ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೈತನಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಮುಗಳಖೋಡ : ರಾಯಬಾಗ ತಾಲೂಕಿನ ಸುಲ್ತಾನಪುರದಲ್ಲಿ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ರೈತ, ಕೊಳವೆ ಬಾವಿಗೆ ಬೀಳುವ ಮುಂಚೆ ತನ್ನ ಶರ್ಟು ಮತ್ತು ಪ್ಯಾಂಟನ್ನು ಕಳಚಿ ಪಕ್ಕಕ್ಕೆ ಇಟ್ಟಿದ್ದನು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಖುದ್ದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ನಿಂತು, ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ವೀಕ್ಷಿಸಿದ ಕೊಳವೆ ಬಾವಿಗೆ ಬಿದ್ದ ರೈತನ ಶರೀರವನ್ನು ಹೋರತೆಗೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಸುಮಾರು 20 ಅಡಿ ಆಳದಲ್ಲಿ ಸಿಲುಕಿದ್ದ ಮೃತದೇಹವನ್ನು, ಪೊಲೀಸರು, ಎನ್.ಡಿ.ಆರ್.ಎಫ್ ತಂಡ ಮತ್ತು ಅಗ್ನಿಶಾಮಕ ದಳದವರು ಅತ್ಯಂತ ಕ್ಷಿಪ್ರವಾಗಿ ಬರೀ ನಾಲ್ಕು ಗಂಟೆಯಲ್ಲಿ ಹೊರಗೆ ತೆಗೆದಿದ್ದಕ್ಕೆ ಅವರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
“ಮೂರು ದಿನಗಳ ಹಿಂದೆ ಕೊರೆಯಲಾಗಿದ್ದ ಕೊಳವೆ ಬಾವಿಗೆ ರೈತ ಬಿದ್ದಿದ್ದಾನೆ. ಬೀಳುವ ಮುಂಚೆ ಶರ್ಟು ಮತ್ತು ಪ್ಯಾಂಟು ತೆಗೆದಿಟ್ಟಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಈ ಕುರಿತಂತೆ ತನಿಖೆ ನಡೆಸಲಿದ್ದಾರೆ. ಸಂಜೆ 7 ಗಂಟೆಗೆ ಕೊಳವೆ ಬಾವಿಗೆ ಬಿದ್ದ ರೈತನ ಶರೀರವನ್ನು ಹೋರತೆಗೆದು ಪರಿಕ್ಷಿಸಿದ ರಾಯಬಾಗ ತಾಲೂಕಾ ವೈದ್ಯಾಧಿಕಾರಿ ಡಾ. ಎಸ್.ಎಸ್.ಭಾನೆ, ಡಾ. ಎಸ್‌ಎಂ ಪಾಟೀಲ್ ನಂತರ ರೈತ ಲಕ್ಕಪ್ಪ ಮೃತನಾಗಿದ್ದಾನೆಂದು ಘೋಸಿಸಿದರು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದ್ದಾರೆ. ಮೃತಪಟ್ಟ ರೈತನಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರಿಗೆ ಸಾಂತ್ವಾನ ಹೇಳಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೈತನಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ
ಈ ಘಟನೆ ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ. ಆದರೂ ಘಟನಾ ಸ್ಥಳಕ್ಕೆ ಬಾರದ ಕುಡಚಿ ಶಾಸಕ ಪಿ. ರಾಜೀವ್.
ಆದರೆ ರೈತ ಕೊಳವೆ ಬಾವಿಗೆ ಬೀಳುವ ಮುನ್ನ ಶರ್ಟು, ಪ್ಯಾಂಟು ಕಳಚಿದ್ದೇಕೆ ಎನ್ನುವ ವಿಷಯ ಈಗ ಎಲ್ಲರನ್ನು ಕಾಡುತ್ತಿದೆ.

