ಆಪತ್ಕಾಲದ ಬಂಧುವಿನoತೆ ಕೆಲಸ ಮಾಡುವ ರೆಡ್‌ಕ್ರಾಸ್

ಆಪತ್ಕಾಲದ ಬಂಧುವಿನoತೆ ಕೆಲಸ ಮಾಡುವ ರೆಡ್‌ಕ್ರಾಸ್

ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ: ಅಪಾಯದಲ್ಲಿರುವವರಿಗೆ ಸಹಾಯ, ಹಾಗೂ ಯುವಕರಿಂದ ದೇಶವನ್ನು ಜಾಗೃತಿಯತ್ತ ಕರೆದೊಯ್ಯುವ ರೆಡ್‌ಕ್ರಾಸ್ ಪಾತ್ರ ಬಹುಮುಖ್ಯ.
ವಿಶ್ವದ ಜನರ ಪಾಲಿಗೆ ಆಪತ್ಕಾಲದ ಆಪತ್ತಬಂಧುವಿನoತೆ ರೆಡ್ ಕ್ರಾಸ್ ಸಂಸ್ಥೆಯು ಕಾರ್ಯನಿರ್ವಹೀಸುತ್ತಿದ್ದು ಆರೋಗ್ಯ ಪೀಡಿತರಿಗೆ ಗಾಯಾಳುಗಳಿಗೆ ಜೀವನ್ಮರಣದಲ್ಲಿ ಹೋರಾಡಿತ್ತಿರುವವರಿಗೆ ಸಹಾಯ ಹಸ್ತ ಚಾಚುವ ಸ್ವಯಂ ಸಂಸ್ಥೆ ಇದಾಗಿದ್ದು ಸಾಂಕ್ರಾಮಿಕ ಹಾಗೂ ಇನ್ನಿತರ ರೋಗಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇವತ್ತಿನ ದಿನ ಜಗತ್ತಿನ ಎಲ್ಲ ದೇಶಗಳಲ್ಲಿ ವ್ಯಾಪಿಸಿಕೊಂಡಿದೆ.
ರೆಡ್‌ಕ್ರಾಸ ಹಿನ್ನೇಲೆ:
ರೆಡ್‌ಕ್ರಾಸ ಸಂಸ್ಥೆ ಮಾನವನ ಇತಿಹಾಸದ ಒಂದು ಕೂತುಹಲಕಾರಿ ಘಟನೆಯಾಗಿದ್ದು ಅಂದು ಸಲ್ಪೆರಿನೋ ಯುದ್ಧದಲ್ಲಿ ಜರುಗಿದ ಅಮಾನಿವೀಯ ಘಟನೆಯಿಂದಾಗಿ ರೆಡ್‌ಕ್ರಾಸನ ಉಗಮವಾಯಿತು. (1859 ರಂದು) ಅಂದು ಪ್ರಾನ್ಸ್ ಮತ್ತು ಇಟಲಿ ಸೈನ್ಯ ಮತ್ತೊಂದು ಕಡೆ ಆಸ್ಟಿಯಾ ಸೈನ್ಯ ಸುಮಾರು 18 ಗಂಟೆಗಳ ಕಾಲ ನಡೆದ ಘೋರ ಯುದ್ಧದಲ್ಲಿ 3 ಲ್ಕಷಕ್ಕೂ ಅಧೀಕ ಸೈನಿಕರು ಯುದ್ಧದಲ್ಲಿ ಪಾಲ್ಗೊಂಡು ಅನೇಕ ಜನ ಸೈನಿಕರು ಸಾವನ್ನಪ್ಪುತ್ತಾರೆ. ಯುಧ್ಧ ಮುಕ್ತಾಗೊಂಡಾಗ ಸಾವಿರಾರು ಜನ ಸೈನಿಕರು ಗಾಯಗೊಳ್ಳುತ್ತಾರೆ. ಆದಿನಮಾನಗಳಲ್ಲಿ ಅಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸೈನಿಕರನ್ನು ಉಪಚರಿಸವುದಕ್ಕೆ ಬೆರಳಣಿಕೆಯಷ್ಟು ಮಾತ್ರ ಆಸ್ಪತ್ರೇಗಳು ಮತ್ತು ವೈಧ್ಯರು ಲಭ್ಯವಿರುತ್ತಾರೆ.
