
ಸ್ಥಳೀಯ ಪ.ಪಂ.ಗೆ ಭೇಟಿ ನೀಡಿ ಮಾತನಾಡಿ ಕೋವಿಡ್-19 ತೊಂದರೆಗೆ ಒಳಗಾದವರಿಗೆ ಜಿಲ್ಲಾ ಕೆ.ಎಮ್.ಎಫ್‌ನಿಂದ ಇನ್ನೂ ಹೆಚ್ಚಿನ ಸಹಾಯ ಮಾಡಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ರಾಜ್ಯ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರೊಂದಿಗೆ ಚರ್ಚಿಸಿ ಹೆಚ್ಚಿನ ನೆರವು ನೀಡಲು ಪ್ರಯತ್ನಿಸುವದಾಗಿ ವಿವೇಕರಾವ ಪಾಟೀಲ ಹೇಳಿದರು.
ಅತೀವೃಷ್ಠಿ ಮತ್ತು ಅನಾವೃಷ್ಠಿಗಳ ಪರಿಹಾರ ನೀಡುವ ಸಂದರ್ಭದಲ್ಲಿ ವಿವಿಧ ಇಲಾಖೆಗಳ ನೌಕರರ ಮೇಲೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿರುತ್ತವೆ. ಆದರೆ ಕೊರೊನಾ ವೈರಸ್ ತಡೆಗಟ್ಟಲು ಮತ್ತು ಲಾಕ್‌ಡೌನ್‌ನಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳ ಪರಿಹಾರಕ್ಕಾಗಿ ಆರೋಗ್ಯ, ಪೋಲೀಸ, ಕಂದಾಯ, ಪೌರಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಗಳ ಸರಕಾರಿ ನೌಕರರು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಈಗ ಎಲ್ಲ ಇಲಾಖೆಯವರು ಜಗತ್ತೇ ಮೆಚ್ಚುವಂಥ ಕಾರ್ಯ ಮಾಡುತ್ತಿದ್ದಾರೆ ಎಂದು ವಿವೇಕರಾವ ಪಾಟೀಲ ಶ್ಲಾಘಿಸಿದರು.
ಪ.ಪಂ. ಮುಖ್ಯಾಧಿಕಾರಿ ಸಂಜು ಮಾಂಗ, ಸದಸ್ಯರಾದ ಗಣೇಶ ಕಾಂಬಳೆ, ಹನಮಂತ ಸಾನೆ, ಜಾವೇದ ಮೋಮಿನ್, ಲಕ್ಷ್ಮೀ ಗಡ್ಡೆ ಉಪಸ್ಥಿತರಿದ್ದರು.