
ಶನಿವಾರ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ವೈಯಕ್ತಿಕವಾಗಿ 5 ಕೆಜಿ ಗೋಧಿ ಹಿಟ್ಟು, 1 ಕೆಜಿ ಸಕ್ಕರೆ, 1 ಕೆಜಿ ರವಾ, 1 ಕೆಜಿ ಬೇಳೆ, 1 ಕೆಜಿ ಅಡುಗೆ ಎಣ್ಣೆ, ಉಪ್ಪು ಮತ್ತು ಚಹಾಪುಡಿ ಒಳಗೊಂಡ ಒಂದು ಸಾವಿರಕ್ಕೂ ಹೆಚ್ಚು ಆಹಾರ ಕಿಟ್‌ಗಳನ್ನು ಪಟ್ಟಣದ ವಿವಿಧೆಡೆ ಸಂಚರಿಸಿ ಪೌರಕಾರ್ಮಿಕರು ಮತ್ತು ಬಡಕುಟುಂಬಗಳಿಗೆ ವಿತರಿಸಿದರು. ಕೆಲ ದಿನಗಳ ಹಿಂದೆ ಮನೆಯಲ್ಲೇ ರುಚಿಕರವಾದ ಆಹಾರ ಪೊಟ್ಟಣ ತಯಾರಿಸಿ ಪಟ್ಟಣದ ನಿರ್ಗತಿಕರಿಗೆ ಹಂಚಿದ್ದನ್ನು ಸ್ಮರಿಸಬಹುದು. ಈ ಸಂದರ್ಭದಲ್ಲಿ ಹರುಣ ತರೆಡೆ, ಮಹಿಬೂಬ ಜಮಾದಾರ, ಕುಮಾರ ಹಾರೂಗೇರಿ, ಶಿವಾಜಿ ಸೌಂದಲಗಿ, ಇರ್ಫಾಣ ತರಡೆ, ಮಹಮ್ಮಹುಸೇನ್ ನಗಾರ್ಜಿ, ಅಸ್ಕರ ತರಡೆ, ಮಾಶೆಟ್ಟಿ ಈರಗಾರ, ಭರಮು ಕೋಳಿ, ಆಯುಬ ತರಡೆ, ಆಯುಬ ದಳವಾಯಿ, ಹಬೀಬ ಬಾಡಿವಾಲೆ, ಇರ್ಷಾದ ಐನಾಪೂರೆ, ಸುಮೀತ ಶೆಟ್ಟಿ, ಬಾಷಾ ಮುಲ್ಲಾ ಹಾಗೂ ಪಪಂ ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ವೈದ್ಯಾಧಿಕಾರಿ ಜೀವನ್ ಹೊಸಟ್ಟಿ ಮತ್ತು ಸಾರ್ವಜನಿಕರು ಇದ್ದರು.