ಗಡಿಯಲ್ಲಿ ಕಟ್ಟೆಚ್ಚರಕ್ಕೆ ಮನವಿ

ಗಡಿಯಲ್ಲಿ ಕಟ್ಟೆಚ್ಚರಕ್ಕೆ ಮನವಿ

ಅಥಣಿ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಮಹಾರಾಷ್ಟ್ರ ಗಡಿಗೆ ಹೊಂದಿಕೊAಡಿದ್ದು ಮಹಾರಾಷ್ಟ್ರದ ಮೀರಜ್,ಜತ್ತ,ಕೊಲ್ಹಾಪುರ ಸೇರಿದಂತೆ ಹಲವು ಕಡೆಯಿಂದ ಪ್ರಯಾಣಿಕರು ಮತ್ತು ವಲಸೆ ಕಾರ್ಮಿಕರು ಅಥಣಿ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.ಇದರಿಂದಾಗಿ ಅಥಣಿ ತಾಲೂಕಿನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕೊರೊನಾ ಪಾಜಿಟಿವ್ ಪ್ರಕರಣ ಪತ್ತೆ ಆಗದಿದ್ದರೂ ಕೂಡ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.ಆದ್ದರಿAದ ಗಡಿಭಾಗದಲ್ಲಿ ಅಂತರ್ ರಾಜ್ಯ ಸಾರ್ವಜನಿಕರ ಪ್ರವೇಶ ತಡೆಯಬೇಕು ಎಂದು ಆಗ್ರಹಿಸಿ ಪ್ರಜಾ ಪರಿವರ್ತನಾ ಫೌಂಡೇಶನ್ ವತಿಯಿಂದ ಅಥಣಿ ಉಪ ತಹಶಿಲ್ದಾರ ರಾಜೇಂದ್ರ ಬುರ್ಲಿ ಅವರಿಗೆ ಮನವಿ ಸಲ್ಲಿಸಲಾಯಿತು.
ಲಾಕ್ ಡೌನ್ ಇದ್ದರೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಕಂಡುಬರುತ್ತಿದ್ದು ಸಾರ್ವಜನಿಕರು ಇನ್ನಷ್ಟು ದಿನ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಆಗಾಗ ಕೈ ತೊಳೆದುಕೊಂಡು ಕೊರೊನಾ ಹರಡದಂತೆ ಸಹಕರಿಸಬೇಕು ಎಂದು ಪ್ರಜಾ ಪರಿವರ್ತನಾ ಪೌಂಢೇಶನ್ ಚಿದಾನಂದ ಶೇಗುಣಸಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ವೇಳೆ ಕಾರ್ಯಾದ್ಯಕ್ಷರಾದ ದೀಪಕ ಬುರ್ಲಿ, ಗೌರವ ಅದ್ಯಕ್ಷರಾದ ಚಿದಾನಂದ ಶೇಗುಣಸಿ, ಕಾರ್ಯದರ್ಶಿ ಶಶಿಧರ ಬರ್ಲಿ ಹಾಗೂ ಬಸವರಾಜ ಹಿಪ್ಪರಗಿ, ಶ್ರೀಧರ ಶೆಟ್ಟಿ, ಪ್ರಶಾಂತ ಪೂಜಾರಿ, ಪ್ರಕಾಶ ಕುಳ್ಳೋಳ್ಳಿ , ಸಚಿನ ಬೋಸಲೆ, ಸೃಷ್ಟಿ ನರಟ್ಟಿ ಸೇರಿದಂತೆ ಇತರರು ಇದ್ದರು.
Share
WhatsApp
Follow by Email