ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೈತನಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೈತನಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಮುಗಳಖೋಡ : ರಾಯಬಾಗ ತಾಲೂಕಿನ ಸುಲ್ತಾನಪುರದಲ್ಲಿ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ರೈತ, ಕೊಳವೆ ಬಾವಿಗೆ ಬೀಳುವ ಮುಂಚೆ ತನ್ನ ಶರ್ಟು ಮತ್ತು ಪ್ಯಾಂಟನ್ನು ಕಳಚಿ ಪಕ್ಕಕ್ಕೆ ಇಟ್ಟಿದ್ದನು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಖುದ್ದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ನಿಂತು, ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ವೀಕ್ಷಿಸಿದ ಕೊಳವೆ ಬಾವಿಗೆ ಬಿದ್ದ ರೈತನ ಶರೀರವನ್ನು ಹೋರತೆಗೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಸುಮಾರು 20 ಅಡಿ ಆಳದಲ್ಲಿ ಸಿಲುಕಿದ್ದ ಮೃತದೇಹವನ್ನು, ಪೊಲೀಸರು, ಎನ್.ಡಿ.ಆರ್.ಎಫ್ ತಂಡ ಮತ್ತು ಅಗ್ನಿಶಾಮಕ ದಳದವರು ಅತ್ಯಂತ ಕ್ಷಿಪ್ರವಾಗಿ ಬರೀ ನಾಲ್ಕು ಗಂಟೆಯಲ್ಲಿ ಹೊರಗೆ ತೆಗೆದಿದ್ದಕ್ಕೆ ಅವರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
“ಮೂರು ದಿನಗಳ ಹಿಂದೆ ಕೊರೆಯಲಾಗಿದ್ದ ಕೊಳವೆ ಬಾವಿಗೆ ರೈತ ಬಿದ್ದಿದ್ದಾನೆ. ಬೀಳುವ ಮುಂಚೆ ಶರ್ಟು ಮತ್ತು ಪ್ಯಾಂಟು ತೆಗೆದಿಟ್ಟಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಈ ಕುರಿತಂತೆ ತನಿಖೆ ನಡೆಸಲಿದ್ದಾರೆ. ಸಂಜೆ 7 ಗಂಟೆಗೆ ಕೊಳವೆ ಬಾವಿಗೆ ಬಿದ್ದ ರೈತನ ಶರೀರವನ್ನು ಹೋರತೆಗೆದು ಪರಿಕ್ಷಿಸಿದ ರಾಯಬಾಗ ತಾಲೂಕಾ ವೈದ್ಯಾಧಿಕಾರಿ ಡಾ. ಎಸ್.ಎಸ್.ಭಾನೆ, ಡಾ. ಎಸ್‌ಎಂ ಪಾಟೀಲ್ ನಂತರ ರೈತ ಲಕ್ಕಪ್ಪ ಮೃತನಾಗಿದ್ದಾನೆಂದು ಘೋಸಿಸಿದರು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದ್ದಾರೆ. ಮೃತಪಟ್ಟ ರೈತನಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರಿಗೆ ಸಾಂತ್ವಾನ ಹೇಳಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೈತನಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ
ಈ ಘಟನೆ ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ. ಆದರೂ ಘಟನಾ ಸ್ಥಳಕ್ಕೆ ಬಾರದ ಕುಡಚಿ ಶಾಸಕ ಪಿ. ರಾಜೀವ್.
ಆದರೆ ರೈತ ಕೊಳವೆ ಬಾವಿಗೆ ಬೀಳುವ ಮುನ್ನ ಶರ್ಟು, ಪ್ಯಾಂಟು ಕಳಚಿದ್ದೇಕೆ ಎನ್ನುವ ವಿಷಯ ಈಗ ಎಲ್ಲರನ್ನು ಕಾಡುತ್ತಿದೆ.
Share
WhatsApp
Follow by Email