ಹೆನ್ರಿ ಡೊನಾಲ್ಡ ವ್ಯಾಪಾರದ ಸಲುವಾಗಿ ನೆಪೊಲಿಯನ್ ದೊರೆಯಿಂದ ಅನುಮತಿ ಪಡೆದು ಅಲ್ಜಿರಿಯಾದಲ್ಲಿ ಕಾರ್ನ್ ಮಿಲ್ಸ್ಗಳನ್ನು ಪ್ರಾರಂಭಿಸಲು ಅನುಮತಿ ಪಡೆಯಲು ಪ್ರಯಾಣ ಕೈಗೊಂಡಿದ್ದಾಗ ತಾನು ಸಾಗುವ ದಾರಿ ಮಧ್ಯದಲ್ಲಿ ನಡೆದ ಯುದ್ಧದ ದಾರುಣ ಘಟನೆಯಲ್ಲಿ ಗಾಯಗೊಂಡು ನರಳಾಡುತ್ತಿದ್ದ ಸೈನಿಕರನ್ನು ಕಂಡು ಮತ್ತು ಅವರಿಗೆ ಯಾವುದೇ ಉಪಚಾರವಿಲ್ಲದನ್ನು ಅರಿತು ಸಂಜೆಯ ಹೊತ್ತಿಗೆ ತನ್ನ ವ್ಯಾಪಾರದ ಉದ್ಧೇಶವನ್ನು ಮರೆತು ಗಾಯಗೊಂಡ ಸೈನಿಕರಿಗೆ ಅಲ್ಲಿನ ಗ್ರಾಮಸ್ಥರ ಸಹಾಯದಿಂದ ಕ್ಯಾಸ್ಟಿಗ್ಲಿಯೋನ್ ಪ್ರದೇಶದಲ್ಲಿನ ಮನೆಗಳಿಲ್ಲಿ, ಚರ್ಚ್ಗಳಲ್ಲಿ ಹಾಗೂ ಆಶ್ರಮಗಳಲ್ಲಿ ಸೇನಾ ಪಾಳ್ಯಗಳಲ್ಲಿ ಇರಿಸಿ ವೈಧ್ಯಕೀಯ ನೆರವುಗಳನ್ನು ಒದಗಿಸತೊಡಗಿದ. ಈ ಭೀಕರ ದೃಶ್ಯವನ್ನು ಮರೆಯಲಾದೇ ಇದರಿಂಧ ಮುಂದೆ ಮಾನವ ಸಮಾಜದ ಮೇಲಾಗುವ ಭಯಂಕರ ಸಮಸ್ಯಗಳನ್ನರಿತು 1862 ರಲ್ಲಿ “ದಿ ಮೆಮೋರಿ ಆಪ್ ಸೆಲ್ಪೇರಿನೋ“ ಎಂಬ ಪುಸ್ತಕವನ್ನು ಪ್ರಕಟಿಸಿದರು ಅದು ಹಲವಾರು ರಾಷ್ಟçಗಳಲ್ಲಿ ಪ್ರಕಟನೆಯಾಯಿತು ನಂತರ ಜೀನೆವಾ ಸಮಾಜ ಕಲ್ಯಾಣ ಸಂಘ ಎಂಬ ಧಾರ್ಮಿಕ ಸಂಸ್ಥೆಯು ಡೊನಾಲ್ಡರ ಉದ್ಧೇಶಕ್ಕೆ ಸಹಾಯ ಮಾಡುವುದಾಗಿ ಹೇಳಿ 5 ಜನ ಸದಸ್ಯರಿರುವ ಸಮಿತಿಯನ್ನು ರಚಿಸಲಾಯಿತು.
