ಶಾಸಕ ಸಿದ್ದು ಸವದಿಯವರಿಂದ ಆಹಾರ ಕಿಟ್ ವಿತರಣೆ

ಶಾಸಕ ಸಿದ್ದು ಸವದಿಯವರಿಂದ ಆಹಾರ ಕಿಟ್ ವಿತರಣೆ

ರಬಕವಿ-ಬನಹಟ್ಟಿ : ಕೋರೊನಾ ಲಾಕಡೌನ್‌ನಿಂದ ಅನೇಕ ಉದ್ಯೋಗಗಳು ಸ್ಥಗಿತಗೊಂಡಿವೆ. ಸದಾ ಜನರ ಸೇವೆಗೈಯುವ ವೃತ್ತಿಯಲ್ಲಿರುವ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲಿ ಹಡಪದ ಬಾಂಧವರು ಅತೀವ ಸಂಕಷ್ಟಕ್ಕೊಳಗಾಗಿದ್ದಾರೆ. ಅವರನ್ನು ಗುರುತಿಸಿ ಸರಕಾರ ದಿನನಿತ್ಯದ ಬಳಕೆಯ ದಿನಸಿ ವಸ್ತುಗಳ ಕಿಟ್‌ನ್ನು ನೀಡುತ್ತಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ೧೨೬ ಹಡಪದ ಬಾಂಧವರಿಗೆ ಸಕ್ಕರೆ, ರವಾ, ಸೋಪು ಸೇರಿದಂತೆ ದಿನನಿತ್ಯದ ಬಳಕೆ ವಸ್ತುಗಳ ಆಹಾರ ಕಿಟ್ಟುಗಳನ್ನು ನಗರಸಭೆಯ ಕಾರ್ಯಾಲಯದಲ್ಲಿ ವಿತರಿಸಿ ಹೇಳಿದರು.
ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ, ಕಾವೇರಿ ಹ್ಯಾಂಡಲೂಮನ ನಿರ್ದೇಶಕ ಆನಂದ ಕಂಪು, ಆರೋಗ್ಯ ಹಿರಿಯ ನಿರೀಕ್ಷಕ ಮಹಾಲಿಂಗಪ್ಪ ಮುಗಳಖೋಡ, ಕಿರಿಯ ನಿರೀಕ್ಷಕ ರಾಜಕುಮಾರ ಹೊಸೂರ, ಸಂಗೀತಾ ಕೋಳಿ, ಕಛೇರಿ ವ್ಯವಸ್ಥಾಪಕ ಅಶೋಕ ಗುಡಿಮನಿ, ಅಭಿನಂದನ ಸೋನಾರ ಸೇರಿದಂತೆ ನಗರಸಭೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು
Share
WhatsApp
Follow by Email