗಗಳನ್ನು ಮಾಡಿ ಮಹಾನ್ ಶಕ್ತಿ ಅವರದು. ಅಂದಿನಿAದ ಭೂಮಿಯಲ್ಲಿ ನೀರಿನ ಕೊರತೆಯಾಗಲ್ಲಿಲ್ಲ. ಭೂಮಿಗೆ ಗಂಗೆಯನ್ನು ಬರುವಂತೆ ಮಾಡಿ ಜನರ ಕಷ್ಟವನ್ನು ಪರಿಹರಿಸಿದರು ಎಂದರು.
ತಾಪA ಸದಸ್ಯ ಶಿವಪ್ಪ ಹಟ್ಟಿ ಮತ್ತು ಈಶ್ವರಲಿಂಗ ಕಲಘಟಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯದರ್ಶಿ ಜಿತೇಂದ್ರ ಗದಾಡೆ, ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಪ್ಪ ಪೂಜಾರಿ, ಗ್ರಾಪಂ ಸದಸ್ಯ ಹಣಮಂತ ಪೂಜಾರಿ, ಮಾಳಪ್ಪ ಮಾದರ, ಕಾಸಪ್ಪ ಮಾದರ, ಮಹಾದೇವ ಮಾದರ ಇದ್ದರು