ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಲಾಕಡೌನ್ ಸಡಿಲಿಕೆ

ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಲಾಕಡೌನ್ ಸಡಿಲಿಕೆ

ರಬಕವಿ-ಬನಹಟ್ಟಿ : ಕೋವಿಡ್ ೧೯ ವೈರಸ್‌ನಿಂದ ಲಾಕಡೌನ್ ಆಗಿರುವ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಲಾಕಡೌನ್ ಸಡಿಲಿಕೆ ಮಾಡಲು ತಾಲಾಕಾಡಳಿತ ನಿರ್ಧರಿಸಿದೆ. ರಬಕವಿ-ಬನಹಟ್ಟಿ ನಗರಸಭೆಯ ಸಭಾಂಗಣದಲ್ಲಿ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಲಾಕಡೌನ್ ಸಡಿಲಿಕೆಯ ನಿರ್ಧಾರ ಕೈಗೊಳ್ಳಲಾಗಿದೆ.
ನೇಕಾರ ಸಮ್ಮಾನ ಯೋಜನೆಯಡಿ ಪ್ರತಿ ಕೈಮಗ್ಗ ನೇಕಾರ, ಪಾವರಲೂಮ್ ಕೂಲಿ ನೇಕಾರರ ಖಾತೆಗೆ ಪ್ರತಿ ವರ್ಷ ರೂ. ೨ ಸಾವಿರ ನೀಡಲಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ತಿಳಿಸಿದ್ದಾರೆ. ಆರು ಮಗ್ಗಗಳಿಗಿಂತ ಕಡಿಮೆ ಮಗ್ಗಗಳನ್ನು ಹೊಂದಿರುವ ನೇಕಾರ, ಕೂಲಿ ನೇಕಾರ, ಕೈಮಗ್ಗ ನೇಕಾರರು ಈ ಯೋಜನೆಯ ಮಾನ್ಯರು ಎಂದು ಶಾಸಕರು ಹೇಳಿದ್ದಾರೆ.
ತಾಲೂಕಿನಾದ್ಯಂತ ಬರುವ ಕಿರಾಣಿ ಅಂಗಡಿ, ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳನ್ನು ತೆರೆಯುವುದಲ್ಲದೆ ಹೊಟೆಲ್‌ಗಳ ಪಾರ್ಸಲ್ ಸೇವೆ ನೀಡಲು ಶುಕ್ರವಾರದಿಂದ ಪ್ರಾರಂಭಿಸಲು ಅನುವು ಮಾಡಿಕೊಡಲಾಗುವುದೆಂದು ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.
ಲಾಕಡೌನ್ ಸಡಿಲಿಕೆಯ ವೇಳೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಂಡು ಹೋಗುವುದು, ಬೆಳಿಗ್ಗೆ ಆರು ಗಂಟೆಯಿAದ ಸಂಜೆ ಆರು ಗಂಟೆಯೊಳಗೆ ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋಗಬಹುದು. ಸರಕಾರದ ಆದೇಶಗಳನ್ನು ಉಲ್ಲಂಘಿಸಿದರೆ ಅಂಗಡಿಯ ಲೈನ್ಸಸ್ ರದ್ದು ಪಡಿಸುವುದಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹೋದರೆ ದಂಡ ವಿಧಿಸಲಾಗುವುದು ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.
ರ-ಬ ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ, ಉಪ ತಹಶೀಲ್ದಾರ ಸದಾಶಿವ ಕಾಂಬಳೆ, ಬನಹಟ್ಟಿ ವಲಯ ವೃತ್ತಾಧಿಕಾರಿ ಜೆ.ಕರುಣೇಶಗೌಡ, ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ತೇರದಾಳ ಠಾಣಾಧಿಕಾರಿ ವಿಜಯಕುಮಾರ ಕಾಂಬಳೆ, ಮಹಾಲಿಂಗಪುರ ಠಾಣಾಧಿಕಾರಿ ಘಾಟಗೆ, ತೇರದಾಳ ಕಂದಾಯ ನೀರಿಕ್ಷಕ ಬಸವರಾಜ ತಾಳಿಕೋಟಿ, ಮಹಾಲಿಂಗಪುರ ನಗರಸಭೆ ಪೌರಾಯುಕ್ತ ಬಾಬುರಾವ ಕಮತಗಿ, ತೇರದಾಳ ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 
Share
WhatsApp
Follow by Email