ಬ್ರೇಕಿಂಗ್ ನ್ಯೂಸ್ ಮಹಿಳಾ ವೈದ್ಯೆಯ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ಖಂಡಿಸಿ ಸ್ವಯಂ ಪ್ರೇರಣೇಯಿಂದ ಬಂದ್ ಆದ ಅಂಗಡಿ ಮುಂಗಟ್ಟುಗಳು 15/05/202015/05/20201 min read admin ಚನ್ನಮ್ಮನ ಕಿತ್ತೂರು : ಇಲ್ಲಿಯ ಮಹಿಳಾ ವೈದ್ಯೆಗೆ ಜೀವ ಬೆದರಿಕೆ, ಹಲ್ಲೆ ಯತ್ನಿಸಿದ ಘಟನೆ ಖಂಡಿಸಿ ಪಟ್ಟಣದ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನೀಡಿದ ಕಿತ್ತೂರು ಬಂದ್ ಗೆ ಗುರುವಾರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.ಮುಂಜಾನೆಯಿAದ ಎಲ್ಲರೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಔಷಧ ವ್ಯಾಪಾರಸ್ಥರು, ಮದ್ಯದಂಗಡಿಗಳು ಸೇರಿ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಮಹಿಳಾ ವೈದ್ಯೆಗೆ ನಿಮ್ಮ ಜೊತೆ ನಾವಿದ್ದೇವೆ, ಇಂತಹ ಪುಂಡ ಪೋಕರಿಗಳಿಗೆ ಎದೆ ಗುಂದದೆ ಕರ್ತವ್ಯ ನಿರ್ವಹಿಸಿ ಎಂದು ಆತ್ಮಸ್ಥೆöÊರ್ಯ ತುಂಬಿ ಈ ಬಂದ್ ಮೂಲಕ ಬೆಂಬಲ ಸೂಚಿಸಿದರು.ವರ್ತಕರ ಸಂಘ, ಖಾಸಗಿ ವೈದ್ಯರ ಸಂಘ, ನ್ಯಾಯವಾದಿಗಳ ಸಂಘ, ಮದ್ಯಮಾರಾಟಗಾರರ ಸಂಘ, ವಿವಿಧ ಮಹಿಳಾ ಸಂಘಟನೆಗಳು, ಯುವಕ ಸಂಘಟನೆಗಳು, ಸೇರಿದಂತೆ ಪಕ್ಷಾತೀತವಾಗಿ ಈ ಘಟನೆಯನ್ನು ಖಂಡಿಸಿ ಮುಂದೆ ಇಂತಹ ಘಟನೆಗಳು ನಡೆದರೆ ಎಲ್ಲರೂ ಅದನ್ನು ಸಮರ್ಥವಾಗಿ ಒಗ್ಗಟ್ಟಾಗಿ ಎದುರಿಸಲು ಸಿದ್ದರಿದ್ದೇವೆಂಬ ಸಂದೇಶ ಸಾರಿದರು. Share