ಜೂನ್ 1 ರ ವರೆಗೆ `ಲಾಕ್ ಡೌನ್’ ವಿಸ್ತರಣೆ : ಪ್ರಧಾನಿಯಿಂದ ಮಹತ್ವದ ಘೋಷಣೆ

ಕೊರೊನಾ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಆದರೆ ಕೊರೊನಾ ಭೀತಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 1 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದ್ದು, ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ಕಠಿಣ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಹೇಳಿದರು.
ಲಾಕ್ ಡೌನ್ ಜಾರಿಯಾದ 7 ವಾರಗಳ ನಂತರ ಬ್ರಿಟನ್ ನಲ್ಲಿ ಸುಮಾರು 31,800 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಲಾಕ್ ಸಡಿಲಗೊಳಿಸುವ ಸಮಯ ಇದಲ್ಲ.
ಷರತ್ತುಗಳೊಂದಿಗೆ ಹಂತ ಹಂತವಾಗಿ ಸಿಡಿಲ ಮಾಡುವುದಾಗಿ ತಿಳಿಸಿದ್ದಾರೆ.

ಕೊಳವೆಬಾವಿಗೆ ಬಿದ್ದ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ.

ಸುಲ್ತಾನಪೂರ : ಕೊಳವೆಬಾವಿಗೆ ಬಿದ್ದ 38 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡೊಕೊಡಿರುವ
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ.
ಅಧಿಕಾರಿಗಳಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ
ಮೃತನ ಹೆಂಡತಿಗೆ ಭೇಟಿ ನೀಡಿ ಆ ವ್ಯಕ್ತಿಯು ಸಾಲ ಮಾಡಿರುವ ಬಗ್ಗೆ ಮಾಹಿತಿ ಪಡೆದು, ಬೋರವೆಲ್ ಕೊರೆದ ಬಗ್ಗೆ ವಿಚಾರಿಸಿ, ಮೃತನ ಮಕ್ಕಳ ಬಗ್ಗೆ ವಿಚಾರಿಸಿದ ಜಿಲ್ಲಾಧಿಕಾರಿ.
ಕಾರ್ಯಾಚರಣೆಯನ್ನು ವೀಕ್ಷಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಹಾಗೂ ಕೊಳವೆಬಾವಿಗೆ ಬಿದ್ದ 38 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡೊಕೊಡಿರುವ
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ.
ಅಧಿಕಾರಿಗಳಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ
ಕಾರ್ಯಾಚರಣೆಯನ್ನು ವೀಕ್ಷಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ.

ಕೊಳವೆಬಾವಿಗೆ ಬಿದ್ದ 38 ವರ್ಷದ ವ್ಯಕ್ತಿ: ಸಾಲದ ಸೂಲವೆ ಅವಘಡಕ್ಕೆ ಕಾರಣ, ಬೆಳಗಾವಿಯ ರಾಜ್ಯ ವಿಪತ್ತು ನಿರ್ವಹನಾ ಪಡೆ (ತಂಡ) ಕೂಡಾ ಕಾರ್ಯಾಚರಣೆಯಲ್ಲಿ ಬಾಗಿಯಾಗಿದೆ.

