ಕೊಳವೆಬಾವಿಗೆ ಬಿದ್ದ 38 ವರ್ಷದ ವ್ಯಕ್ತಿ: ಸಾಲದ ಸೂಲವೆ ಅವಘಡಕ್ಕೆ ಕಾರಣ, ಬೆಳಗಾವಿಯ ರಾಜ್ಯ ವಿಪತ್ತು ನಿರ್ವಹನಾ ಪಡೆ (ತಂಡ) ಕೂಡಾ ಕಾರ್ಯಾಚರಣೆಯಲ್ಲಿ ಬಾಗಿಯಾಗಿದೆ.

ಕೊಳವೆಬಾವಿಗೆ ಬಿದ್ದ 38 ವರ್ಷದ ವ್ಯಕ್ತಿ: ಸಾಲದ ಸೂಲವೆ ಅವಘಡಕ್ಕೆ ಕಾರಣ, ಬೆಳಗಾವಿಯ ರಾಜ್ಯ ವಿಪತ್ತು ನಿರ್ವಹನಾ ಪಡೆ (ತಂಡ) ಕೂಡಾ ಕಾರ್ಯಾಚರಣೆಯಲ್ಲಿ ಬಾಗಿಯಾಗಿದೆ.

ಮುಗಳಖೋಡ: ಸಮೀಪದ ಸುಲ್ತಾನಪೂರ ಗ್ರಾಮದ ಲಕ್ಕಪ್ಪಾ ಸಂಗಪ್ಪ ದೊಡ್ಡಮನಿ ಎಂಬ 38 ವರ್ಷದ ವ್ಯಕ್ತಿ ಸೋಮವಾರ ದಿ: 11 ರಂದು ಮುಂಜಾನೆ 6ಗಂಟೆಗೆ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ.
ಇತ್ತಿಚಿಗೆ ಅಂದರೆ ದಿ: 07-5-2020 ರಂದು ಸರ್ವೆ ನಂ 67/5 ರಲ್ಲಿ ಲಕ್ಕಪ್ಪಾ ದೊಡ್ಡಮನಿ ಅವರು ಸಾಲ ಮಾಡಿ ಈ ಕೊಳವೆಬಾವಿಯನ್ನು ಕೊರೆಸಿದ್ದರು ಕೊಳವೆಬಾವಿಗೆ ನೀರು ಬಾರದೆ ಇದ್ದಾಗ ಲಕ್ಕಪ್ಪ ಮಾನಸಿಕಗೊಂಡಿದ್ದರು ಅಷ್ಟೆ ಅಲ್ಲದೆ ಸಾಲ ಕೊಟ್ಟ ವ್ಯಕ್ತಿಗಳ ಕಿರುಕುಳದಿಂದಾಗಿ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ರಾಯಬಾಗ ತಹಶೀಲ್ದಾರ ಚಂದ್ರಕಾoತ ಭಜಂತ್ರಿ, ರಾಯಬಾಗ ಸಿಪಿಐ ಕೆ.ಎಸ್.ಹಟ್ಟಿ, ಅಥಣಿ ಡಿವಾಯ್‌ಎಸ್‌ಪಿ ಗಿರೀಶ, ಹಾರೂಗೇರಿ ಠಾಣಾಧಿಕಾರಿ ಯಮನಪ್ಪ ಮಾಂಗ, ಅಗ್ನಿಶಾಮಕ ಸಿಬ್ಬಂದಿ, ರಾಯಬಾಗ ತಾಲೂಕಾ ವೈದ್ಯಾಧಿಕಾರಿಗಳು, ಪೋಲಿಸರು ಆಗಮಿಸಿ 3 ಜೆಸಿಬಿಗಳ ಮುಖಾಂತರ ಕಾರ್ಯಾಚರಣೆ ಆರಂಬಿಸಿ ವ್ಯಕ್ತಿಯನ್ನು ಮೆಲೆತ್ತುವ ಕೆಲಸದಲ್ಲಿ ತೊಡಗಿದ್ದಾರೆ. ಬೆಳಗಾವಿಯ ರಾಜ್ಯ ವಿಪತ್ತು ನಿರ್ವಹನಾ ಪಡೆ (ತಂಡ) ಕೂಡಾ ಕಾರ್ಯಾಚರಣೆಯಲ್ಲಿ ಬಾಗಿಯಾಗಿದೆ. ಸ್ಥಳದಲ್ಲಿ 108 ಅಂಬ್ಯುಲೆನ್ಸ್ ರೆಡಿ ಇದೆ.
ಈ ಕೊಳವೆ ಬಾವಿಗೆ ಬಿದ್ದಿರುವ ವ್ಯಕ್ತಿಗೆ ಹೆಂಡತಿ, 11 ವರ್ಷದ ಮಗ, 9 ವರ್ಷದ ಮಗಳು ಇದ್ದಾರೆ.
Share
WhatsApp
Follow by Email