
ನಂತರ ಮಾತನಾಡಿದ ಗ್ರಾಮಸ್ಥರು ಗ್ರಾಮದಲ್ಲಿ ಸುಮಾರು ದಿನಗಳಿಂದ 40 ಕುಟುಂಬಗಳಿಗೆ ಪಡಿತರ ರೇಷನ್ ಹಂಚುತ್ತಿಲ್ಲಾ, ನಿಯಮದ ಪ್ರಕಾರ ಓಟಿಪಿ, ಬಂದರು ಸುಖಾ ಸುಮ್ಮನೆ ತಮ್ಮ ಮನಸ್ಸಿಗೆ ಬಂದವರಿಗೆ ಕೊಡುತ್ತಿದ್ದಾರೆ. ನಾವು ಕೇಳಲು ಹೊದರೆ ಸರಿಯಾಗಿ ಸ್ಪಂದಿಸುತ್ತಿಲ್ಲಾ, ಈಗಾಗಲೇ ಲಾಕ್ಡೌನ್ ಇರುವದರಿಂದ ನಮಗೆ ಬದುಕಲು ತುಂಬಾ ತೊಂದರೆಯಾಗುತ್ತಿದೆ. ಸರಕಾರ ಆದೇಶದಂತೆ ರೇಷನ್ ಕಾರ್ಡ ಇರದವರಿಗೂ ಪಡಿತರ ರೇಷನ್ ವ್ಯವಸ್ಥೆ ಮಾಡಬೇಕು, ಆದರೆ ನಮ್ಮೂರಿನಲ್ಲಿ ನಮಗೆ ರೇಷನ್ ಕಾರ್ಡ ಇದ್ದರು . ರೇಷನ್ ಕೊಡುತ್ತಿಲ್ಲಾ, ಶೀಘ್ರವಾಗಿ ನಮಗೆ ರೇಷನ್ ಒದಗಿಸಲು ಅಧಿಕಾರಿಗಳು ರೇಷನ್ ಹಂಚುವರಿಗೆ ತಾಕೀತು ಮಾಡಬೇಕು, ಎಂದು ಆಗ್ರಹಿಸಿದ್ದಾರೆ.ಈ ವೇಳೆ ಎಸ್ ಎಸ್ ಪಾಟೀಲ್, ಪ್ರಕಾಶ ಚಲವಾದಿ, ಎಂ ಆರ್ ಹಡಲಗೇರಿ, ಸಿದ್ದು ಜೈನಾಪೂರ, ಈರಪ್ಪ, ಮತ್ತಿತತರು ಇದ್ದರು.