ಈ ಸಮಿತಿ ಫೆಬ್ರುವರಿ 17 1863 ರಂದು ಸಭೇ ಸೇರಿ ಅಕ್ಟೋಬರ ಹೊತ್ತಿಗೆ ಜೀನೆವಾದಲ್ಲಿ ಅಂತರಾಷ್ಟಿಯ ಸಮ್ಮೇಳವನ್ನು ಏರ್ಪಡಿಸಿ ಸಂಘಟನೆಯನ್ನು ಪ್ರಾರಂಭಿಸಲು ನಿರ್ಧರಿಸಿತು. ಡೊನಾಲ್ಡೊç ವಿಶ್ವದಾದ್ಯಂತ ಸಂಚರಿಸಿ ಇದರ ಉದ್ಧೇಶಗಳ ಬಗೆಗೆ ಎಲ್ಲ ರಾಷ್ಟçಗಳಿಗೆ ಅರಿವು ಮೂಡಿಸಿ ಅವರ ಸತತ ಪ್ರಯತ್ನದಿಂದಾಗಿ 26 ಅಕ್ಟೋಬರ 1863 ರಲ್ಲಿ ಜೀನೆವಾದಲ್ಲಿ ಜರುಗಿದ ಅಂತರಾಷ್ಟಿçÃಯ ಸಮ್ಮೇಳನದಲ್ಲಿ ಇದರ ಕುರಿತು ಚರ್ಚಿಸಲು 16 ರಾಷ್ಟಗಳು ಪಾಲ್ಗೊಂಡಿದ್ದವು ಇದೆ ಸಮ್ಮೇಳನದಲ್ಲಿ “ಗಾಯಗೊಂಡ ಸೈನಿಕರ ಸಹಕಾರ ಸಹಾಯ ಸಂಸ್ಥೆ”ಯನ್ನು ಸ್ಥಾಪಿಸಲು ತೀರ್ಮಾಣ ಕೈಗೊಳ್ಳಲಾಯಿತು. ಮುಂದೆ ಇದೆ ಸಂಸ್ಥೇಯು ರೆಡ್‌ಕ್ರಾಸ್ ಸಂಸ್ಥೆ ಎಂದು ಕರೆಯಲ್ಪಟ್ಟಿತು.
ರೆಡ್‌ಕ್ರಾಸ್ ಸಂಸ್ಥೆಗಾಗಿ ಹಗಲಿರುಳು ಸುಮಾರು 50 ವರ್ಷಗಳ ಕಾಲ ದುಡಿದು ತನ್ನೇಲ್ಲಾ ಆಸ್ತಿಯನ್ನು ಕಳೆದುಕೊಂಡ 1876 ರ ಸಮಯಕ್ಕಾಗಲೇ ಪೂರ್ಣ ಬಡವನಾಗಿ ಬದುಕಿಗಾಗಿ ಕಷ್ಟ ಪಡುತ್ತಾ ಮರೆಯಾಗಿ ಹೋಗಿದ್ದ 1877 ರಲ್ಲಿ ಪಶ್ಚಿಮ ಸ್ವೀಟ್ಜರಲ್ಯಾಂಡನ್ ಹೈಡನ್‌ನಲ್ಲಿ ಮತ್ತೆ ಕಾಣಿಸಿಕೊಂಡಿದ್ದ ಮುಂದಿನ ದಿನಗಳಲ್ಲಿ ಅಂದರೆ 1895 ರಲ್ಲಿ ಹೈಡನ್ ನಗರಕ್ಕೆ ಬಂದ ಪತ್ರಕರ್ತನೊಬ್ಬ ಡೊನಾಲ್ಡರವರನ್ನು ಸಂದರ್ಶನ ಮಾಡಿ ಅವರ ಸಾಧನೆಗಳನ್ನು ಮತ್ತು ರೆಡ್‌ಕ್ರಾಸ್‌ನ ಧ್ಯೇಯೊದ್ದೇಶಗಳನ್ನು ಪ್ರಕಟಿಸಿ ಅದು ಅಂದು ತುಂಬಾ ಪ್ರಚಾರ ಪಡೆದುಕೊಂಡಿತು. ಅವರು ಮಾಡಿದ ಈ ಮಹಾನ್ ಕಾರ್ಯಕ್ಕಾಗಿ 19ನೇ ಶತಮಾನದ ಸರ್ವೋಚ್ಛ ಮಾನವೀಯ ಸಾಧನೆಗೆ ನೋಬೆಲ ಸಮಿತಿಯು “ಮೋದಲ ನೋಬೆಲ ಸಾಂತಿ ಪ್ರಶಸ್ತಿಯನ್ನು” ನೀಡಿ ಗೌರವಿಸಿತು 30 ಅಕ್ಟೋಬರ 1910 ರಂದು ಹೆನ್ರಿ ಡೊನಾಲ್ಡರವರು ಹೈಡನ ನಗರದಲ್ಲಿ ಮೃತರಾದರು ಹೆನ್ರಿ ಡೊನಾಲ್ಡರ ಜನ್ಮ ದಿನವಾದ ಮೇ 8 ನ್ನು ಪ್ರತಿ ವರ್ಷ “ವಿಶ್ವ ರೆಡ್‌ಕ್ರಾಸ” ದಿನವೆಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
ಭಾರತ ಶಾಸನ ಸಭೆಯ ವಿಧೇಯಕದ ಪ್ರಕಾರ 1920 ರಲ್ಲಿ ರೆಡ್‌ಕ್ರಾಸ್ ಸಂಸ್ಥೆ ಆರಂಭವಾಯಿತು ದೇಶಾದ್ಯಂತ ಹಲವಾರು ಶಾಖೆಗಳನ್ನು ಹೊಂದಿದ್ದು ಇದು ಕರ್ನಾಟಕದಲ್ಲಿ 1921 ರಂದು ಅಸ್ತಿತ್ವಕ್ಕೆ ಬಂದಿತು ಇದರ ಅದ್ಯಕ್ಷರಾಗಿ ರಾಷ್ಟಪತಿಗಳು ಮತ್ತು ರಾಜ್ಯದಲ್ಲಿ ರಾಜ್ಯಪಾಲರು ಅದ್ಯಕ್ಷರಾಗಿರುತ್ತಾರೆ.
