ಮುಸ್ಲಿಂ ಮುಖಂಡರ ಸಭೆ ನಡೆಸಿದ ಶಾಸಕ ಕುಮಠಳ್ಳಿ

ಮುಸ್ಲಿಂ ಮುಖಂಡರ ಸಭೆ ನಡೆಸಿದ ಶಾಸಕ ಕುಮಠಳ್ಳಿ


ಅಥಣಿ: ಕೊರೊನಾ ಲಾಕ್ ಡೌನ ಹಿನ್ನೆಲೆಯಲ್ಲಿ ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರದಂತೆ ಮತ್ತು ಕೊರೊನಾ ಲಕ್ಷಣಗಳು ಕಂಡುಬoದರೆ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅಥಣಿ ಪಟ್ಟಣದ ಮುಸ್ಲಿಂ ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.
ಕಾರ್ಯನಿಮಿತ್ಯ ಬೇರೆ ಕಡೆ ತೆರಳುತ್ತಿದ್ದ ವೇಳೆ ಪಟ್ಟಣದ ಮುಸ್ಲಿಂ ಸಮಾಜದ ಮುಖಂಡರು ಒಂದು ಕಡೆ ಇರುವುದನ್ನು ನೋಡಿದ ಮಹೇಶ ಕುಮಠಳ್ಳಿ ಅಲ್ಲಿಯೆ ವಾಹನ ನಿಲ್ಲಿಸಿ ಇಳಿದು ಅವರ ಕುಶಲೋಪಚಾರ ವಿಚಾರಿಸಿದರಲ್ಲದೆ ಮುಸ್ಲಿಂರ ಪವಿತ್ರ ಹಬ್ಬ ರಮಜಾನ್ ಹಿನ್ನೆಲೆಯಲ್ಲಿ ಉಪವಾಸ ವೃತ ಆಚರಣೆ ಮಾಡುತ್ತಿರುವ ಸಮಾಜ ಬಾಂಧವರು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಮತ್ತು ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಸುವಂತೆ ಮನವಿ ಮಾಡಿದರು.ಇದೆ ವೇಳೆ ಸಮಾಜ ಬಾಂಧವರು ಕೊರೊನಾ ಜಾಗತಿಕ ಮಟ್ಟದಲ್ಲಿ ತೊಂದರೆ ಉಂಟುಮಾಡಿದ್ದು ಪರ ಊರುಗಳಿಂದ ಯಾರಾದರೂ ಬಂದಿದ್ದರೆ ಪೋಲಿಸರಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಮತ್ತು ಆಶಾ ಕಾರ್ಯಕರ್ತರು ಬಂದಾಗ ಮಾಹಿತಿ ನೀಡಿ ಆರೋಗ್ಯ ತಪಾಸಣೆಗೆ ಸಹಕರಿಸಬೇಕು ಎಂದು ಸೂಚಿಸಿದರು. ರಮಜಾನ್ ಉಪವಾಸದ ನಿಮಿತ್ಯ ಇಪ್ತಿಯಾರ್ ಬಗ್ಗೆ ಮೈಕಿನಲ್ಲಿ ಮಾಹಿತಿ ನೀಡಲು ಬೆಳಗಿನ ಜಾವ ಮತ್ತು ಸಂಜೆ ಅವಕಾಶ ಕಲ್ಪಿಸಿದ್ದು ಕೊರೊನಾ ಲಾಕ್ ಡೌನ ಮುಗಿಯುವವರೆಗೂ ಮಸೀದಿಯಲ್ಲಿ ಮೂರು ಜನರಿಗಿಂತ ಹೆಚ್ಚು ಜನರು ಪ್ರಾರ್ಥನೆ ಮಾಡಬಾರದು ಎಂದು ಮನವಿ ಮಾಡಿದರು.
ಈ ವೇಳೆ ಸಮಾಜದ ಮುಖಂಡರಾದ ಅಸ್ಲಮ್ ನಾಲಬಂದ್, ರಾಯಲ್ ಸ್ಕೂಲ್ ಚೇರ್ಮನ್ ರಫಿಕ್ ಡಾಂಗೆ, ಇಸೂಬ ನಾಲಬಂದ್, ಜಾವೆದ್ ಗದ್ಯಾಳ, ರಸೂಲ ಜಂಬಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು
Share
WhatsApp
Follow by Email