ಮುಗಳಖೋಡ: ಸಮೀಪದ ಸುಲ್ತಾನಪೂರ ಗ್ರಾಮದ ಲಕ್ಕಪ್ಪಾ ಸಂಗಪ್ಪ ದೊಡ್ಡಮನಿ ಎಂಬ 38 ವರ್ಷದ ವ್ಯಕ್ತಿ ಸೋಮವಾರ ದಿ: 11 ರಂದು ಮುಂಜಾನೆ 6ಗಂಟೆಗೆ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ.
ಇತ್ತಿಚಿಗೆ ಅಂದರೆ ದಿ: 07-5-2020 ರಂದು ಸರ್ವೆ ನಂ 67/5 ರಲ್ಲಿ ಲಕ್ಕಪ್ಪಾ ದೊಡ್ಡಮನಿ ಅವರು ಸಾಲ ಮಾಡಿ ಈ ಕೊಳವೆಬಾವಿಯನ್ನು ಕೊರೆಸಿದ್ದರು ಕೊಳವೆಬಾವಿಗೆ ನೀರು ಬಾರದೆ ಇದ್ದಾಗ ಲಕ್ಕಪ್ಪ ಮಾನಸಿಕಗೊಂಡಿದ್ದರು ಅಷ್ಟೆ ಅಲ್ಲದೆ ಸಾಲ ಕೊಟ್ಟ ವ್ಯಕ್ತಿಗಳ ಕಿರುಕುಳದಿಂದಾಗಿ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ರಾಯಬಾಗ ತಹಶೀಲ್ದಾರ ಚಂದ್ರಕಾoತ ಭಜಂತ್ರಿ, ರಾಯಬಾಗ ಸಿಪಿಐ ಕೆ.ಎಸ್.ಹಟ್ಟಿ, ಅಥಣಿ ಡಿವಾಯ್‌ಎಸ್‌ಪಿ ಗಿರೀಶ, ಹಾರೂಗೇರಿ ಠಾಣಾಧಿಕಾರಿ ಯಮನಪ್ಪ ಮಾಂಗ, ಅಗ್ನಿಶಾಮಕ ಸಿಬ್ಬಂದಿ, ರಾಯಬಾಗ ತಾಲೂಕಾ ವೈದ್ಯಾಧಿಕಾರಿಗಳು, ಪೋಲಿಸರು ಆಗಮಿಸಿ 3 ಜೆಸಿಬಿಗಳ ಮುಖಾಂತರ ಕಾರ್ಯಾಚರಣೆ ಆರಂಬಿಸಿ ವ್ಯಕ್ತಿಯನ್ನು ಮೆಲೆತ್ತುವ ಕೆಲಸದಲ್ಲಿ ತೊಡಗಿದ್ದಾರೆ. ಬೆಳಗಾವಿಯ ರಾಜ್ಯ ವಿಪತ್ತು ನಿರ್ವಹನಾ ಪಡೆ (ತಂಡ) ಕೂಡಾ ಕಾರ್ಯಾಚರಣೆಯಲ್ಲಿ ಬಾಗಿಯಾಗಿದೆ. ಸ್ಥಳದಲ್ಲಿ 108 ಅಂಬ್ಯುಲೆನ್ಸ್ ರೆಡಿ ಇದೆ.
ಈ ಕೊಳವೆ ಬಾವಿಗೆ ಬಿದ್ದಿರುವ ವ್ಯಕ್ತಿಗೆ ಹೆಂಡತಿ, 11 ವರ್ಷದ ಮಗ, 9 ವರ್ಷದ ಮಗಳು ಇದ್ದಾರೆ.

ಬನಹಟ್ಟಿಗೂ ವಕ್ಕರಿಸಿದ ಕೊರೊನಾ,20 ವರ್ಷದ ಯುವಕನಿಗೆ ಪಾಸಿಟಿವ ಬಂದ ಹಿನ್ನೆಲೆ ಬನಹಟ್ಟಿ ನಗರದ ಜನರಲ್ಲಿ ಆತಂಕ


ರಬಕವಿ-ಬನಹಟ್ಟಿ : ಗುಜರಾತಿನ ಅಹಮದಾಬಾದ್‌ನಿಂದ ಬನಹಟ್ಟಿಗೆ ಬಂದಿಳಿದ 15 ತಬ್ಲಿಘಿಗಳ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವ ಸಂಗ್ರಹಿಸಿ ಈಗಾಗಲೇ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 20 ವರ್ಷದ ಯುವಕನಿಗೆ (ಪಿ.854) 1 ರಿಪೋರ್ಟ ಪಾಸಿಟಿವ ಬಂದಿದ್ದು. ಬನಹಟ್ಟಿ ನಗರದ ಜನರಲ್ಲಿ ಆತಂಕ ಮೂಡಿಸಿದೆ,
ಇನೆನ್ನು ಲಾಕಡೌನ ಸಡಿಲಿಕೆಯಿಂದ ಮತ್ತೆ ತಮ್ಮ ತಮ್ಮ ವ್ಯಾಪಾರ ವಹಿವಾಟುಗಳಿಗೆ ಹೊಗಬೇಕೆನ್ನುವಷ್ಟರಲ್ಲಿ, ಈ ಕೊರೋನಾ ಹೆಮ್ಮಾರಿ ಬನಹಟ್ಟಿಗೂ ವಕ್ಕರಿಸಿ ಜನರಲ್ಲಿ ಅತ್ಯಂತ ಭಯಾನಕ ವಾತಾವರಣ ಸೃಷ್ಟಿಮಾಡಿದೆ. ಮುಂದಿನ ದಿನಗಳು ಹೀಗೆ ಲಾಕಡೌನ ಮುಂದುವರೆಯುತ್ತದೆಯೋ ಅಥವಾ ಇನ್ನಷ್ಟು ಬಿಗಿಯಾಗುತ್ತದೆಯೋ ಎಂದು ಜನರಸಾಮಾನ್ಯರ ಪ್ರಶ್ನೆಯಾಗಿದೆ.

