ರಬಕವಿ-ಬನಹಟ್ಟಿ ಅವಳಿ ನಗರದಲ್ಲಿ ಕೋವಿಡ್ ೧೯ ವಿರಾಮಕ್ಕೆ ಬೈ. ಸಾರಾಯಿ ಜೈ

ರಬಕವಿ-ಬನಹಟ್ಟಿ ಅವಳಿ ನಗರದಲ್ಲಿ ಕೋವಿಡ್ ೧೯ ವಿರಾಮಕ್ಕೆ ಬೈ. ಸಾರಾಯಿ ಜೈ

ರಬಕವಿ-ಬನಹಟ್ಟಿ : ಕೋವಿಡ್-೧೯ನಿಂದಾಗಿ ಸುಮಾರು ೪೦ ದಿನಗಳ ಕಾಲ ಲಾಕಡೌನದಿಂದಾಗಿ ಮದ್ಯಪ್ರೀಯರಿಗೆ ಮದ್ಯ ಸಿಗದೇ ರಾಜ್ಯದಲ್ಲಿ ಜನ ವಿಲವಿಲ ಒದ್ದಾಡಿದ್ದಾರೆ. ಕಳೆದ ೪೦ ದಿನಗಳ ಲಾಕ್‌ಡೌನ್‌ನಲ್ಲಿ ಮನೆಯಲ್ಲೆ ಕಾಲಕಳೆದ ಜನ ಇಂದಿನಿAದ ಸ್ವಲ್ಪ ಸಡಲಿಕೆ ಹಿನ್ನಲೆಯಲ್ಲಿ ರಬಕವಿ-ಬನಹಟ್ಟಿಯ ಜನತೆ ಮಧ್ಯ ಖರೀದಿಗೆ ಮುಗಿ ಬಿದ್ದರು. ಮದ್ಯಪ್ರಿಯರು ಮಧ್ಯದ ಅಂಗಡಿ ಮುಂದೆ ಮದ್ಯ ಖರೀದಿ ಮಾಡಲು ಸಾಮಾಜಿಕ ಅಂತರ ಕಾಯ್ದುಕೊಂಡು ಕಿಲೋಮೀಟರ್‌ಗಳ ವರೆಗೆ ಸಾಲಾಗಿ ನಿಂತು ಮದ್ಯ ಖರೀದಿ ಮಾಡಿದರು.
ಮದ್ಯದಂಗಡಿಯವರು ಸಾನಿಟೈಜರ್‌ನಿಂದ ಕೈ ಸ್ವಚ್ಛವಾಗಿಸಿ, ಮದ್ಯಪ್ರಿಯರಿಗೆ ಮದ್ಯ ನೀಡಿದರು. ಕೆಲವೊಂದು ಕಡೆ ಮದ್ಯಕೊಳ್ಳಲು ತಂಡೋಪ ತಂಡವಾಗಿ ಜನ ಮದ್ಯದಂಗಡಿಗಳಿಗೆ ಮುಗಿಬಿದ್ದಿದ್ದರು. ಮುನ್ನಚ್ಚರಿಕೆ ಕ್ರಮವಾಗಿ ತಾಲೂಕಾ ತಹಶೀಲ್ದಾರ ಪ್ರಶಾಂತ ಚನಗೊಂಡ, ಸಿಪಿಆಯ್ ಜೆ.ಕರುಣೇಶಗೌಡ, ಕಂದಾಯ ನೀರಿಕ್ಷಕ ಬಸವರಾಜ ತಾಳಿಕೋಟಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಮಧ್ಯದಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Share
WhatsApp
Follow by Email