ಬ್ರೇಕಿಂಗ್ ನ್ಯೂಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಟುಂಬ ಹಸಿವಿನಿಂದ ಆತ್ಮಹತ್ಯೆ, ಸುಳ್ಳು ವರದಿ ವಿರುದ್ದ ಕ್ರಮಕ್ಕೆ ಆಗ್ರಹ 02/05/202002/05/2020 admin ಅಥಣಿ: ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕುಟುಂಬ ಒಂದು ಲಾಕ್ ಡೌನ್ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿದೆ ಎಂದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಸಮರ್ಪಕವಾಗಿ ಬಡವರು, ನಿರ್ಗತಿಕರಿಗೆ ಪಡಿತರ ವಿತರಣೆ ಮಾಡದ ಹಿನ್ನೆಲೆಯಲ್ಲಿ ಬಡ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಯಾವುದೊ ಘಟನೆಯ ವಿಡಿಯೋ ಮತ್ತು ಪೋಟೊ ಹರಿಬಿಡಲಾಗಿದೆ.ಇದರಿಂದಾಗಿ ಲಾಕ್ ಡೌನ್ ಬಗ್ಗೆ ಸಾರ್ವಜನಿಕರಲ್ಲಿ ವಿರೋಧ ಹುಟ್ಟುಹಾಕಲು ಮತ್ತು ಘನ ಸರ್ಕಾರದ ವೈಫಲ್ಯ ಎಂದು ಬಿಂಬಿಸಲು ಉದ್ದೇಶಪೂರ್ವಕವಾಗಿ ಸುದ್ದಿ ಹಬ್ಬಿಸಲಾಗಿದೆ ಆದ್ದರಿಂದ ಅಥಣಿ ತಾಲ್ಲೂಕು ಆಡಳಿತ ,ಬೆಳಗಾವಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಹೆಸರು ಕೆಡಿಸುವ ದುರುದ್ದೇಶದಿಂದ ಈ ವರದಿ ಕೂಡಿದೆ ಅದರಲ್ಲೂ ಜನರು ಸಮೂಹ ಸನ್ನಿಗೆ ಒಳಗಾಗುವ ಸಾಧ್ಯತೆ ಇದ್ದು ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಮಾನವ ಹಕ್ಕು ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ ಚಿಂಚಲಿ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ ಮೂಲಕ ಮನವಿ ಸಲ್ಲಿಸಿದರು. ಈ ವೇಳೆ ಪತ್ರಕರ್ತ ಪ್ರಕಾಶ ಕಾಂಬಳೆ ಮತ್ತು ಸಮಾಜ ಸೇವಕ ದೀಪಕ ಶಿಂಧೇ ಉಪಸ್ಥಿತರಿದ್ದರು Share