ತಹಶೀಲದಾರ ಕಾರ್ಯಾಲಯದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಮೂಡಲಗಿ: ಶಿವಶರಣೆ, ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮ 598ನೇ ಜಯಂತಿಯನ್ನು ಇಲ್ಲಿಯ ತಹಶೀಲದಾರ ಕಾರ್ಯಾಲಯದಲ್ಲಿ ಆಚರಿಸಿದರು.ಎಮ್.ಇ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ ಪೂಜೆ ಸಲ್ಲಿಸಿದರು.ಶಿರಸ್ತೆದಾರ ರಾಜು ಕಡಕೋಳ,ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ,ಸಿ.ಪಿ.ಐ.ವೆಂಕಟೇಶ ಮುರನಾಳ,ಪಿ.ಎಸ್.ಐ.ಎಮ್.ಎನ್.ಸಿಂಧೂರ,ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಚಿದಾನಂದ ಮುಗುಳಖೋಡ,ಸಚಿನ ಸೋನವಾಲ್ಕರ,ಸತೀಶ ಲಂಕೆಪ್ಪನವರ,ಹನಮAತ ಸತರಡ್ಡಿ ಮತ್ತು ಕಛೇರಿ ಸಿಬ್ಬಂದಿ ವರ್ಗ ಇದ್ದರು

