ಕೃಷಿ ಇಲಾಖೆಯಿಂದ ನಡೆಯುತ್ತಿರುವ ಬದು ನಿರ್ಮಾಣ

ಕೃಷಿ ಇಲಾಖೆಯಿಂದ ನಡೆಯುತ್ತಿರುವ ಬದು ನಿರ್ಮಾಣ

ಅರಟಾಳ ; ಗ್ರಾಮದಲ್ಲಿ ರೈತರ ಜಮೀನಿನಲ್ಲಿ ವಯಕ್ತಿಕ ಬದು ನಿರ್ಮಾಣ ಕೆಲಸವು ಬರದಿಂದ ಸಾಗಿದೆ. ಎಲ್ಲ ಕೂಲಿ ಕಾರ್ಮಿಕರು ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಇಲಾಖೆ ತಾಂತ್ರಿಕ ಸಾಹಾಯಕ ನಿಂಗಪ್ಪ ಮೋಕಾಶಿ ಹೇಳಿದರು.
ಅವರು ಗುರುವಾರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ನಡೆಯುತ್ತಿರುವ ಬದು ನಿರ್ಮಾಣ ಕಾಮಗಾರಿ ಪರಿಶ್ಲಿಸಿ ಮಾತನಾಡಿ, ಈ ವರ್ಷ ಕರೊನಾ ವೈರಸ್‌ದಿಂದ ತತ್ತರಿಸಿರುವ ಕೂಲಿ ಕಾರ್ಮಿಕರಿಗೆ ಕೃಷಿ ಇಲಾಖೆ ಕೂಲಿ ಕೆಲಸ ಪ್ರಾರಂಭಿಸಿದೆ. ಪ್ರತಿ ದಿನ ಬದು ನಿರ್ಮಾಣ ಕಾಮಗಾರಿಯಲ್ಲಿ 200 ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು. ಬದು ನಿರ್ಮಾಣದಿಂದ ರೈತರಿಗೆ ನೀರಿನ ಪ್ರಮಾಣ ಹೆಚ್ಚಾಗುವುದು. ದುಡಿಯುವ ಕೈಗಳಿಗೆ ಕೂಲಿ ಕೆಲಸ ಕೊಡುವುದರಿಂದ ಅವರ ಆದಾಯವು ಹೆಚ್ಚಾಗುವುದುಲಾಕ್ ಡೌನ್ ಆಗಿರುವುರಿಂದ ಕೆಲಸವಿಲ್ಲದೆ ಮನೆಯಲ್ಲಿ ಕಾಲ ಕಳೆಯುವ ಕೂಲಿ ಕಾರ್ಮಿಕರಿಗೆ ಬದು ನಿರ್ಮಾಣ ಕಾಮಗಾರಿಯಿಂದ ಅನುಕೂಲವಾಗಲ್ಲಿದೆ. ಒಬ್ಬರಿಗೆ ದಿನಕ್ಕೆ 275 ರೂ ಕೂಲಿ ಸಿಗುತ್ತದೆ ಎಂದರು.
ಬಿಎಫ್‌ಟಿ ವಿಜಯ ಉಪ್ಪಾರ, ಭೀಮಸೇನ ಭಂಜತ್ರಿ, ಕರವೇ ಅಧ್ಯಕ್ಷ ಶ್ರೀಶೈಲ ಪೂಜಾರಿ, ಮಲ್ಲಿಕಾರ್ಜುನ ತೆಲಸಂಗ, ಪರಶುರಾಮ ಮಾದರ, ವಿಠ್ಠಲ ಹಟ್ಟಿ, ಅಮೋಘಿ ಪೂಜಾರಿ ಇದ್ದರು.
Share
WhatsApp
Follow by Email