ಬ್ರೇಕಿಂಗ್ ನ್ಯೂಸ್ ಗೋಕಾಕ ಕೊಲೆ ಖಂಡಿಸಿ ತಹಸೀಲ್ದಾರ್ ಮುಖಾಂತರ ಸಿಎಂ ಗೆ ಮನವಿ 11/05/202011/05/2020 admin ಮೂಡಲಗಿ: ಗೋಕಾಕ ನಗರದಲ್ಲಿ ಬುಧವಾರ ಜರುಗಿದ ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಅರ್ಜುನ್ ಕಣಮಡಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಭೀಕರ ಕೃತ್ಯವನ್ನು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಉಗ್ರವಾಗಿ ಖಂಡಿಸಿ, ಇಂತಹ ಕೃತ್ಯಗಳು ಮುಂದುವರೆದರೆ ಸಮುದಾಯ ಸಮುದಾಯಗಳ ನಡುವೆ ಘರ್ಷಣೆಗಳು ಉಂಟಾಗಿ ಕಾನೂನು ಸುವ್ಯವಸ್ಥೆಯು ಹದಗೆಡುವ ಸಂಭವವಿರುತ್ತದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ಇವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಡಿಎಸ್‍ಎಸ್ ಸಂಘಟನೆಯವರು ನೀಡಿರುತ್ತಾರೆ.ಕೊಲೆ ಹಿಂದೆ ಕೆಲವೊಂದು ದಲಿತ ವಿರೋಧಿ ಅಂಗ ಸಂಸ್ಥೆಗಳಾದ ಆರ್.ಎಸ್.ಎಸ್. ಭಜರಂಗದಳ, ಹಾಗೂ ರಾಮಸೇನಾ ಸಂಘಟನೆಗಳ ಕೈವಾಡ ಇರುತ್ತದೆ. ಜನಾಂಗೀಯ ದ್ವೇಷದಿಂದ ಆದ ಕೊಲೆ ಎಂದು ಸಂಶಯ ವ್ಯಕ್ತವಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರ ಮೇಲೆ ಈ ರೀತಿಯ ದೌರ್ಜನ್ಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡುಮೇಲು ಮಾಡುವ ಇಂಥಹ ಕೃತ್ಯಗಳು ನಡೆಯುತ್ತಲೇ ಇವೆ. ರಾಜ್ಯದ ವಿವಿದ ಜಿಲ್ಲೆಗಳಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಹಾಗೂ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಬಹಿಷ್ಕಾರ, ಕೊಲೆ ಮುಂದುವರಿದಿವೆ. ರಾಜ್ಯ ಗೃಹ ಇಲಾಖೆ ಮತು ಸಮಾಜ ಕಲ್ಯಾಣ ಇಲಾಖೆ ಒಟ್ಟಾರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.ಮೃತ ಸಿದ್ದು ಕಣಮಡಿ ಈತನು ಮಾರಣಾಂತಿಕ ಹಲ್ಲೆಯ ನಂತರ ಮರಣಹೊಂದುವ ಪೂರ್ವದಲ್ಲಿಯೇ ವಿಡಿಯೋ ಮುಖಾಂತರ ಹಲ್ಲೆ ಮಾಡಿದ ವ್ಯಕ್ತಿಗಳು ಮತ್ತು ಕೊಲೆ ಮಾಡಲು ಕುಮ್ಮಕ್ಕು ನೀಡಿರುವ ವ್ಯಕ್ತಿಗಳ ಹೆಸರನ್ನು ಹೇಳಿರುತ್ತಾನೆ. ಕಾರಣ ಮರಣ ಪೂರ್ವ ಅವನ ಹೇಳಿಕೆಯ ಆಧಾರದ ಮೇಲೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ನಿಜವಾದ ಆರೋಪಿಗಳನ್ನು ಬಂದಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರನ್ನು ಬಂಧಿಸುವಲ್ಲಿ ವಿಳಂಬವಾದರೆ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಬೀದಿಗಿಳಿದು ರಾಜ್ಯಾದ್ಯಾಂತ ಉಗ್ರ ಪ್ರತಿಭಟನೆ ಧರಣಿ ಸತ್ಯಾಗ್ರಹಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಜಿಲ್ಲಾ ಹಾಗೂ ತಾಲೂಕಾ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಸಮೀತಿವತಿಯಿಂದ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ದಾ ಸಣ್ಣಕ್ಕಿ , ಪ್ರಕಾಶ ಮಾದರ, ಡಿ ಎಸ್ ಎಸ್ ತಾಲೂಕಾ ಸಂಚಾಲಕ ಅಶೋಕ ಸಿದ್ಲಿಂಗಪ್ಪಗೋಳ, ಮಾಹಾದೇವ ಮಾಸನ್ನವರ, ಯಶ್ವಂತ ಮಂಟುರ, ಯಲ್ಲಪ್ಪ ಸಣ್ಣಕ್ಕಿ, ರಾಮಣ್ಣ ಬಂಗೇನ್ನವರ, ವಿನೋದ ಹೋಸಮನಿ, ಥಾಮಸ್ ಸಣ್ಣಕ್ಕಿ, ಪ್ರಕಾಶ ಮೂಡಲಗಿ, ವಿಜಯ ಮೂಡಲಗಿ, ಅಶೋಕ ಮೂಡಲಗಿ, ಸುಂದರ್ ಶೆಟ್ಟಿ, ಸುಭಾಸ್ ಖನದಾಳೆ, ನವಿನ ಗಸ್ತಿ, ಮತ್ತಿತರರು ಉಪಸ್ಥಿತರಿದ್ದರು. Share