ಗೋಕಾಕ ಕೊಲೆ ಖಂಡಿಸಿ ತಹಸೀಲ್ದಾರ್ ಮುಖಾಂತರ ಸಿಎಂ ಗೆ ಮನವಿ

ಮೂಡಲಗಿ: ಗೋಕಾಕ ನಗರದಲ್ಲಿ ಬುಧವಾರ ಜರುಗಿದ ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಅರ್ಜುನ್ ಕಣಮಡಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಭೀಕರ ಕೃತ್ಯವನ್ನು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಉಗ್ರವಾಗಿ ಖಂಡಿಸಿ, ಇಂತಹ ಕೃತ್ಯಗಳು ಮುಂದುವರೆದರೆ ಸಮುದಾಯ ಸಮುದಾಯಗಳ ನಡುವೆ ಘರ್ಷಣೆಗಳು ಉಂಟಾಗಿ ಕಾನೂನು ಸುವ್ಯವಸ್ಥೆಯು ಹದಗೆಡುವ ಸಂಭವವಿರುತ್ತದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ಇವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಡಿಎಸ್‍ಎಸ್ ಸಂಘಟನೆಯವರು ನೀಡಿರುತ್ತಾರೆ.
ಕೊಲೆ ಹಿಂದೆ ಕೆಲವೊಂದು ದಲಿತ ವಿರೋಧಿ ಅಂಗ ಸಂಸ್ಥೆಗಳಾದ ಆರ್.ಎಸ್.ಎಸ್. ಭಜರಂಗದಳ, ಹಾಗೂ ರಾಮಸೇನಾ ಸಂಘಟನೆಗಳ ಕೈವಾಡ ಇರುತ್ತದೆ. ಜನಾಂಗೀಯ ದ್ವೇಷದಿಂದ ಆದ ಕೊಲೆ ಎಂದು ಸಂಶಯ ವ್ಯಕ್ತವಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರ ಮೇಲೆ ಈ ರೀತಿಯ ದೌರ್ಜನ್ಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡುಮೇಲು ಮಾಡುವ ಇಂಥಹ ಕೃತ್ಯಗಳು ನಡೆಯುತ್ತಲೇ ಇವೆ. ರಾಜ್ಯದ ವಿವಿದ ಜಿಲ್ಲೆಗಳಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಹಾಗೂ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಬಹಿಷ್ಕಾರ, ಕೊಲೆ ಮುಂದುವರಿದಿವೆ. ರಾಜ್ಯ ಗೃಹ ಇಲಾಖೆ ಮತು ಸಮಾಜ ಕಲ್ಯಾಣ ಇಲಾಖೆ ಒಟ್ಟಾರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.
ಮೃತ ಸಿದ್ದು ಕಣಮಡಿ ಈತನು ಮಾರಣಾಂತಿಕ ಹಲ್ಲೆಯ ನಂತರ ಮರಣಹೊಂದುವ ಪೂರ್ವದಲ್ಲಿಯೇ ವಿಡಿಯೋ ಮುಖಾಂತರ ಹಲ್ಲೆ ಮಾಡಿದ ವ್ಯಕ್ತಿಗಳು ಮತ್ತು ಕೊಲೆ ಮಾಡಲು ಕುಮ್ಮಕ್ಕು ನೀಡಿರುವ ವ್ಯಕ್ತಿಗಳ ಹೆಸರನ್ನು ಹೇಳಿರುತ್ತಾನೆ. ಕಾರಣ ಮರಣ ಪೂರ್ವ ಅವನ ಹೇಳಿಕೆಯ ಆಧಾರದ ಮೇಲೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ನಿಜವಾದ ಆರೋಪಿಗಳನ್ನು ಬಂದಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರನ್ನು ಬಂಧಿಸುವಲ್ಲಿ ವಿಳಂಬವಾದರೆ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಬೀದಿಗಿಳಿದು ರಾಜ್ಯಾದ್ಯಾಂತ ಉಗ್ರ ಪ್ರತಿಭಟನೆ ಧರಣಿ ಸತ್ಯಾಗ್ರಹಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಜಿಲ್ಲಾ ಹಾಗೂ ತಾಲೂಕಾ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಸಮೀತಿವತಿಯಿಂದ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ದಾ ಸಣ್ಣಕ್ಕಿ , ಪ್ರಕಾಶ ಮಾದರ, ಡಿ ಎಸ್ ಎಸ್ ತಾಲೂಕಾ ಸಂಚಾಲಕ ಅಶೋಕ ಸಿದ್ಲಿಂಗಪ್ಪಗೋಳ, ಮಾಹಾದೇವ ಮಾಸನ್ನವರ, ಯಶ್ವಂತ ಮಂಟುರ, ಯಲ್ಲಪ್ಪ ಸಣ್ಣಕ್ಕಿ, ರಾಮಣ್ಣ ಬಂಗೇನ್ನವರ, ವಿನೋದ ಹೋಸಮನಿ, ಥಾಮಸ್ ಸಣ್ಣಕ್ಕಿ, ಪ್ರಕಾಶ ಮೂಡಲಗಿ, ವಿಜಯ ಮೂಡಲಗಿ, ಅಶೋಕ ಮೂಡಲಗಿ, ಸುಂದರ್ ಶೆಟ್ಟಿ, ಸುಭಾಸ್ ಖನದಾಳೆ, ನವಿನ ಗಸ್ತಿ, ಮತ್ತಿತರರು ಉಪಸ್ಥಿತರಿದ್ದರು.

ಭೀಕರ ಕೃತ್ಯವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಉಗ್ರವಾಗಿ ಖಂಡಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ

