ಕಿತ್ತೂರು ಸ್ವಯಂ ಪ್ರೇರಿತ ಬಂದ್ ಇಂದು |ಕಿತ್ತೂರು ಗುರುವಾರ ವ್ಯಾಪರ ವಹಿವಾಟು ಬಂದ್

ಕಿತ್ತೂರು ಸ್ವಯಂ ಪ್ರೇರಿತ ಬಂದ್ ಇಂದು |ಕಿತ್ತೂರು ಗುರುವಾರ ವ್ಯಾಪರ ವಹಿವಾಟು ಬಂದ್


ಚನ್ನಮ್ಮ ಕಿತ್ತೂರು : ಕಿತ್ತೂರಿನ ಸರಕಾರಿ ಮಹಿಳಾ ವೈದ್ಯಾದಿಕಾರಿಗೆ ಕೆಲ ಪುಂಡರು ಜೀವ ಬೆದರಿಕೆ ಹಾಕಿರುವ ಘಟನೆ ಖಂಡಿಸಿ ಕಿತ್ತೂರು ವರ್ತಕ ಸಂಘದಿಂದ ಎಲ್ಲ ವರ್ತಕರು ಸ್ವಯಂ ಪ್ರೇರಿತ ವ್ಯಾಪಾರ ವಹಿವಾಟು ಬಂದ ಮಾಡಿ ಆರೋಪಿತರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ ಅವರಿಗೆ, ಮನವಿ ಪತ್ರ ಸಲ್ಲಿಸಲು ಬುಧವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆಂದು ಸಂಘದ ಪಧಾಧಿಕಾರಿಗಳಾದ ಮಲ್ಲಿಕಾರ್ಜುನ ಸಾಣಿಕೊಪ್ಪ, ಹನುಮಂತ ಲಂಗೋಟಿ, ಮಲ್ಲಣ್ಣ ಸಾಣಿಕೊಪ್ಪ, ಬಸವರಾಜ ರಾಮಣ್ಣವರ, ಸಂತೋಷ ಕಲಾಲ, ಕಿರಣ ಪಾಟೀಲ, ಸೂರಜ ಕುಪ್ಪಸಗೌಡರ ಇತರರು ತಿಳಿಸಿದ್ದಾರೆ.
ಸ್ವಯಂ ಪ್ರೇರಿತ ಬಂದ್‍ಗೆ ಖಾಸಗಿ ವೈದ್ಯರ ಸಂಘ, ಔಷಧಿ ವ್ಯಾಪಾರಿಗಳ ಮದ್ಯಮಾರಾಟಗಾರರ ಸಂಘದಿಂದ, ನ್ಯಾಯವಾದಿಗಳ ಸಂಘ ಸೇರಿದಂತೆ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Share
WhatsApp
Follow by Email