ತಹಶೀಲ್ದಾರರಿಂದ ಪೌರಕಾರ್ಮಿಕರಿಗೆ ಸನ್ಮಾನ, ಬಟ್ಟೆ ಕಿಟ್ ವಿತರಣೆ: ಪಟ್ಟಣದ ಸ್ವಚ್ಚತೆಗೆ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ.

ಮುಗಳಖೋಡ: ನಗರ ಹಾಗೂ ಪಟ್ಟಣಗಳ ಸುಂದರ ಮತ್ತು ಸ್ವಚ್ಚತೆಯಿಂದ ಕಾಣಲು ಪೌರಕಾರ್ಮಿಕರ ಕಾರ್ಯ ಬಹುಮುಖ್ಯವಾದದ್ದು ಅವರನ್ನು ಸುರಕ್ಷತೆಯಿಂದ ನೊಡಿಕೊಳ್ಳುವುದು ನಮ್ಮ ಆಧ್ಯ ಕರ್ತವ್ಯ. ಪೌರಕಾರ್ಮಿಕರು ಕಡುಬಡವರಾಗಿದ್ದು ಸರ್ಕಾರದಿಂದ ಅವರಿಗೆ ಮೂಲಬೂತ ಸೌಕರ್ಯದ ಜೊತೆಗೆ ಸರಿಯಾದ ವೇತನ ನೀಡಲಾಗುತಿದ್ದು ಅವರ ಕಾರ್ಯವೈಖರಿ ಕಂಡು ತಾಲೂಕಾ ಆಡಳಿತದಿಂದ ಅವರನ್ನು ಗೌರವಿಸಲಾಯಿತು ಎಂದು ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಮಾತನಾಡಿದರು.
. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ರಾಷ್ಟೀಯ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರಕಾರ್ಮಿಕರಾದ ಶ್ರೀಮತಿ ಶಾಲವ್ವಾ ಕಾಂಬಳೆ,ಅನೀಲಕುಮಾರ ನಡವಿನಕೇರಿ, ಮಾರುತಿ ಮಾದರ, ರವಿ ಭಜಂತ್ರಿ, ಚೇತನ ಕರಿಭೀಮಗೋಳ ಅವರಿಗೆ ರಾಯಬಾಗ ತಹಶೀಲ್ದಾರ ಚಂದ್ರಕಾAತ ಭಜಂತ್ರಿ ಅವರು ಸನ್ಮಾನ ಮಾಡಿದರು.
ಮುಖ್ಯಾಧಿಕಾರಿ ಜಿ.ಬಿ.ಡಂಬಳ ಮಾತನಾಡಿ ಪಟ್ಟಣದಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡಲಾಗಿದ್ದು ಪ್ರತಿಯೊಬ್ಬ ಪೌರಕಾರ್ಮಿಕರು ಸುರಕ್ಷತೆಯ ಜೊತೆಗೆ ಕುಟುಂಬದ ಕಾಳಜಿಯನ್ನು ವಹಿಸಿಕೊಂಡು ಜನರ ಜೊತೆಗೆ ಸೌಜನ್ಯತೆಯಿಂದ ವರ್ತಿಸಿ ಸುಂದರ ಬದುಕು ತಮ್ಮದಾಗಿಸಿಕೊಳ್ಳಬೇಕೆಂದು ಪೌರಕಾರ್ಮಿಕರಿಗೆ ಸಿಹಿ ಹಂಚಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಪುರಸಭೆ ಸದಸ್ಯ ಪುರಸಭೆ ಸಿಬ್ಬಂದಿ ಎಸ.ಎಸ್.ಕೋಠೆ, ಯಮನಪ್ಪ ದೇವಣ್ಣವರ ಕೆಂಚಪ್ಪ ಹಳಿಂಗಳಿ, ಮುತ್ತು ಎರಡತ್ತಿ, ಸೈಸಾಬ ನಧಾಪ, ಅನೀಲ ದಳವಾಯಿ, ಲಕ್ಕಪ್ಪ ಪೂಜೇರಿ, ಮುಂತಾದವರು ಇದ್ದರು.
Share

WhatsApp
Follow by Email