ಮೂಡಲಗಿ: ಗೋಕಾಕ ನಗರದಲ್ಲಿ ಬುಧವಾರ ಜರುಗಿದ ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಅರ್ಜುನ್ ಕಣಮಡಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಭೀಕರ ಕೃತ್ಯವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಉಗ್ರವಾಗಿ ಖಂಡಿಸಿ, ಇಂತಹ ಕೃತ್ಯಗಳು ಮುಂದುವರೆದರೆ ಸಮುದಾಯ ಸಮುದಾಯಗಳ ನಡುವೆ ಘರ್ಷಣೆಗಳು ಉಂಟಾಗಿ ಕಾನೂನು ಸುವ್ಯವಸ್ಥೆಯು ಹದಗೆಡುವ ಸಂಭವವಿರುತ್ತದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ಇವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಡಿಎಸ್‍ಎಸ್ ಸಂಘಟನೆಯವರು ನೀಡಿರುತ್ತಾರೆ.
ಕೊಲೆ ಹಿಂದೆ ಕೆಲವೊಂದು ದಲಿತ ವಿರೋಧಿ ಅಂಗ ಸಂಸ್ಥೆಗಳಾದ ಆರ್.ಎಸ್.ಎಸ್. ಭಜರಂಗದಳ, ಹಾಗೂ ರಾಮಸೇನಾ ಸಂಘಟನೆಗಳ ಕೈವಾಡ ಇರುತ್ತದೆ. ಜನಾಂಗೀಯ ದ್ವೇಷದಿಂದ ಆದ ಕೊಲೆ ಎಂದು ಸಂಶಯ ವ್ಯಕ್ತವಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರ ಮೇಲೆ ಈ ರೀತಿಯ ದೌರ್ಜನ್ಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡುಮೇಲು ಮಾಡುವ ಇಂಥಹ ಕೃತ್ಯಗಳು ನಡೆಯುತ್ತಲೇ ಇವೆ. ರಾಜ್ಯದ ವಿವಿದ ಜಿಲ್ಲೆಗಳಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಹಾಗೂ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಬಹಿಷ್ಕಾರ, ಕೊಲೆ ಮುಂದುವರಿದಿವೆ. ರಾಜ್ಯ ಗೃಹ ಇಲಾಖೆ ಮತು ಸಮಾಜ ಕಲ್ಯಾಣ ಇಲಾಖೆ ಒಟ್ಟಾರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.
ಮೃತ ಸಿದ್ದು ಕಣಮಡಿ ಈತನು ಮರಣಾಂತಿಕ ಹಲ್ಲೆಯ ನಂತರ ಮರಣಹೊಂದುವ ಪೂರ್ವದಲ್ಲಿಯೇ ವಿಡಿಯೋ ಮುಖಾಂತರ ಹಲ್ಲೆ ಮಾಡಿದ ವ್ಯಕ್ತಿಗಳು ಮತ್ತು ಕೊಲೆ ಮಾಡಲು ಕುಮ್ಮಕ್ಕು ನೀಡಿರುವ ವ್ಯಕ್ತಿಗಳ ಹೆಸರನ್ನು ಹೇಳಿರುತ್ತಾನೆ. ಕಾರಣ ಮರಣ ಪೂರ್ವ ಅವನ ಹೇಳಿಕೆಯ ಆಧಾರದ ಮೇಲೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ನಿಜವಾದ ಆರೋಪಿಗಳನ್ನು ಬಂದಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರನ್ನು ಬಂಧಿಸುವಲ್ಲಿ ವಿಳಂಬವಾದರೆ ದಲಿತ ಸಂಘರ್ಷ ಸಮೀತಿ ಬೀದಿಗಿಳಿದು ರಾಜ್ಯಾದ್ಯಾಂತ ಉಗ್ರ ಪ್ರತಿಭಟನೆ ಧರಣಿ ಸತ್ಯಾಗ್ರಹಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಜಿಲ್ಲಾ ಹಾಗೂ ತಾಲೂಕಾ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿವತಿಯಿಂದ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಜಿಲ್ಲಾ ಸಂಘಟನಾ ಸಂಚಾಲಕ ಬಾಳೇಶ ಬನಟ್ಟಿ, ತಾಲೂಕಾ ಸಂಘಟನಾ ಸಂಚಾಲಕ ಶಾಬಪ್ಪಾ ಸಣ್ಣಕ್ಕಿ, ತಾಲೂಕಾ ಸಂಚಾಲಕ ಲಕ್ಷ್ಮಣ ಕೆಳಗಡೆ, ಮಾಜಿ ಪುರಸಭೆ ಸದಸ್ಯ ಮರೇಪ್ಪ ಮರೇಪ್ಪಗೋಳ, ವಿಲ್ಸನ್ ಖಾನಟ್ಟಿ, ತಮ್ಮಣ್ಣಾ ಗಸ್ತಿ, ಸುರೇಶ ಸಣ್ಣಕ್ಕಿ, ಸುಂದರ ಬಾಲಪ್ಪಗೋಳ,ರಮೇಶ ಮೇತ್ರಿ, ಚನ್ನಪ್ಪ ಢವಳೇಶ್ವರ, ಹಣಮಂತ ಹವಳೇವ್ವಗೋಳ, ವಿಲಾಸ ಸಣ್ಣಕ್ಕಿ, ಅಶೋಕ ಮರೆನ್ನವರ, ರಾಜು ಪರಸನ್ನವರ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಕೆ.ವಾಯ್ ಮೀಶಿ

WhatsApp
Follow by Email