ರೆಡ್‌ಕ್ರಾಸ್ ಲಾಂಛನ:
ಬಿಳಿ ಬಣ್ಣದ ಮೇಲೆ ಕೆಂಪು ಕ್ರಾಸ ಹೊಂದಿರುವ ಲಾಂಛನವು ರೆಡ್‌ಕ್ರಾಸ ಸಂಸ್ಥೇಯ ಸಂಕೇತ ಚಿನ್ಹೆಯಾಗಿದೆ ಕ್ರಾಸ್‌ನ ಎಲ್ಲಾ ಬಾಹುಗಳು ಸಮಾನವಾಗಿರುತ್ತವೆ. ಈ ಚಿನ್ಹೆಯನ್ನು ಯುದ್ಧದ ಸಂಧರ್ಬದಲ್ಲಿ ತಟಸ್ಥ ಸಂಕೇತವೆAದು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಸಾಮಾನಬ್ಯವಾಗಿ ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಸಕೇಂತವನ್ನು ಬಳಸಲಾಗುವುದು. ಯುದ್ಧಕಾಲದಲ್ಲಿನ ಸಮಯದಲ್ಲಿ ಅಗತ್ಯವಿರುವ ಸೇವೆ ಮತ್ತು ತುರ್ತು ವೈಧ್ಯಕೀಯ ನೆರವು ಇತ್ಯಾದಿಗಳನ್ನು ಪೂರೈಸುವಾಗ ಈ ಸೇವಾ ಕಾರ್ಯದಲ್ಲಿ ತೊಡಗಿದವರು ಯುದ್ಧದಿಂದ ಹೊರತಾದವರು. ಎಂಬ ಸಂಕೇತವನ್ನು ಈ ಲಾಂಛನವು ಸೂಚಿಸುತ್ತದೆ.
ರೆಡ್‌ಕ್ರಾಸ್‌ನ ಮೂಲಭುತ ತತ್ವಗಳು:
ಮಾನವೀಯತೆಯಿಂಧ ಶಾಂತಿಯ ಕಡೆಗೆ ಎಂಬ ಉದ್ಧೇಶದೊಂದಿಗೆ ರೆಡ್‌ಕ್ರಾಸ್ ಸಂಸ್ಥೆಯ 7 ಮೂಲಭೂತ ತತ್ವಗಳನ್ನು ಹೊಂದಿದ್ದು ಅವು ಮಾನವೀಯತೆ, ನಿಷ್ಪಕ್ಷಪಾತ, ಸ್ವಾತಂತ್ರö್ಯ, ಸ್ವಯಂ ಸೇವೆ, ಏಕತೆ, ವಿಶ್ವವ್ಯಾಪಕತೆ, ತಟಸ್ಥತೆ.
ರೆಡ್‌ಕ್ರಾಸ್ ಕಾರ್ಯಗಳು:
• ಸ್ವಯಂ ಸೇವಕರ ತರಬೇತಿ:
ಸ್ವಯಂ ಸೇವಕರೆಂದು ನೇಮಕಗೊಂಡವರಿಗೆ ಅವರ ಪಾತ್ರ ಹೊಣೆಗಾರಿಕೆಯನ್ನು ತಾವೆ ಮಾಡಿಕೊಂಡು ಶಿಕ್ಷಣವನ್ನು ನೀಡುವುದು, ರೆಡ್‌ಕ್ರಾಸ್ ಬಗ್ಗೆ ಮಾಹಿತಿ ತಿಳಿಸುತ್ತಾ ಕಾರ್ಯನಿರ್ವಹಣೆಗಾಗಿ ತಮ್ಮ ಕೌಶಲ್ಯ ವ್ಯಕ್ತಪಡಿಸಿ, ಒಳ್ಳೇಯ ಮನೋಭಾವ, ಅರಿವು ಮೂಡಿಸುವುದು.
ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಮತ್ತು ಪೂರ್ವ ತಯಾರಿಯ ಬಗೆಗೆ ತರಬೇತಿ ನೀಡುವುದು ಇತ್ತಿಚಿನ ದಿನಗಳಲ್ಲಿ ಪದೆ ಪದೆ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಿಂದಾಗಿ ಪ್ರಾಣ ಹಾನಿಯಾಗುತ್ತಿದ್ದು. ಅದರ ಸಲುವಾಗಿ ವಿಪತ್ತಿನ ಮುನ್ಸೂಚನೆ ವ್ಯವಸ್ಥಾಪನೋಪಾಯ, ಪಾರು ಮಾಡುವಿಕೆ, ಪರಿಹಾರ ಒದಗಿಸುವುದು, ಪುನರ್ವಸತಿ ಕಲ್ಪಿಸಿ ಕೊಡುವುದು, ಮತ್ತು ಆರೋಗ್ಯ ರಕ್ಷಣೆಯ ಬಗೆಗೆ ಸ್ವಯಂ ಸೇವಕರಿಗೆ ತರಬೇತಿ ನೀಡುವುದು.
• ರಕ್ತದಾನಕ್ಕೆ ಪ್ರೇರಣೆ ನೀಡುವುದು :
ಅಪಘಾತ ಮತ್ತು ತುರ್ತು ಪರಿಸ್ಥೀತಿಯಲ್ಲಿ ಸಂಭವಿಸಿದ ಘಟನೆಯಿಂದಾಗಿ ಹಲವರು ರಕ್ತ ಸ್ರಾವದಿಂದ ಪ್ರಾಣ ಕಳೆದುಕೊಳ್ಳುವ ಸಂಭವ ಜಾಸ್ತಿಯಾಗಿರುತ್ತದೆ. ಇದ್ಕಕಾಗಿ ರಕ್ತದಾನದ ಮಹತ್ವದ ಕುರಿತು ಮತ್ತು ಯಾರು ರಕ್ತದಾನ ಮಾಡಬಹುದು ಯಾರೂ ರಕ್ತದಾನವನ್ನು ಮಾಡಬಾರದು ಮತ್ತು ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಆಗುವ ಅನುಕೂಲಗಳ ಬಗೆಗೆ ಅರಿವು ಮೂಡಿಸಿ ಜನರಲ್ಲಿ ರಕ್ತದಾನದ ಬಗೆಗೆ ಪ್ರೇರಣೆ ನೀಡುವುದು.
• ಪ್ರಥಮ ಚಿಕಿತ್ಸೆ ತರಬೇತಿ:
ಅಪಘಾತವಾದ ಸಂಧರ್ಬದಲ್ಲಿಯೇ ವ್ಯಕ್ತೀಯ ಪ್ರಾಣ ಹಾನಿಯಾಗುವ ಸಂಭವ ಇರುವುದರಿಂದ ಪ್ರಥಮ ಚಿಕಿತ್ಸೆಯಿಂದಾಗಿ ಅವರ ಪ್ರಾಣ ಉಳಿಸಬಹುದಾಗಿದೆ ಅದಕ್ಕಾಗಿ ಅದರ ಉದ್ಧೇಶವಾದ ಘಟನಾ ಸ್ಥಳದಲ್ಲಿರುವವರನ್ನು ರಕ್ಷಣೆ ಮಾಡಿ ಹೆಚ್ಚಿನ ಅಪಾಯಕ್ಕೆ ತಡೆವೊಡ್ಡುವುದು. ಚಿಕಿತ್ಸೆ ದೊರೆಯವ ವರೆಗೂ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳುವುದು. ಸುರಕ್ಷಿತ ಸ್ಥಳಕ್ಕೆ ರೋಗೀಯನ್ನು ಸ್ಥಳಾಂತರ ಮಾಡುವುದು ರಕ್ತಸ್ರಾವ ಆಗದಂತೆ ನೋಡಿಕೊಳ್ಳುವುದು ಚಿಕಿತ್ಸಕರು ಗಮನಿಸಬೇಕಾದ ಸಂಗತಿಗಳಾಗಿವೆ.
