ಮೂಲ ಕುಲಕಸುಬುದಾರರು ಲಾಕಡೌನ್‌ನಿಂದ ಕಷ್ಟ , ಸರಕಾರ ಎಚ್ಚೇತ್ತುಕೊಳ್ಳಬೇಕಿದೆ. ಮಣ್ಣಿನ ಮಡಿಕೆ ಮಾಡುವ ಕುಂಬಾರನ ಬದುಕು ಸಂಕಷ್ಟದಲ್ಲಿ

ಮೂಲ ಕುಲಕಸುಬುದಾರರು ಲಾಕಡೌನ್‌ನಿಂದ ಕಷ್ಟ , ಸರಕಾರ ಎಚ್ಚೇತ್ತುಕೊಳ್ಳಬೇಕಿದೆ. ಮಣ್ಣಿನ ಮಡಿಕೆ ಮಾಡುವ ಕುಂಬಾರನ ಬದುಕು ಸಂಕಷ್ಟದಲ್ಲಿ

ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ:
ಕನ್ನಡ ಟುಡೇ ವಿಶೇಷ ವರದಿ:
ಮುದ್ದೇಬಿಹಾಳ : ಮಣ್ಣಿನ ಸಲಕರಣೆಯನ್ನು ಮಾಡಿ ಜನಸಾಮಾನ್ಯರಿಗೆ ಪ್ರೀತಿಗೆ ಪಾತ್ರರಾಗಿದ್ದು , ಮಣ್ಣಿನ ಸಹಾಯದಿಂದ ಬದುಕು ಕಟ್ಟಿಕೊಂಡ ಮೂಲ ಕುಲಕಸುಬುದಾರನಾದ ಕುಂಬಾರರ ಜನಾಂಗದ ಬದುಕು ಕೊರೊನಾ ವೈರಸ್ ಹೊಡೆತಕ್ಕೆ ಹೊಡೆದ ಗಡಿಗಿಯ ಹಾಗೆ ನುಚ್ಚು ನೂರಾಗಿದೆ. ಹೆಚ್ಚಿನ ಜನರು ಕುಲಕಸುಬುವಾದ, ಮಡಿಕೆ, ಹೊಲೆ, ಗಡಿಗಿಯನ್ನೆ ಮಾಡಿಕೊಂಡು ತಮ್ಮ ದಿನನಿತ್ಯದ ಬದುಕನ್ನು ಮುಂದೊಡಿಸುತ್ತಿದ್ದರು. ಆದರೆ ಲಾಕಡೌನ್ ಇವರ ಜೀವನಕ್ಕೆ ಕತ್ತರಿ ಹಾಕಿ ನೆಲಕಚ್ಚಿ ಬಿಳುವಂತೆ ಮಾಡಿದೆ.
ಹೌದು ಜನಸಾಮಾನ್ಯರು ದಿನಬಳಕೆಗೆ ಉಪಯೋಗಿಸುವಂತಹ ಮೂಲಭೂತ ಸಲಕರಣೆಗಳನ್ನು ತಯಾರಿ ಮಾಡಿ ಅದರಿಂದ ಬಂದ ಆದಾಯವನ್ನು ತಮ್ಮ ಜೀವನಕ್ಕೆ ಆಸರೆಯಾಗಿ ಬಳಸಿಕೊಳ್ಳುತ್ತಿದ್ದರು, ಆದರೆ ಇಂದು ಅವರು ಮಾಡುವ ವಸ್ತುಗಳಿಗೆ ಸೂಕ್ತ ಬೇಡಿಕೆ ಇರದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದು , ಕುಂಬಾರರು ಬೇರೆ ವ್ಯವಹಾರ ಮಾಡುವಂತಹ ಅನಿವಾರ್ಯತೆ ಇದೆ.ಮತ್ತು ಬೇಸಿಗೆ ಆರಂಭದಲ್ಲಿ ಇವರು ಮಾಡುವಂತಹ ನೀರಿನ ಗಡಿಗೆಗಳಿಗೆ ಬಾರಿ ಬೇಡಿಕೆ ಇರುತ್ತಿತ್ತು, ಅದರೆ ಲಾಕ್ಡೌನ್ ನಿಂದ ಯಾವದೇ ಬೇಡಿಕೆ ಇರದ ಕಾರಣ ಇವರ ನಷ್ಟ ಅನುಭವಿಸುತ್ತಿದ್ದಾರೆ.
