ಮಹಾಲಿಂಗಪೂರ : ಕೋರೋಣ ಕಾರಣದಿಂದ ಕೆಲಸ ಕಾರ್ಯಗಳಿಲ್ಲದೆ ಸಂಕಷ್ಟಕ್ಕೆ ಒಳಗಾದ ಪಟ್ಟಣದ ಮೇದಾರ ಜನಾಂಗದ ಜನ ಗುರುವಾರ ದಿವಸ ಪುರಸಭೆಗೆ ಆಗಮಿಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಕಿಲ್ಲರ್ ಕೊರೊನಾ ವಿಶ್ವ ವ್ಯಾಪಿಯಾಗಿದ್ದು, ಸರಕಾರ ರೋಗಾಣು (ವೈರಸ್ )ಹತೋಟಿಗೆ ತರಲು ದೇಶದಲ್ಲಿ ಲಾಕ್ ಡಾವನ್,ಸೀಲ್ ಡಾವನ ಹೇರಿತು. ಈ ಕಾರಣದಿಂದ ಅನಿವಾರ್ಯವಾಗಿ ರಾಜ್ಯ,ಜಿಲ್ಲೆ,ತಾಲೂಕು,ಹಳ್ಳಿ,ಪಟ್ಟಣಗಳಲ್ಲಿಯ ಎಲ್ಲ ಸಮುದಾಯಗಳ ಜನತೆ ಸಂಕಷ್ಟದಲ್ಲಿದ್ದಾರೆ.ಅದೇ ತೆರನಾಗಿ ಬುಟ್ಟಿ. ಮರ. ನಿಚ್ಚಣಿಕೆ ಇನ್ನಿತರ ಜೀವನಾವಶ್ಯಕ ವಸ್ತುಗಳನ್ನು ಬಿದರಿನಿಂದ ತಯಾರಿಸಿ ಜೀವನ ನಿರ್ವಹಣ ಮಾಡುವ ಮೇದಾರ್ ಉರ್ಫ್ ಬುರುಡ ಜನಾಂಗವೂ ಕೂಡ ಆದಾಯದ ಮೂಲ ಬಿದಿರು,ಬಂಬುಗಳಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಇದ್ದ ಸಾಮಗ್ರಿಯಲ್ಲಿ ವಸ್ತುಗಳನ್ನು ತಯಾರಿಸಿದರೂ ಹೇರಳವಾಗಿ ಜನ ಖರೀದಿಸದೆ ಸೂಕ್ತ ಮಾರುಕಟ್ಟೆಯೆ ಸಿಗದಂತಾಗಿದೆ. ಆದ್ದರಿಂದ ನಮ್ಮ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡು ಆದಾಯವಿಲ್ಲದೆ ಕಂಗಾಲಾಗಿ ಮತ್ತು ಯಾವುದೇ ಆರ್ಥಿಕ ನೆರವು ಇಲ್ಲದ ನಮ್ಮ ಜನಾಂಗ ತೊಂದರೆಗಿಡಾಗಿದೆ. ಸದರಿ ವಿಷಯದಲ್ಲಿ ಸರಕಾರ ಇತರೆ ಸಮುದಾಯಗಳಿಗೆ ಆರ್ಥಿಕ ನೆರವು ನೀಡಿದಂತೆ ನಮ್ಮ ಸಮಾಜಕ್ಕೂ ನೆರವು ನೀಡಿ ಸಹಕರಿಸಬೇಕೆಂಬ ಮನವಿಯನ್ನು ಎಲ್ಲ ಜನರ ಪರವಾಗಿ ಸಮಾಜದ ಅಧ್ಯಕ್ಷ ಹನುಮಂತ ಬುರುಡ ಅವರು ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಕಮತಗಿಯವರಿಗೆ ಸಲ್ಲಿಸಿದರು. ಈ ಸಮಯದಲ್ಲಿ ಉಪಾಧ್ಯಕ್ಷ ಹಾಗೂ ಪುರಸಭೆಗೆ ಚುನಾಯಿತ ಬುರುಡ ಸಮಾಜದ ಬಸವರಾಜ, ಗಂಗಪ್ಪ, ಭೀಮಶಿ, ಈರಪ್ಪ, ಬಸವರಾಜ,ಮಲ್ಲಪ್ಪ, ರವೀಂದ್ರ, ಕಲ್ಲಪ್ಪ, ಶಿವಾನಂದ, ಶ್ರೀಕಾಂತ, ಮಹೇಶ, ಮಹಾಲಿಂಗ, ಮಹಾಂತೇಶ, ಹನುಮಂತ, ರಾಯಪ್ಪ, ಪ್ರಭು, ಸಂತೋಷ,ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ರಾಜು ಹೂಗಾರ ಹಾಗೂ ರವಿ ಹಲಸಪ್ಪಗೋಳ ಮುಂತಾದವರಿದ್ದರು.
