ಮುದ್ದೇಬಿಹಾಳ; ನನಗೆ ಬಡವರೇ ದೇವರು, ಗುಡಿ, ಮಸದಿ, ಚರ್ಚಗಳಲ್ಲಿ ದೇವರಿದ್ದಾನೆ ಎಂದರೆ ನಂಬುವುದಿಲ್ಲ ಬಡವನ ಹೃದಯದಲ್ಲಿ ದೇವರಿದ್ದಾನೆ ಬಡವನೇ ನನಗೆ ಕಣ್ಣಿಗೆ ಕಾಣುವ ದೇವರು ಬಡವರ ಗುಡಿಸಿಲಿನಲ್ಲಿ ವಾಸವಿರುವ ಬಡವರನ್ನೇ ನಿಜವಾದ ದೇವರನ್ನು ಕಾಣುವ ಸ್ವಭಾವ ನನ್ನದು ಹಾಗಾಗಿ ಅವರು ಯಾವತ್ತಿಗೂ ಉಪವಾಸದಿಂದ ನರಳಬಾರದು ಸರಕಾರದ ಸೌಲಭ್ಯಗಳಿಂದ ವಂಚಿತಗೊಳ್ಳಬಾರದು ಎಂಬ ಉದ್ದೇಶದಿಂದ ಇಂದು ದಾಸೋಹದ ಮೂಲಕ ಅವರ ಸೇವೆ ಮಾಡುತ್ತಿದ್ದೇನೆ ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಅವರು ಹೇಳಿದರು.
ಪಟ್ಟಣದ ತಮ್ಮ ದಾಸೋಹ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕಾ ಪಡಿತರ ಆಹಾರ ಧಾನ್ಯ ವಿತರಿಸುವ ನ್ಯಾಯಬೆಲೆ ಅಂಗಡಿ ಮಾಲಿಕರ ಸಭೆಯಲ್ಲಿ ಮಾತನಾಡಿದ ಅವರು ಇಂದು ನಾವು ಕೋರೋನಾ ಎಂಬ ಕಣ್ಣಿಗೇದ ವೈರಿ ಜೋತೆ ಯುಧ್ಧ ಮಾಡಬೇಕಿದೆ ಈ ಯುದ್ಧದಲ್ಲಿ ಹೇಗೆ ಆಸಾ ಕಾರ್ಯಕರ್ತೇಯರು, ಆರೋಗ್ಯ ಇಲಾಖೆಯವರು ಕೊರೊನಾ ವಾರಿಯರ್ಸಗಳಾಗಿ ಸೈನಿಕರಂತೆ ಹೋರಾಟ ನೆಡಸುತ್ತಿದ್ದಾರೆ ಹಾಗೇಯೇ ಬಡವರಿಗೆ ಸರಕಾರದ ಪಡಿತರ ಆಹಾರ ಧಾನ್ಯ ವಿತರಿಸುವ ಮೂಲಕ ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನ ನೀಡುವ ಸೈನಿಕರಲ್ಲಿ ನೀವು ಒಬ್ಬರು ಎಂಬುದನ್ನು ಆರ್ಥೈಸಿಕೊಳ್ಳಬೇಕು.
. ದೇಶದೆಲ್ಲೇಡೆ ಇಂದು ಕೊರೊನಾ ಸಂಕಷ್ಟದಲ್ಲಿ ಸಿಲುಕಿ ಇಂದು ಬಡವರು ಕೂಲಿ ಕಾರ್ಮಿಕರು ತಮ್ಮ ಉದ್ಯೋಗ ಕಳೆದು ಕೊಂಡು ತೀರಾ ತೊಂದರೆಯಲ್ಲಿದ್ದಾರೆ.
ಅವರೇಲ್ಲ ಸಧ್ಯ ಸರಕಾರ ನೀಡುವ ಪಡಿತರ ಆಹಾರ ಧಾನ್ಯ ಯಾವಾಗ ಕೊಡುತ್ತಾರೆ ಎಂಬುದನ್ನ ಕಾಯ್ದುಕುಳಿತು ಅದು ಬಂದ ಮೇಲೆ ಊಟ ಮಾಡಿ ಬದುಕುವವರ ಸಂಖ್ಯೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿ ಮಾಲಿಕರು ಪಡಿತರ ಕಾರ್ಡಹೊಂದಿದ ಬಡವರಿಗೆ ತೊಂದರೆಯಾಗದAತೆ ಪಡಿತರ ಆಹಾರ ಧಾನ್ಯ ವಿತರಿಸಬೇಕು.
