
ಖರೀದಿದಾರರು ಬರುತ್ತಿಲ್ಲ. ಬಂದ ಕೆಲವರು ಕೆಜಿಗೆ $ 2 ರಂತೆ ಕೇಳುತ್ತಿದ್ದಾರೆ. ಹೀಗಾಗಿ ತಮಗೆ ಪ್ರತಿ ಎಕರೆಗೆ $ 5 ರಿಂದ 7 ಲಕ್ಷ ದಷ್ಟು ನಷ್ಟವಾಗುತ್ತಿದೆ ಎಂದು ಬೆಕ್ಕೇರಿ ಗ್ರಾಮದ ರೈತ ರಮೇಶ ಕುಲಕರ್ಣಿ
ತಮ್ಮ ಗ್ರಾಮದಲ್ಲಿ ಸುಮಾರು 20 ಹೆಕ್ಟರನಲ್ಲಿ ರೈತರು ಬಾಳೆ ಬೆಳೆದಿದ್ದಾರೆ. ಎಲ್ಲರ ಪರಸ್ಥಿತಿ ಇದೇಯಾಗಿದೆ. ಈ ಮೊದಲು ಬೇಡಿಕೆ ಹೆಚ್ಚಾಗಿದ್ದು ಉತ್ತಮ ಲಾಭವೂ ದೊರೆಯುತ್ತಿತ್ತು. ಈ ಬಾರಿ ಅದೇ ನಿರೀಕ್ಷೆಯ ಲ್ಲಿದ್ದು ನಮಗೆ ಕರೋನಾ ವೈರಸ್ ಕೊಳ್ಳಿ ಇಟ್ಟು ರೈತರ ಬಾಳು ಬೆಳಗಬೇಕಾದ ಬಾಳೆ ನಮ್ಮ ಬದುಕನ್ನು ಮೂರಾ ಬಟ್ಟೆ ಮಾಡಿದೆ ಎಂದು ಅವರು ತಮ್ಮ ಬೇಸರ
ವ್ಯಕ್ತಪಡಿಸಿದರು.
ರೈತರು ಬೇರೆ ದಾರಿ ಇಲ್ಲದೆ ಬೆಳೆದ ಬಾಳೆಯನ್ನು ತಿಪ್ಪೆಗುಂಡಿಗೆ ಹಾಕಲು ಮುಂದಾಗಿದ್ದಾರೆ.ಸಂಕಷ್ಟದಲ್ಲಿರುವ ರೈತರಿಗೆ ಸರಕಾರ
ಅನ್ನದಾತರನ್ನು ಸಂರಕ್ಷಿಸುವ ಕಾರ್ಯ ಮಾಡಬೇಕಿದೆ.ರೈತರ ತೋಟಗಾರಿಕೆ ಬೆಳೆಗಳು ಸರಾಗವಾಗಿ ಮಾರುಕಟ್ಟೆಟಗೆ ಹೋಗಲು ನಮ್ಮ ತೋಟಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಲ್ಲ. ಇನ್ನಾದರು ಸಕರ್ಾರ ರೈತರನ್ನು ಕಡೆಗಣಿಸದೆ ನಮ್ಮ ಬೆಳೆಗಳಿಗೆ ವೈಜ್ಞಾನಿ
ಕ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.ನಮ್ಮ ತೋಟಗಾರಿಕೆ ಬೆಳೆಗಳನ್ನು ನೇರವಾಗಿ ಸಕರ್ಾರವೆ ಖರೀಧೀಶಲಿ ಎಂದು ಗ್ರಾಮದ ಬಾಳೆ ಬೆಳೆದ ಮತ್ತೊಬ್ಬ ರೈತ ಬಸಪ್ಪ ನಾಗೌಡ ಒತ್ತಾಯಿಸಿದ್ದಾರೆ.