ಎನ್ 95 ಮಾಸ್ಕ್ ಹಾಗೂ ದಿನಸಿ ಆಹಾರ ಸಾಮಾಗ್ರಿಗಳ ಕಿಟ್‌ಹಾಗೂ ಬೆಳಗಿನ ಉಪಹಾರ ನೀಡಿದ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)

ಎನ್ 95 ಮಾಸ್ಕ್ ಹಾಗೂ ದಿನಸಿ ಆಹಾರ ಸಾಮಾಗ್ರಿಗಳ ಕಿಟ್‌ಹಾಗೂ ಬೆಳಗಿನ ಉಪಹಾರ ನೀಡಿದ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)

ಮುದ್ದೇಬಿಹಾಳ: ತಮ್ಮ ಜೀವವನ್ನೇ ಒತ್ತೇ ಇಟ್ಟು ಮನೆ ಮನೆಗೆ ತೆರಳಿ ಪ್ರತಿಯೊಬ್ಬ ಕುಟುಂಭವರ ಮಾಹಿತಿ ಕಲೆ ಹಾಕುವ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮುಡಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೈನಿಕರಂತೆ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೇಯರಿಗೆ ಇಗೀರುವ ಸಂಬಳವನ್ನು ಏರಿಕೆ ಮಾಡಬೇಕೆಂದು ಸರಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಅವರು ಹೇಳಿದರು.
ಪಟ್ಟಣ ಎಂ ಜಿ ವಿ ಸಿ ಕಾಲೇಜ ಆವರಣದಲ್ಲಿ ಮಂಗಳವಾರ ಕೋರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ತಾಲೂಕಾ ವೈದ್ಯಾಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಉಚಿತ ಗುಣಮಟ್ಟ ಎನ್ 95 ಮಾಸ್ಕ್ ಹಾಗೂ ದಿನಸಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡಿದ ಅವರು.
ಈಗಾಗಲೇ ಇಲ್ಲಿಯವರೆಗೆ ಮುದ್ದೇಬಿಹಾಳ ತಾಲೂಕಿನಲ್ಲಿ ಒಂದೇ ಒಂದು ಕೊರೊನಾ ಸೊಂಕು ಹರಡದಂತೆ ಮುಂಜಾಗೃತಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಕೀರ್ತಿ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೇಯರಿಗೆ, ತಾಲೂಕಾ ಆರೋಗ್ಯ ಇಲಾಖೆ ವೈದ್ಯರಿಗೆ, ಸಿಬ್ಬಂದಿಗಳಿಗೆ, ಪೋಲಿಸ್ ಇಲಾಖೆಯವರಿಗೆ ಪುರಸಭೆ ಪೌರ ಕಾರ್ಮಿಕರಿಗೆ ಒಂದು ಸೆಲ್ಯೂಟ್ ಹೊಡೆದು ಅಭಿನಂದಿಸುತ್ತೇನೆ.
ನಮ್ಮ ಮತಕ್ಷೇತ್ರದಿಂದ ಕರ್ನಾಟಕದ ಇತರೇ ವಿವಿಧ ಜಿಲ್ಲೇಗಳಿಗೆ ಉದ್ಯೋಗಕ್ಕಾಗಿ ತೆರಳಿ ನೆಲಸಿರುವ ಕೂಲಿ ಕಾರ್ಮಿಕರನ್ನು ನಮ್ಮ ಮತಕ್ಷೇತ್ರಕ್ಕೆ ಬರುವ ಆಸೆಯಲ್ಲಿ ಆತುರದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನೇಲ್ಲ ಕರೆದುಕೊಂಡು ಬಂದು ಕೊರೊನಾ ಲಾಕ್ ಡೌನ ಹಿನ್ನೇಲೆಯಲ್ಲಿ ತುಂಬಾ ಕಷ್ಟದಲ್ಲಿರುವ ಅವರ ಆರೋಗ್ಯ ಮತ್ತು ಜೀವದ ರಕ್ಷಣೆ ನೀಡುವ ಮೂಲಕ ಊಟ ಕೊಟ್ಟು ರಕ್ಷೀಸುವುದು ನಮ್ಮೇಲ್ಲ ಮಹತ್ತರ ಜವಾಬ್ದಾರಿಯಾಗಿದೆ.