ಅದಲ್ಲದೇ ಈ ಹಿಂದೆ ಪಡಿತರ ಆಹಾರ ಧಾನ್ಯ ಕೊಡದೇ ಉಳಿಸಿರುವ ಅಂಗಡಿಕಾರರು ಅವುಗಳನ್ನು ಸೇರಿಸಿ ಮುಂದೆ ಬರುವ ನಿಗದ ತ ವೇಳೆ ಆಹಾರ ಧಾನ್ಯ ವಿತರಿಸಬೇಕು.ಈ ಸಂದರ್ಭದಲ್ಲಿ ಪಡಿತರ ಚೀಟಿ ಇಲ್ಲದ ಬಡವರು ಕೂಡ ಸಾಕಷ್ಟು ಜನ ತಮ್ಮ ಸುತ್ತಮುತ್ತಲಿನಲ್ಲಿದ್ದಾರೆ ಅವರೂ ಕೂಡ ಮನುಷ್ಯರೇ ಅವರಿಗೂ ಕೂಡ ಸರಕಾರದ ಪಡಿತರ ಆಹಾರರ ಧಾನ್ಯ ನೀಡುವ ಮೂಲಕ ಅವರನ್ನು ರಕ್ಷೀಸುವುದು ತಮ್ಮಗಳೇಲ್ಲರ ಕರ್ತವ್ಯವಾಗಿದೆ. ಕಾರಣ ಅಂತಹವರ ಹೇಸರು ವಿಳಾಸ, ಗ್ರಾಮ, ಪಟ್ಟಣ ಎಲ್ಲ ಸಂಪೂರ್ಣ ವಿವರವನ್ನು ಪಡೆದು ತಹಶಿಲ್ದಾರರವರಿಗೆ ಮತ್ತು ನನಗೆ ತಂದು ಕೊಟ್ಟರೆ ಅವರಿಗೂ ಸಹಿತ ಪಡಿತರ ವಿತರಸಲು ಸಾಧ್ಯವಾಗುತ್ತದೆ.
ಈ ವಿಷಯದಲ್ಲಿ ಮುಖ್ಯವಾಗಿ ಬಡವರ ಆಹಾರ ಧಾನ್ಯ ವಿತರಣೆಯಲ್ಲಿ ರಾಜಕೀಯ ಮಾಡುವವನಲ್ಲ ಈ ಹಿಂದೆ ಇದ್ದ ಕಾಂಗ್ರೇಸ್ ಶಾಸಕರಿದ್ದಾಗಲೂ ನ್ಯಾಯಬೆಲೆ ಅಂಗಡಿ ಮಾಲಿರಿದ್ದಿರಿ ಸಧ್ಯ ನಾನು ಪ್ರಸ್ತುತ ಶಾಸಕನಾಗಿದ್ದಗಲೂ ನೀವೇ ನ್ಯಾಯಬೆಲೆ ಅಂಗಡಿ ಮಾಲಿಕರಾಗಿ ಪಡಿತರ ವಿತರಿಸುತ್ತಿದ್ದಿರಿ ಯಾವತ್ತಿಗೂ ನಿಮಗೇ ತೊಂದರೆ ಕೊಟ್ಟಿಲ್ಲ ಮುಂದೆಯೂ ಕೊಡುವುದಿಲ್ಲ. ಬಡವರಿಗೆ ಅನ್ಯಾಯ ಮಾಡುತ್ತಿದ್ದಸಿರಿ ಎಂದು ಗೋತ್ತಾದರೆ ಮಾತ್ರ ಯಾವ ಮೂಲಾಜಿಲ್ಲದೇ ಅವರ ಮೇಲೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸಬೇಕಾಗುತ್ತದೆ ಎಂದರು.
ಈ ವೇಳೆ ತಹಶಿಲ್ದಾರ ಜಿ ಎಸ್ ಮಳಗಿ, ತಾಳಿಕೋಟೆ ತಹಶಿಲ್ದಾರ ಅನಿಲ ಢವಳಗಿ, ಸಿಪಿಐ ಆನಂದ ವಾಗ್ಮೋರೆ, ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ಡಿ ಸಿ ಬ್ಯಾಂಕ ನಿರ್ಧೇಶಕ ಸೋಮನಗೌಡ ಬಿರಾದಾರ, ತಾಲೂಕಾ ಬಿ ಜೆ ಪಿ ಮಂಡಲದ ಅಧ್ಯಕ್ಷ ಪರುಶುರಾಮ ಪವಾರ, ಬಿಜೆಪಿ ಹಿರಿಯ ಮುಖಂಡ ಮಲಕೇಂದ್ರಾಯಗೌಡ ಪಾಟೀಲ ಸೇರಿದಂತೆ ನೂರಕ್ಕೂ ಹೆಚ್ಚು ಜನ ನ್ಯಾಯಬೆಲೆ ಅಂಗಡಿ ಮಾಲಿಕರು ಹಂಚಿಕೆದಾರರು ಇದ್ದರು