ಚನ್ನಮ್ಮನ ಕಿತ್ತೂರು ಃ ವೈದ್ಯಗೆ ಜೀವ ಬೆದರಿಕೆ ಪ್ರಕರಣದ ಹಿಂದೆ ಇಬ್ಬರು ವೈದ್ಯರ ಕುಮ್ಮಕ್ಕು ಇರುವುದು ಕಂಡು ಬಂದಿದೆ, ಇಲಾಖಾಧಿಕಾರಿಗಳು ತಪ್ಪಿತಸ್ಥರ ಮೇಲೆ ಕಟ್ಟು ನಿಟ್ಟಿನ ಕ್ರಮ ಪ್ರಕಟಿಸಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಆಗ್ರಹಿಸಿದರು. ವೈದ್ಯೆಗೆ ಜೀವ ಬೆದರಿಕೆ ಖಂಡಿಸಿ ಕಿತ್ತೂರು ಬಂದ್ ಹಿನ್ನೆಲೆ ನಡೆದ ಸಭೆಯಲ್ಲಿ ಮಾತನಾಡಿ, ಅವರು ಈ ಘಟನೆಗೆ ಸಂಬAಧಿಸಿದAತೆ ವೈದ್ಯೆ ಮನನೊಂದು ರಾಜೀನಾಮೆಗೆ ಮುಂದಾಗಿದ್ದರು, ಆದರೇ ಅವರಿಗೆ ದೈರ್ಯ ತುಂಬುವ ಮೂಲಕ ರಾಜಿನಾಮೆ ನೀಡದಂತೆ ಮನವೊಲಿಸಲಾಯಿತು, ಈ ಘಟನೆಯನ್ನು ಕಿತ್ತೂರು ನಾಡಿನ ಜನರು ಖಂಡಿಸಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿರುವುದು ಸಮಾಜಘಾತುಕರಿಗೆ ಎಚ್ಚರಿಕೆಯಾಗಿದೆ ಎಂದರು. ಇAತಹ ಘಟನೆಗಳಿಗೆ ಸಂಬAಧಿಸಿದAತೆ ನೌಕರರು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ, ನಮ್ಮ ಕಾರ್ಯ ಪಡೆ ನಿಮ್ಮ ಜೊತೆ ಸದಾ ಇರುತ್ತದೆ. ಈ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಇಂತಹ ದುಷ್ಕೃತ್ಯ ಮಾಡುವ ಸಮಾಜಘಾತುಕ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಸಹಿಸುವದಿಲ್ಲ, ಇಂತಹ ರೌಡಿಸಂ ಮಾಡುವ ವ್ಯಕ್ತಿಗಳನ್ನು ಮಟ್ಟಹಾಕಬೇಕು, ಈ ಘಟನೆಯಲ್ಲಿ ಪ್ರಚೋದನೆ ನೀಡಿದವರ ಮೇಲೆ ಕಠಿಣ ಶಿಕ್ಷೆಯಾಗಬೇಕು, ಆರೋಗ್ಯ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿ ದೌರ್ಜನ್ಯಕ್ಕೊಳಗಾದ ವೈದ್ಯರ ಬೆಂಬಲಕ್ಕೆ ಪ್ರಾಮಾಣಿಕವಾಗಿ ನಿಲ್ಲಬೇಕು, ಈ ಘಟನೆಯಿಂದ ಕಿತ್ತೂರಿಗೆ ಕಪ್ಪು ಚುಕ್ಕೆ ಉಂಟಾಗಿದೆ, ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕೆಂದು ಸಂದೀಪ ದೇಶಪಾಂಡೆ, ಬಸವರಾಜ ಪರವಣ್ಣವರ, ಮಲ್ಲಣ್ಣ ಸಾಣಿಕೊಪ್ಪ, ವಿ.