ಬಡ ಕುಟುಂಬಗಳಿಗೆ ದಿನಸಿ ಕಿಟ್  ನೀಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಮಾದರಿಯಾಗಿದೆ : ಸಿಪಿಐ ವೆಂಕಟೇಶ ಮುರನಾಳ

ಬಡ ಕುಟುಂಬಗಳಿಗೆ ದಿನಸಿ ಕಿಟ್ ನೀಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಮಾದರಿಯಾಗಿದೆ : ಸಿಪಿಐ ವೆಂಕಟೇಶ ಮುರನಾಳ

ಮೂಡಲಗಿ: ಲಾಕ್ ಡೌನ್‍ದಂತಹ ಸಂಕಷ್ಟದ ವೇಳೆಯಲ್ಲಿ ಕ್ಷೇತ್ರದ ಜನರ ಸಹಾಯಕ್ಕೆ ಮುಂದೆ ಬಂದು ಅರಭಾಂವಿ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ದಿನ ನಿತ್ಯದ ಆಹಾರ ಧಾನ್ಯಗಳನ್ನು ನೀಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಮಾದರಿಯಾಗಿದೆ. ಇವರು ಮಾಡುತ್ತಿರುವ ಪುಣ್ಯದ ಕೆಲಸದಲ್ಲಿ ನಾವು ಭಾಗಿಯಾಗಿರುವ ಸಾರ್ಥಕದ ಕಾರ್ಯವಾಗಿದೆ ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ತಿಳಿಸಿದರು.
ಶುಕ್ರವಾರದಂದು ತಾಲೂಕಿನ ನಾಗನೂರ ಪಟ್ಟಣದಲ್ಲಿ ಶಾಸಕ ಮತ್ತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಹಣದಲ್ಲಿ ಕೊಡಮಾಡಿದ ಆಹಾರ ಧಾನ್ಯಗಳ
ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.
ಕೊರೋನಾ ವೈರಸ್‍ನಿಂದ ಇಡೀ ದೇಶವೇ ಲಾಕ್ ಡೌನ್‍ನಲ್ಲಿದೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಪ್ರತಿ ಕುಟುಂಬಗಳಿಗೆ ಬಾಲಚಂದ್ರ ಜಾರಕಿಹೊಳಿ ಅವರು ಆಹಾರ ಧಾನ್ಯಗಳನ್ನು ನೀಡುತ್ತಿದ್ದಾರೆ. ಪ್ರತಿ ಕುಟುಂಬಕ್ಕೆ ಬೇಕಾಗುವ ಹತ್ತು ದಿನದ ಪಡಿತರವಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲರೂ ನಮ್ಮವರು. ನಮ್ಮ ಕುಟುಂಬದವರು ಎಂಬ ಅಭಿಮಾನವನ್ನು ಇಟ್ಟುಕೊಂಡು ಪ್ರತಿಯೊಂದು ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸುವ ಮಹಾನ್ ಕಾರ್ಯವನ್ನು ಇಲ್ಲಿಯ ಶಾಸಕರು ಕೈಗೊಂಡಿದ್ದಾರೆ. ಅದಕ್ಕಾಗಿ ಇಡೀ ಕುಟುಂಬಗಳ ಪರವಾಗಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸುವದಾಗಿ ಮುರನಾಳ ಹೇಳಿದರು.
ಲಾಕ್ ಡೌನ್ ವೇಳೆ ಸರಕಾರದ ನಿಯಮಗಳನ್ನು ಚಾಚುತಪ್ಪದೇ ಪಾಲಿಸಬೇಕು. ಮನೆಯಿಂದ ಯಾರು ಅನಾವಶ್ಯಕವಾಗಿ ಹೊರಗೆ ಬರಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಕ ಕೊರೋನಾ ಸೊಂಕು ಸೋಲಿಸಲು ಎಲ್ಲರೂ ಒಂದಾಗಿ ಹೋರಾಡುವಂತೆ ಮುರನಾಳ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ಶಾಸಕರ ಆಪ್ತಕಾರ್ಯದರ್ಶಿ ನಾಗೇಶ ಶೇಖರಗೋಳ, ಮೂಡಲಗಿ ತಹಶೀಲ್ದಾರ ದಿಲಶಾದ್ ಮಹಾತ, ಬಿಇಒ ಅಜೀತ ಮನ್ನಿಕೇರಿ, ಪ್ರಭಾ ಶುಗರ್ಸ್ ನಿರ್ದೇಶಕ ಕೆಂಚನಗೌಡ ಪಾಟೀಲ, ಮುಖಂಡರಾದ ಚಂದ್ರು ಬೆಳಗಲಿ, ಶಂಕರ ಹೊಸಮನಿ, ಪರಸಪ್ಪ ಬಬಲಿ, ಅಲ್ಲಪ್ಪ ಗುಡೆನ್ನವರ, ಎ.ಆರ್.ಪಾಟೀಲ, ಕೆಂಚಪ್ಪ ಸಕ್ರೆಪ್ಪಗೋಳ, ಗಜಾನನ ಯರಗಣವಿ, ಬಾಳಗೌಡ ಪಾಟೀಲ, ಸುಭಾಸ ಪಡದಲ್ಲಿ, ಭೀಮಗೌಡ ಹೊಸಮನಿ, ಸಿದ್ದಪ್ಪ ಯಾದಗೂಡ, ಮುತ್ತಪ್ಪ ಖಾನಪಗೋಳ, ಸತ್ತೆಪ್ಪ ಕರವಾಡಿ, ಯಮನಪ್ಪ ಕರಬನ್ನವರ, ಶಂಕರ ದಳವಾಯಿ, ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಪ.ಪಂ ಮುಖ್ಯಾಧಿಕಾರಿ ರವಿ ರಂಗಸೂಬೆ, ಟೀಂ ಎನ್.ಎಸ್.ಎಫ್‍ನ ದಾಸಪ್ಪ ನಾಯಿಕ, ಸಿ.ಪಿ.ಯಕ್ಷಂಬಿ, ಅಬ್ದುಲ ಮೀರ್ಜಾನಾಯಿಕ, ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವು ಮುಖಂಡರು, ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
Share
WhatsApp
Follow by Email