ಬ್ರೇಕಿಂಗ್ ನ್ಯೂಸ್ ನೀಲಕಂಠ ಕಪ್ಪಲಗುದ್ದಿ ಕಾರ್ಯ ಶ್ಲಾಘನಿಯ–ಅರುಣಕುಮಾರ 08/05/202008/05/2020 admin ಮೂಡಲಗಿ: ಕೊರೋನಾ ವಾರಿರ‍್ರ್ಸಗೆ ಅನ್ನದಾನ ಮಾಡಿರು ನೀಲಕಂಠ ಕಪ್ಪಲಗುದ್ದಿ ಅವರ ಕಾರ್ಯ ಕಲ್ಲೋಳಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅರುಣಕುಮಾರ ಅವರು ಶ್ಲಾಘಿಸಿದ್ದರು.ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಕೊವೀಡ 19 ವಾರಿರ‍್ರ್ಸಗೆ ಬೋಜನ ವ್ಯವಸ್ಥೆ ಮಾಡಿದ ಸಂದರ್ಭದಲ್ಲಿ ಮಾತನಾಡಿದರು. ದಾನದಲ್ಲಿ ಅನ್ನದಾನ ಶ್ರೇಷ್ಠವಾದದ್ದು ಎಂದರು.ಅನ್ನ ದಾನಿ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬ.ಕಪ್ಪಲಗುದಿ ಇವರು ಮಾತನಾಡಿ ಕಳೆದ ಸುಮಾರು 44 ದಿನದಿಂದ ಕಲ್ಲೋಳಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯತ, ಪ್ರಾಥಮಿಕ ಆರೋಗ್ಯ ಕೇಂದ್ರದ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ ಸಿಬ್ಬಂದಿ ವರ್ಗ, ಹೆಸ್ಕಾಂ ಮತ್ತು ಪಶು ಚಿಕೀಸ್ಥಾಕೆಂದ್ರದ ಸಿಬ್ಬಂದಿ ವರ್ಗದವರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೊರೊನಾ ವೈರಸ ವಿರುದ್ದ ಹೋರಾಡಾತ್ತಿರುವದು ಅವರ ತ್ಯಾಗ ಮತ್ತು ಸೇವೆ ಅತ್ಯಮೂಲವಾದದ್ದು, ಅವರ ಸೇವಾ ಮನೋಭಾವನೆಗೆ ಕೃತಜ್ಣತೆಗಳು, ಅನ್ನ ದಾನ ಮೂಲಕ ನಾನು ಅಳಿಲು ಸೇವೆ ಮಾಡುತ್ತಿದ್ದೆನೆಂದರು.ಈ ವೇಳೆಯಲ್ಲಿ ಯುವ ಧುರಿಣ ಸುಭಾಸ ಬ.ಕುರಬೇಟ, ಪಟ್ಟಣ ಪಂಚಾಯತ ಸದಸ್ಯ ಬಸವರಾಜ ಖ.ಯಾದಗೂಡ ಹಾಗೂ ದಿ ಕಲ್ಲೋಳಿ ಸೌಹಾರ್ದ ಸಹಕಾರಿಯ ವ್ಯಸ್ಥಾಪಕ ರಾಮಣ್ಣ ರಾ.ಕಂಕಣವಾಡಿ ಹಾಗೂ ಬಸವರಾಜ ಕಪ್ಪಲಗುದ್ದಿ ಸಮೂಹ ಸಂಘ ಸಂಸ್ಥೆಗಳ ಸಿಬ್ಬಂದಿ ವರ್ಗ ಮತ್ತಿತರು ಉಪಸ್ಥಿತರಿದ್ದರು. Share