ಆದುನಿಕ ಸಲಕರಣೆಯ ಮುಂದೆ ಹೊಡೆದ ಕುಂಬಾರನ ಬದುಕು.
ದಿನದಿಂದ ದಿನಕ್ಕೆ ವಿಲಾಸಿ ಜೀವನದತ್ತ ಹೆಜ್ಜೆ ಹಾಕಿದ ಜನಸಾಮಾನ್ಯರು ಮಣ್ಣಿನಿಂದ ತಯಾರಿಸಿದ ಪಾತ್ರೆಗಳನ್ನು ಉಪಯೋಗಿಸಲು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಮಣ್ಣಿನ ಪಾತ್ರೆಗಳನ್ನು ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದ ಕುಂಬಾರ ಜನಾಂಗದ ಬದುಕು ಸೂಚನೀಯವಾಗಿದೆ. ಸುಮಾರು ವರ್ಷಗಳ ಹಿಂದೆ ಕುಂಬಾರ ಜನಾಂಗದವರು ಪರಿಶ್ರಮದಿಂದ ಮಾಡಿದ ಮಡಿಕೆ , ಹೊಲೆ, ಗಡಿಗೆ, ಪಾತ್ರೆಗಳನ್ನು ಜನಸಾಮಾನ್ಯರು ಉಪಯೋಗಿಸುತ್ತಿದ್ದರು, ಕಾಲ ಕ್ರಮೇಣ ಜನರ ಜೀವನ ಶೈಲಿ ಬದಲಾದಂತೆ ಮಣ್ಣಿನಿಂದ ಮಾಡಿದ ಪಾತ್ರೆ ಮೂಲೆಗೆ ಸೇರಿದವು, ಮತ್ತು ಕೆಲವು ಸಂಧರ್ಭದಲ್ಲಿ ಮಾತ್ರ ಉಪಯೊಗಿಸುವದರಿಂದ ಕುಂಬಾರ ಜನಾಂಗದ ಬದುಕು ಒಡೆದ ಗಡಿಗೆಯಂತಾಗಿದ್ದು ಮಾತ್ರ ಸುಳ್ಳಲ್ಲಾ,
ಸರಕಾರ ವಿಶೇಷ ಸೌಲಭ್ಯ ಘೋಷಿಸಲಿ .
ಮೂಲ ಕುಲಸುಬುದಾರಾದ ಕುಂಬಾರ ಜನಾಂಗ, ತೀರಾ ಹಿಂದುಳಿದ ಜನಾಂಗವಾಗಿದೆ, ಶೈಕ್ಷಣಿಕ ಆರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ಲಾಕಡೌನ್ ನಿಂದ ನಷ್ಟವಾಗಿದ್ದನ್ನು ಗುರುತಿಸಿ ಸರಕಾರ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂದು ಜನಾಂಗದ ಯುವ ಮುಖಂಡ ಕೃಷ್ಣಾ ಕುಂಬಾರ ಆಗ್ರಹಿಸಿದ್ದಾರೆ. ಕುಂಬಾರರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವದರಿಂದ ಇ ಸಮುದಾಯಕ್ಕೆ ಶಿಕ್ಷಣದ ಕೊರತೆ ಮತ್ತು ಆರ್ಥಿಕತೆಯ ಕೊರತೆ ಇದ್ದು ಈ ಜನಾಂಗವನ್ನು ಉನ್ನತಿಕರಣಗೋಳಿಸಲು ಸರಕಾರ ಸಹಾಯ ಹಸ್ತ ಚಾಚಬೇಕಿದೆ.
