
ಕೊಲೆ ಹಿಂದೆ ಕೆಲವೊಂದು ದಲಿತ ವಿರೋಧಿ ಅಂಗ ಸಂಸ್ಥೆಗಳಾದ ಆರ್.ಎಸ್.ಎಸ್. ಭಜರಂಗದಳ, ಹಾಗೂ ರಾಮಸೇನಾ ಸಂಘಟನೆಗಳ ಕೈವಾಡ ಇರುತ್ತದೆ. ಜನಾಂಗೀಯ ದ್ವೇಷದಿಂದ ಆದ ಕೊಲೆ ಎಂದು ಸಂಶಯ ವ್ಯಕ್ತವಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರ ಮೇಲೆ ಈ ರೀತಿಯ ದೌರ್ಜನ್ಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡುಮೇಲು ಮಾಡುವ ಇಂಥಹ ಕೃತ್ಯಗಳು ನಡೆಯುತ್ತಲೇ ಇವೆ. ರಾಜ್ಯದ ವಿವಿದ ಜಿಲ್ಲೆಗಳಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಹಾಗೂ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಬಹಿಷ್ಕಾರ, ಕೊಲೆ ಮುಂದುವರಿದಿವೆ. ರಾಜ್ಯ ಗೃಹ ಇಲಾಖೆ ಮತು ಸಮಾಜ ಕಲ್ಯಾಣ ಇಲಾಖೆ ಒಟ್ಟಾರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.
ಮೃತ ಸಿದ್ದು ಕಣಮಡಿ ಈತನು ಮರಣಾಂತಿಕ ಹಲ್ಲೆಯ ನಂತರ ಮರಣಹೊಂದುವ ಪೂರ್ವದಲ್ಲಿಯೇ ವಿಡಿಯೋ ಮುಖಾಂತರ ಹಲ್ಲೆ ಮಾಡಿದ ವ್ಯಕ್ತಿಗಳು ಮತ್ತು ಕೊಲೆ ಮಾಡಲು ಕುಮ್ಮಕ್ಕು ನೀಡಿರುವ ವ್ಯಕ್ತಿಗಳ ಹೆಸರನ್ನು ಹೇಳಿರುತ್ತಾನೆ. ಕಾರಣ ಮರಣ ಪೂರ್ವ ಅವನ ಹೇಳಿಕೆಯ ಆಧಾರದ ಮೇಲೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ನಿಜವಾದ ಆರೋಪಿಗಳನ್ನು ಬಂದಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರನ್ನು ಬಂಧಿಸುವಲ್ಲಿ ವಿಳಂಬವಾದರೆ ದಲಿತ ಸಂಘರ್ಷ ಸಮೀತಿ ಬೀದಿಗಿಳಿದು ರಾಜ್ಯಾದ್ಯಾಂತ ಉಗ್ರ ಪ್ರತಿಭಟನೆ ಧರಣಿ ಸತ್ಯಾಗ್ರಹಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಜಿಲ್ಲಾ ಹಾಗೂ ತಾಲೂಕಾ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿವತಿಯಿಂದ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ, ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಜಿಲ್ಲಾ ಸಂಘಟನಾ ಸಂಚಾಲಕ ಬಾಳೇಶ ಬನಟ್ಟಿ, ತಾಲೂಕಾ ಸಂಘಟನಾ ಸಂಚಾಲಕ ಶಾಬಪ್ಪಾ ಸಣ್ಣಕ್ಕಿ, ತಾಲೂಕಾ ಸಂಚಾಲಕ ಲಕ್ಷ್ಮಣ ಕೆಳಗಡೆ, ಮಾಜಿ ಪುರಸಭೆ ಸದಸ್ಯ ಮರೇಪ್ಪ ಮರೇಪ್ಪಗೋಳ, ವಿಲ್ಸನ್ ಖಾನಟ್ಟಿ, ತಮ್ಮಣ್ಣಾ ಗಸ್ತಿ, ಸುರೇಶ ಸಣ್ಣಕ್ಕಿ, ಸುಂದರ ಬಾಲಪ್ಪಗೋಳ,ರಮೇಶ ಮೇತ್ರಿ, ಚನ್ನಪ್ಪ ಢವಳೇಶ್ವರ, ಹಣಮಂತ ಹವಳೇವ್ವಗೋಳ, ವಿಲಾಸ ಸಣ್ಣಕ್ಕಿ, ಅಶೋಕ ಮರೆನ್ನವರ, ರಾಜು ಪರಸನ್ನವರ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಕೆ.ವಾಯ್ ಮೀಶಿ