ಡಿ.ಉಣಕಲ್ಲಕರ, ಮೊಹನ ಅಂಗಡಿ, ಜಗದೀಶ ಬಿಕ್ಕಣ್ಣವರ, ಹನುಮಂತ ಲಂಗೋಟಿ, ಮಹಾದೇವಿ ಮಣವಡ್ಡರ, ಡಾ. ಮಂಜುನಾಥ ಮುದಕನಗೌಡರ, ಎಸ್.ಪಿ.ಹಿರೇಮಠ ಸೇರಿದಂತೆ ಇತರರು ಆಗ್ರಹಿಸಿದರು. ಹಿರಿಯ ಆರೋಗ್ಯಾಧಿಕಾರಿ. ಐ.ಪಿ.ಗಡಾದ, ತಹಶೀಲ್ದಾರ ಪ್ರವೀಣ ಜೈನ್, ತಾಪಂ ಇಒ ಸುಭಾಸ ಸಂಪಗಾoವಿ, ಸಿಪಿಐ ಶ್ರೀಕಾಂತ ತೋಟಗಿ, ಟಿಎಚ್‌ಒ ಎಸ್.ಎಸ್.ಶಿದ್ದಣ್ಣವರ, ಎಸ್.ಸಿ.ಮಾಸ್ತಿಹೊಳಿ ಹಾಜರಿದ್ದರು.
ಚನ್ನಮ್ಮನ ಕಿತ್ತೂರು : ಇಲ್ಲಿಯ ಮಹಿಳಾ ವೈದ್ಯೆಗೆ ಜೀವ ಬೆದರಿಕೆ, ಹಲ್ಲೆ ಯತ್ನಿಸಿದ ಘಟನೆ ಖಂಡಿಸಿ ಪಟ್ಟಣದ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನೀಡಿದ ಕಿತ್ತೂರು ಬಂದ್ ಗೆ ಗುರುವಾರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮುಂಜಾನೆಯಿAದ ಎಲ್ಲರೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಔಷಧ ವ್ಯಾಪಾರಸ್ಥರು, ಮದ್ಯದಂಗಡಿಗಳು ಸೇರಿ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಮಹಿಳಾ ವೈದ್ಯೆಗೆ ನಿಮ್ಮ ಜೊತೆ ನಾವಿದ್ದೇವೆ, ಇಂತಹ ಪುಂಡ ಪೋಕರಿಗಳಿಗೆ ಎದೆ ಗುಂದದೆ ಕರ್ತವ್ಯ ನಿರ್ವಹಿಸಿ ಎಂದು ಆತ್ಮಸ್ಥೆöÊರ್ಯ ತುಂಬಿ ಈ ಬಂದ್ ಮೂಲಕ ಬೆಂಬಲ ಸೂಚಿಸಿದರು. ವರ್ತಕರ ಸಂಘ, ಖಾಸಗಿ ವೈದ್ಯರ ಸಂಘ, ನ್ಯಾಯವಾದಿಗಳ ಸಂಘ, ಮದ್ಯಮಾರಾಟಗಾರರ ಸಂಘ, ವಿವಿಧ ಮಹಿಳಾ ಸಂಘಟನೆಗಳು, ಯುವಕ ಸಂಘಟನೆಗಳು, ಸೇರಿದಂತೆ ಪಕ್ಷಾತೀತವಾಗಿ ಈ ಘಟನೆಯನ್ನು ಖಂಡಿಸಿ ಮುಂದೆ ಇಂತಹ ಘಟನೆಗಳು ನಡೆದರೆ ಎಲ್ಲರೂ ಅದನ್ನು ಸಮರ್ಥವಾಗಿ ಒಗ್ಗಟ್ಟಾಗಿ ಎದುರಿಸಲು ಸಿದ್ದರಿದ್ದೇವೆಂಬ ಸಂದೇಶ ಸಾರಿದರು.
ಮೂಡಲಗಿ : ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚು ಮೈಗೂಡಿಸಿಕೊಂಡು ಪ್ರಾಮಾಣಿಕತೆ ಪ್ರದರ್ಶಿಸಿದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ. ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ, ಸಮಾಜ ಸೇವೆ ಒಂದು ಪುಣ್ಯದ ಕೆಲಸವಾಗಿದೆ. ತಮ್ಮ ಕೆಲಸದಲ್ಲಿ ಯಾರು ಅಪ್ರಾಮಾಣಿಕತೆಯಿಂದ ಇರುತ್ತಾರೆ ಅವರು ಎಷ್ಟೇ ಹಣ ಹಣಗಳಿಸಿದರೂ ಅವರಿಗೆ ನೆಮ್ಮದಿ ಬದುಕು ಇರುವುದಿಲ್ಲ, ಮನುಷ್ಯ ಇಂದು ಕೇವಲ ಹಣ ಗಳಿಕೆಗೆ ಮಾತ್ರ ಸೀಮಿತನಾಗಿರುವುದರ ಜತೆಗೆ ಸ್ವಾರ್ಥಿಗಳಾಗಿದ್ದಾರೆ. ಕೇವಲ ತವು ಹಾಗೂ ತಮ್ಮ ಕುಟುಂಬಕ್ಕಷ್ಟೇ ಸೀಮಿತರಾಗಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಸಮಾಜ ಸೇವಾ ಮಾಡುವ ಯಾರು ಕೂಡಾ ಮುಂದೆ ಬರಲು ಹಿಂಜರಿಕೆ ಪಡುತ್ತಿದ್ದಾರೆ. ಕೆಲವರು ಅಧಿಕಾರ ಆಸೆಗಾಗಿ ಸಮಾಜ ಸೇವೆ ಮಾಡುವವರು ಒಂದು ಕಡೆಯಾದರೇ ಸಮಾಜ ಸೇವೆನೇ ಮೈಗೊಡಿಸಿಕೊಂಡ ಜನ ಇನ್ನೊಂದು ಕಡೆ. ಇರುವಾಗ ತಮ್ಮ ಜೀವನಕ್ಕೆ ಆಸರೆಯಾಗಿರುವ ಹಾಡುಗಾರಿಕೆಯನ್ನು ಬೀಟ್ಟು ಸಮಾಜ ಸೇವೆ ಮಾಡುತ್ತಿರುವ ಆ ವ್ಯಕ್ತಿಯ ಕಾರ್ಯ ಶ್ಲಾಘನೀಯ. ಹೌದು ಮೂಡಲಗಿ ಪಟ್ಟಣದ ಶಿವಾಪೂರ ರೋಡ ( ಮೂಡಲಗಿ ನಾಕಾ) ನಿವಾಸಿಯಾದ ಮರೇಪ್ಪ ಮರೇಪ್ಪಗೋಳ ಇವರು ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟ ಸುಖ ನೋವುಗಳನ್ನು ಅನುಭವಿಸಿದ ವ್ಯಕ್ತಿ. 20ನೇ ವಯಸ್ಸಿನಿಂದಲೇ ಮದುವೆ ಸಮಾರಂಭಗಳಲ್ಲಿ ಹಾಡು ಹಾಡುತ್ತಾ ಜನರನ್ನು ರಂಜಿಸುತ್ತಾ, ವಿವಿಧ ಹಳ್ಳಿಹಳ್ಳಿಗಳಿಗೆ ತಮ್ಮ ಸಂಗಡಿಗರೊಂದಿಗೆ ಕಾರ್ಯಕ್ರಮಗಳನ್ನು ನಡೆಸಿ ಬರುವಂತ ಹಣದಲ್ಲಿ ಜೀವನವನ್ನು ನಡೆಸುವಂತ ಪರಿಸ್ಥಿತಿ ಅವರದು. ಆದರೆ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನರಿಗೋಸ್ಕರ ಮಾಡುವಂತ ಕಾರ್ಯಗಳನ್ನು ಮನಗಂಡು ಶಾಸಕರನ್ನೇ ಮಾರ್ಗದರ್ಶಿಯಾಗಿರಿಸಿಕೊಂಡು ಸಮಾಜ ಸೇವೆ ಮಾಡುವ ಮನೋಭಾವನೆಯೊಂದಿಗೆ ಸಮಾಜದ ಹಿತಕ್ಕಾಗಿ ದುಡಿದು ಜನರ ವಿಶ್ವಾಸ ಗಳಿಸಿದಲ್ಲಿ ಅದಕ್ಕಿಂತ ಮಿಗಿಲಾದ ಶಕ್ತಿ ಬೇರಾವುದು ಬೇಕಾಗುವುದಿಲ್ಲ, ಸಮಾಜ ಸೇವೆಯಲ್ಲಿ ಅಂತಹ ಸಾಮರ್ಥ್ಯ ಇದೆ ಎಂಬ ನಂಬಿಕೆಯಿoದ ತಮ್ಮ ಹಾಡುಗಾರಿಕೆಯನ್ನು ಬಿಟ್ಟು ಸಮಾಜ ಸೇವೆ ಮಾಡಲು ಕ್ರಿಯಾಶೀಲರಾಗಿ ಮೊದಲಿಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ, ಶಾಸಕರ ಮೆಚ್ಚುಗೆ ಪಡೆದು, ಶಾಸಕರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮುಖ್ಯವಾಗಿ ಬೇಕಾದುದು ಸಮಾಜದ ಜನರ ವಿಶ್ವಾಸದ ಗಳಿಕೆ. ಇತ್ತೀಚಿನ ದಿನಗಳಲ್ಲಂತೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಅಪಾರ ಜಿವಹಾನಿ, ಆಸ್ತಿ ನಷ್ಟ ಇತ್ಯಾದಿ ಸಂಭವಿಸಿದಾಗ, ಹಾಗೂ ಇಡೀ ದೇಶದಲ್ಲೇ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಹಿನ್ನೆಲೆ ಅನೇಕ ಖ್ಯಾತನಾಮ ಉದ್ಯಮಗಳು, ಸಮಾಜದ ಗಣ್ಯರು ದೇಣಿಗೆ, ದಿನಸಿ ವಸ್ತುಗಳನ್ನು ಬಡ ಜನರಿಗೆ ಹಚ್ಚುವಂತ ಕೆಲಸ ಮಾಡುತ್ತಿದ್ದಾರೆ. ಆದರೆ ಮರೇಪ್ಪ ಅವರು ತಾನು ಏನನಾದರೂ ಬಡ ಜನರಿಗೆ ಸಹಯ ಮಾಡಬೇಕು ಎಂದು ಬಡ ಕುಟುಂಬಗಳಿಗೆ ಸಹ ದಿನಸಿ ಕಿಟ್ ವಿತರಿಸುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಿದ್ದಾರೆ. ಜನಸೇವೆಯೇ ಜನಾರ್ದನನ ಸೇವೆ ಎಂಬ ಗಾದೆಯು ಸಮಾಹ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ. ಒಂದು ಕಾಲದಲ್ಲಿ ಸಮಾಜ ಸೇವಾಕರ್ತರೆಂದರೆ ಎಲ್ಲರೂ ಅವರನ್ನು ತುಂಬ ಪೂಜ್ಯಭಾವದಿಂದ ಕಾಣುತ್ತಾರೆ. ಇಂತಹ ಸಂದರ್ಭದಲ್ಲಿ ಸಮಾಜ ಸೇವೆ ಮಾಡುತ್ತಿರುವ ಮರೇಪ್ಪ ಮರೇಪ್ಪಗೋಳ ಅವರ ಕಾರ್ಯ ಮಾತ್ರ ಶ್ಲಾಘನೀಯವಾದುದ್ದು. ಬಾಕ್ಸ್ ನ್ಯೂಸ್ : ಪ್ರತಿ ವ್ಯಕ್ತಿಯಲ್ಲೂ ತನ್ನದೆ ಆದ ಪ್ರತಿಭೆ ಇದ್ದೆ ಇರುತ್ತದೆ. ಜತೆಗೆ ಪ್ರತಿಭೆ ಅನಾವರಣಗೊಳ್ಳುವುದು ಇಂತಹ ಕಾರ್ಯಕ್ರಮದಿಂದಲೇ. ಯಾರನ್ನಾದರೂ ಬೆಟ್ಟು ಮಾಡುವ ಬದಲು ಅವರಿಗೆ ಅವಕಾಶ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡಬೇಕು. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಂಕಲ್ಪ ತೊಟ್ಟರೆ ಮಾತ್ರ ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯ, ಸಮಾಜ ಸೇವಕ ಮರೇಪ್ಪ ಮರೇಪ್ಪಗೋಳ