ಕುಂಬಾರ ಅಬಿವೃದ್ದಿ ನಿಗಮ ಸ್ಥಾಪನೆಯಾಗಲಿ.
ಕೆಲವು ಜನಾಂಗದ ಅಬಿವೃದ್ದಿ ನಿಗಮದಂತೆ ಕುಂಬಾರ ಅಬಿವೃದ್ದಿ ನಿಗಮ ಸ್ಥಾಪನೆಯಾಗಲಿ ಎಂಬುವದು ಸರ್ವ ಜನಾಂಗದ ಒತ್ತಾಶಯವಾಗಿದೆ.
ಈ ನಿಗಮದಿಂದ ಕುಂಬಾರರಿಗೆ ಕುಲಕಸುಬು ಮಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ರಾಜ್ಯದ ಎಲ್ಲಾ ಕುಂಬಾರರ ಬದುಕನ್ನು ಹಸನು ಮಾಡುವ ಅವಶ್ಯಕತೆ ಇದೆ. ಮೂಲಭೂತ ಸೌಲಭ್ಯದಿಂದ ವಂಚಿತವಾಗಿರುವ ಈ ಜನಾಂಗಕ್ಕೆ ಸರಕಾರ ಆಸರೆಯಾಗಬೇಕಿದೆ. ಇ ಸಮುದಾಯದವರು ಮೂಲ ತಮ್ಮ ಕಸುಬನ್ನೇ ನಂಬಿಕೊoಡಿದ್ದರಿoದ ಇವರಿಗೆ ಕೊರೊನಾ ವೈರಸ್ ಹೊಡೆತಕ್ಕೆ ಸಂಕಷ್ಟದಲ್ಲಿದ್ದಾರೆ ಆದರಿಂದ ಸರಕಾರ ಇವರಿಗೆ ಅಬಿವೃದ್ದಿ ನಿಗಮ ಸ್ಥಾಪಿಸುವ ಅವಶ್ಯಕತೆ ಇದೆ.
ಬಾಕ್ಸ್ ನ್ಯೂಸ್ : ನಮ್ಮ ಜನಾಂಗವು ಕೊರೊನಾ ವೈರಸ್ ಲಾಕ್ಡೌನ್ ನಿಂದ ತೀರಾ ಸಂಕಷ್ಟದಲ್ಲಿದೆ, ಸರಕಾರ ಇನ್ನು ಯಾವದೇ ರೀತಿಯಲ್ಲಿ ಪರಿಹಾರವನ್ನು ನಮ್ಮ ಜನಾಂಗಕ್ಕೆ ಘೋಷಿಸಿಲ್ಲಾ, ಮುಂದಿನ ದಿನಗಳಲ್ಲಿ ವಿಶೇಷ ಸೌಲಭ್ಯ ನೀಡಬೇಕು ಎಂದು ಬಸವರಾಜ ಕುಂಬಾರ ಜನಾಂಗದ ಯುವ ಮುಖಂಡ ಹೇಳಿದರು.
ಬಾಕ್ಸ್ ನ್ಯೂಸ್ : ಒಂದು ಜನಾಂಗವು ಸುದಾರಣೆಯಾಗಬೇಕಾದರೇ ಸರಕಾರವು ಕೈ ಜೋಡಿಸಬೇಕು, ಕುಂಬಾರ ಜನಾಂಗವು ಲಾಕ್ಡೌನ್ ನಿಂದ ಸಂಕಷ್ಟದಲ್ಲಿ ಸಿಲುಕಿದೆ, ಸರಕಾರ ಮನಗಂಡು ಪ್ಯಾಕೇಜ್ ಘೋಷಣೆ ಮಾಡಲಿ ಎಂದು ಯುವ ಮುಖಂಡ ಕೃಷ್ಣಾ ಕುಂಬಾರ ಆಗ್ರಹಿಸಿದ್ದಾರೆ.
Share
WhatsApp
Follow by Email