ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿದ ನಗರಸಭಾ ಸದಸ್ಯೆ

ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿದ ನಗರಸಭಾ ಸದಸ್ಯೆ

ರಬಕವಿ-ಬನಹಟ್ಟಿ : ಕೊರೊನಾ ವಿರುದ್ಧ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ತ್ಯಾಗ ಮತ್ತು ಸೇವೆ ಅತ್ಯಮೂಲ್ಯವಾದುದು. ಅವರ ಸೇವಾ ಮನೋಭಾವನೆಯನ್ನು ಎಲ್ಲರೂ ಅಭಿನಂದಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಗುರುವಾರ ಸ್ಥಳೀಯ ನಗರಸಭಾ ಸದಸ್ಯೆ ಗೌರಿ ಮಿಳ್ಳಿ ಅವರ ಮನೆಯ ಆವರಣದಲ್ಲಿ ಆಶಾ ಕಾರ್ಯಕರ್ತೆಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಕೋವಿಡ್-19 ವಿರುದ್ಧ ಹೋರಾಟದಲ್ಲಿ ಸರ್ಕಾರದ ಎಲ್ಲ ರೀತಿಯ ವಿಭಾಗಗಳು ಕಾರ್ಯ ಮಾಡುತ್ತಿವೆ, ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಸರ್ಕಾರಿ ಸೌಲಭ್ಯಗಳು ಬಡವರಿಗೆ ಮತ್ತು ಕಾರ್ಮಿಕ ವರ್ಗಕ್ಕೆ ದೊರೆಯುವಂತೆ ಗಮನ ನೀಡಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಗೌರಿ ಮಿಳ್ಳಿ ಆಶಾ ಕಾರ್ಯಕರ್ತೆಯರಾದ ಕವಿತಾ ಕಡ್ಲಿಮಟ್ಟಿ, ಬೇಬಿಶ್ರೀ ಹಾಸೀಲಕರ್, ಲಕ್ಷಿö್ಮ ತಳವಾರ, ಸಕ್ಕುಬಾಯಿ ಪೂಜಾರಿ, ಭಾರತಿ ಪಾಟೀಲ, ಗೀತಾ ಆರಗಿ, ಶೋಭಾ ಗುಣಕಿ, ಸವಿತಾ ಬಾವಲತ್ತಿ ಮತ್ತು ಕವಿತಾ ಆಲಗೂರ ಅವರನ್ನು ಸನ್ಮಾನಿಸಿ ಸೀರೆ ಮತ್ತು ಆಹಾರದ ಕಿಟ್‌ಗಳನ್ನು ನೀಡಲಾಯಿತು.
Share
WhatsApp
Follow by Email