ಸುರಕ್ಷತಾ ಕ್ರಮಗಳನ್ನು ಅನುಸರಿಸಿದಲ್ಲಿ ಕೊರೊನಾ ಮಹಾಮಾರಿಯನ್ನು ಓಡಿಸುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ  :ಅಣ್ಣಾಸಾಹೇಬ ಜೊಲ್ಲೆ

ಸುರಕ್ಷತಾ ಕ್ರಮಗಳನ್ನು ಅನುಸರಿಸಿದಲ್ಲಿ ಕೊರೊನಾ ಮಹಾಮಾರಿಯನ್ನು ಓಡಿಸುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ :ಅಣ್ಣಾಸಾಹೇಬ ಜೊಲ್ಲೆ

ರಾಯಬಾಗ : ಎಲ್ಲರೂ ಅವಶ್ಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿದಲ್ಲಿ ಕೊರೊನಾ ಮಹಾಮಾರಿಯನ್ನು ಓಡಿಸುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಭಾನುವಾರ ತಾಲೂಕಿನ ಚಿಂಚಲಿ ಪಟ್ಟಣದ ಮಾಲಿನಿ ಭವನದಲ್ಲಿ ಕೊರೋನಾ ವಾರಿಯರ್ಸ್ಗಳಿಗಾಗಿ ಆಯೋಜಿಸಿದ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು ಕೊರೋನಾ ಸೋಂಕು ತಗುಲದಂತೆ ಸಾಮಾಜಿಕ ಅಂತರ, ಮನೆಯಲ್ಲೇ ಸುರಕ್ಷಿತವಾಗಿರುವುದು, ಮುಖ ಮಾಸ್ಕ್ ಧರಿಸುವುದರ ಮೂಲಕ ವೈರಸ್ ತಡೆಗಟ್ಟಲು ಎಲ್ಲರೂ ಪಾಲಿಸಬೇಕೆಂದರು, ದೇವಸ್ಥಾನ, ಪ್ರಾರ್ಥನಾ ಮಂದಿರಗಳಲ್ಲಿ ಜನ ಸೇರದಂತೆ ಎಚ್ಚರಿಕೆ ವಹಿಸಬೇಕು, ಚಿಂಚಲಿ ಪಟ್ಟಣದಲ್ಲಿರುವ ಕ್ವಾರಂಟೈನ್ ವ್ಯಕ್ತಿಗಳ ಆರೋಗ್ಯವನ್ನು ಎರಡು ಬಾರಿ ಪರೀಕ್ಷೆಗೊಳಪಡಿಸಲಾಗಿದೆ, ನೆಗೆಟಿವ್ ಫಲಿತಾಂಶ ಬಂದಿದೆ, ಕ್ವಾರಂಟೈನ್‌ಲ್ಲಿದ್ದ ಪಟ್ಟಣದ ಮೂವರನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಮೇಲಧಿಕಾರಿಗಳಿಂದ ಅನುಮತಿ ಸಿಕ್ಕ ಬಳಿಕ ಉಳಿದವರನ್ನು ಬಿಡುಗಡೆಗೊಳಿಸಲಾಗುವುದೆಂದು ಹೇಳಿದರು. ಚಿಂಚಲಿ ಪಟ್ಟಣದಲ್ಲಿ ಶಂಕಿತರನ್ನು ಕ್ವಾರಂಟೈನ್‌ಲ್ಲಿಡಲು ಅವಕಾಶ ಮಾಡಿಕೊಟ್ಟ ಪಟ್ಟಣದ ಸಾರ್ವಜನಿಕರಿಗೆ ಧನ್ಯವಾದ ಹೇಳಿದರು. ಈಗಾಗಲೇ ಮುಖ್ಯಮಂತ್ರಿ ಯಡಿಯೂಪ್ಪನವರು ವೃತ್ತಿಪರ ಹಾಗೂ ಕಾರ್ಮಿಕರಿಗೆ ವಿವಿಧ ರೀತಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ್ದು ಅರ್ಹರು ಸದುಪಯೋಗ ಪಡೆದುಕೊಳ್ಳಬೇಕೆಂದರು. ಲಾಕಡೌನ್ ಸಡಿಲಿಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದೆಂದರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 83 ರಿಂದ 105 ಕ್ಕೇರಿ 100 ರ ಗಡಿ ದಾಟಿದೆ, ಆದ್ದರಿಂದ ಎಲ್ಲರೂ ಮನೆಯಲ್ಲಿದ್ದು ಸುರಕ್ಷತಾ ಕ್ರಮ ಪಾಲಿಸುವತ್ತ ಗಮನ ಹರಿಸಬೇಕೆಂದರು. ಕೊರೋನಾ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪೋಲಿಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಹೇಳಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮನೆಯಲ್ಲಿರುವುದು, ಸ್ವಚ್ಛತೆಯನ್ನು ಕಾಪಾಡುವುದು ಈ ಮೂರು ಸೂತ್ರಗಳನ್ನು ಪಾಲಿಸುವುದರಿಂದ ಕೊರೋನಾ ವೈರಸ್‌ನ್ನು ತಡೆಗಟ್ಟಬಹುದೆಂದು ರಾಯಬಾಗ ಶಾಸಕ ಡಿ.ಎಂ. ಐಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಯಬಾಗ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಡೊಣವಾಡೆ, ಜಿತೇಂದ್ರ ಜಾಧವ, ಮಲ್ಲಪ್ಪ ಮೈಶಾಳೆ, ಪಪಂ ಸದಸ್ಯರಾದ ಅಂಕುಶ ಜಾಧವ, ಸಂಜಯ ಮೈಶಾಳೆ, ರಮೇಶ ಹಾರೂಗೇರಿ. ಅಬ್ಬಾಸ ಮುಲ್ಲಾ, ಮಹಾವೀರ ಹಾರೂಗೇರಿ, ಸುಭಾಷ ಕೋರೆ, ಸಂಭಾಜಿ ಶಿಂಧೆ, ಮತ್ತು ಪಪಂ ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ಇಒ ಪ್ರಕಾಶ ವಡ್ಡರ, ಸಿಡಿಪಿಒ ಸಂತೋಷ ಕಾಂಬಳೆ, ವೈದ್ಯಾಧಿಕಾರಿ ಜೀವನ್ ಹೊಸಟ್ಟಿ, ಪಪಂ ಸಿಬ್ಬಂದಿ ಸೇರಿದಂತೆ ಪಟ್ಟಣದ ಮುಖಂಡರು, ಸಾರ್ವಜನಿಕರು ಇದ್ದರು.
Share
WhatsApp
Follow by Email