• ಆರೋಗ್ಯ ಜಾಗೃತಿ ಕಾರ್ಯಕ್ರಮ:
ರೋಗಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಆ ರೋಗದ ಲಕ್ಷಣಗಳ ಬಗೆಗೆ ಹಾಗೂ ಅದನ್ನು ತಡೆಗಟ್ಟುವ ವಿಧಾನಗಳ ಬಗೆಗೆ ಜನರಿಗೆ ಅರಿವು ಮೂಡಿಸುವುದರ ಮೂಲಕ ರೂಗವನ್ನು ತಡೆಗಟ್ಟುವುದು. ಇದಕ್ಕೆ ಸಂಬAಧಿಸಿದoತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಅಂತರಾಷ್ಟೀಯ ಸಂಸ್ಥೇಯಾದ ರೆಡ್‌ಕ್ರಾಸ್ ಸಂಸ್ಥೇಯು ಸಾರ್ವಕಾಲಿಕ ಸೇವಾ ಸಂಘಟನೆಯಾಗಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬoತೆ ಶೈಕ್ಷಣಿಕ ರಂಗದಲ್ಲಿ ವಿಧ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸಿ ಅವರು ಜೀನದುದ್ದಕ್ಕೂ ಅವುಗಳನ್ನು ಅಳವಡಿಸಿಕೊಂಡು ಒಬ್ಬ ಉತ್ತಮ ಪ್ರಜೆಯನ್ನಾಗಿ ರೂಪಗೊಳಿಸುವ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ಸಹಾಯಕಾರಿಯಾಗಿದೆ.
ಈ ರೀತಿ ಹಲವಾರು ಅಂದರೆ ಏಡ್ಸ್, ಕ್ಯಾನ್ಸರ್, ಮಲೇರಿಯಾ, ಪ್ಲೇಗ, ಕ್ಷಯರೋಗ್, ಕುಷ್ಠರೋಗ ಜೊತೆಗೆ ಇಧೀಗ ಹರಡಿರುವ ಕರೋನದಂತ್ತಹ ಮಹಾಮಾರಿಗೆ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಮುಂತ್ತಾದ ರೋಗಗಳನ್ನು ನಿಯಂತ್ರಿಸಿ ತಡೆಗಟ್ಟುವಲ್ಲಿ ಈ ರೆಡ್‌ಕ್ರಾಸ್‌ನ ಕಾರ್ಯ ಶ್ಲಾಘನೀಯ.
ಇಂದಿನ ದಿನಗಳಲ್ಲಿ ದೇಶವನ್ನೆ ತಲ್ಲನಗೊಳಿಸುವಂತ್ತೆ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕರೋನ ವಾರಿರ‍್ಸ ಆಗಿ ಡಾಕ್ಟರ್, ಪೋಲಿಸ್, ಪೌರಕಾರ್ಮಿಕರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಾದ್ಯಮದವರು ಜೊತೆಗೆ ಕರೋನ ಜಾಗೃತಿ ಮೂಡಿಸುವಲ್ಲಿ ಯಶಸ್ಸಿನ ಹಾದಿಯತ್ತ ನಡೆದುಕೊಂಡು ಅವಶ್ಯಕತೆ ಇರುವವರಿಗೆ ಮಾಸ್ಕ್ ಸ್ಯಾನೀಟ್ಯಸರ್ ದೀನಸಿ ಪದಾರ್ಥಗಳು ಹೀಗೆ ಹಲವಾಲು ಪರಿಕರಗಳನ್ನು ನೀಡಿ ಜನರ ಜೀವನವನ್ನು ಸುಗಮಗೊಳಿಸುವಲ್ಲಿ ಭಾರತೀಯ ರೆಡ್‌ಕ್ರಾಸ್ ಕೂಡ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಎಲ್ಲರಿಗೂ ಅಂತರಾಷ್ಟಿಯ ರೆಡ್‌ಕ್ರಾಸ್ ದಿನದ ಶುಭಾಷಯಗಳು.
ಪ್ರೋ. ಸಂಗಮೇಶ ಹಿರೇಮಠ. & ಪ್ರೋ. ಪ್ರದೀಪ ಎ.ಎನ್.
ಡಾ|| ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯ ಮುಗಳಖೋಡ
ತಾ|| ರಾಯಬಾಗ ಬೆಳಗಾವಿ ಜಿಲ್ಲೆ
Share
WhatsApp
Follow by Email