ಹಾಗಾಗಿ ಅಂತಹವರನ್ನು ಕರೆತರುವಲ್ಲಿ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡಿದ್ದಲ್ಲದೇ ಪರವಾನಿಗೆ ನೀಡಿದೆ ಈಗಾಗಲೇ ಬೆರೆ ಬೆರೆ ಜಿಲ್ಲೆಯಲ್ಲಿರುವ ನಮ್ಮ ಮತಕ್ಷೇತ್ರದ ಕಾರ್ಮಿಕರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಈಗಾಗಲೇ ಎಲ್ಲ ರೀತಿಯ ಸಿದ್ದತೆ ಕ್ರಮ ಕೈಗೊಳ್ಳಲಾಗಿದೆ.ಅದರಂತೆೆ ಕರ್ನಾಟಕ ರಾಜ್ಯದಿಂದ ಗೋವಾ, ಮಾಹಾರಾಷ್ಟç , ಪುನಾ, ಆಂದ್ರ, ಕೇರಳದಂತ ಅಂತರ ರಾಜ್ಯದಲ್ಲಿ ನೆಲೆಸಿರುವ ಕಾರ್ಮಿಕರ ರಕ್ಷಣೆಯೂ ಕೂಡ ಅಷ್ಟೇ ಮುಖ್ಯವಾಗಿದೆ ಕಾರಣ ಸರಕಾರ ಆದೇಶವನ್ನು ಪಡೆದು ಅವರನ್ನು ಕೂಡ ಮತಕ್ಷೇತ್ರಕ್ಕೆ ಕರೆತಂದು ಅವರ ಆರೋಗ್ಯ ತಪಾಸಣೆ, ಉಚಿತ ಆಹಾದಾನ್ಯಗಳ ಸಾಮಗ್ರಿಗಳ ಕಿಟ್ ನೀಡಲಾಗುವುದು.
ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೇಯರು ತಾವು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ವೇಳೆ ಯಾವನಾದರು ಅವಿವೇಕಿಗಳು ಅವರ ಮೇಲೆ ಹಲ್ಲೇ ಮಾಡುವುದಾಗಲಿ ಅಥವಾ ಅಪಮಾನ ಮಾಡುವುದಾಗಲಿ ಘಟನೆಗಳನ್ನು ಕಂಡು ಬಂದರೇ ತಕ್ಷಣವನೇ ನಿರ್ದಾಕ್ಷಣ್ಯವಾಗಿ ಅಂತಹವರನ್ನು ಹಿಡಿದು ಜೈಲಿಗೆ ಕಳಿಸುವ ಕಾರ್ಯ ಪೋಲಿಸ್ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಸಿಪಿಐ ಆನಂದ ವಾಗ್ಮೋರೆ ಅವರಿಗೆ ಸೂವಚಿಸಿದರು.
ಈ ವೇಳೆ ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ, ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ಡಿ ಸಿ ಬ್ಯಾಂಕ ನಿರ್ಧೇಶಕ ಸೋಮನಗೌಡ ಬಿರಾದಾರ,ಸಿಪಿಐ ಆನಂದ ವಾಗ್ಮೋರೆ, ತಾಲೂಕಾ ಆರೋಗ್ಯ ಇಲಾಖೆ ಕಿರಿಯ ಆರೋಗ್ಯ ಸಹಾಯಕ ಎಂ ಎಸ್ ಗೌಡರ, ಮಲೇರಿಯಾ ಸುಪ್ರುವೈಜರ್ ಸುಲೇಮಾನ್ ರುದ್ರವಾಡಿ, ತಾಲೂಕಾ ಮಾಹಿತಿ ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯಾ ತೆರೆದಾಳ, ತಾಲೂಕಾ ಆಶಾ ಕಾರ್ಯಕರ್ತೇಯರು ಮೇಲ್ವಿಚಾರಕಿ, ಪುರಸಭೆ ಸಿಬ್ಬಂದಿಗಳಾಆದ ರಮೇಶ ಮಾಡಬಾಳ, ಮಹಾಂತೇಶ ಕಟ್ಟಿಮನಿ ಪುರಸಭೆ ಸದಸ್ಯ ಅಶೋಕ ವನಹಳ್ಳಿ ಸೇರಿದಂತೆ ಮತ್ತಿತರರು ಇದ್ದರು
Share
WhatsApp
Follow by Email