ಮೇದಾರ ಜನಾಂಗದ ಜನ ಗುರುವಾರ ದಿವಸ ಪುರಸಭೆಗೆ ಆಗಮಿಸಿ ಮುಖ್ಯಾಧಿಕಾರಿಗೆ ಮನವಿ

ಮೇದಾರ ಜನಾಂಗದ ಜನ ಗುರುವಾರ ದಿವಸ ಪುರಸಭೆಗೆ ಆಗಮಿಸಿ ಮುಖ್ಯಾಧಿಕಾರಿಗೆ ಮನವಿ

ಮಹಾಲಿಂಗಪೂರ : ಕೋರೋಣ ಕಾರಣದಿಂದ ಕೆಲಸ ಕಾರ್ಯಗಳಿಲ್ಲದೆ ಸಂಕಷ್ಟಕ್ಕೆ ಒಳಗಾದ ಪಟ್ಟಣದ ಮೇದಾರ ಜನಾಂಗದ ಜನ ಗುರುವಾರ ದಿವಸ ಪುರಸಭೆಗೆ ಆಗಮಿಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಕಿಲ್ಲರ್ ಕೊರೊನಾ ವಿಶ್ವ ವ್ಯಾಪಿಯಾಗಿದ್ದು, ಸರಕಾರ ರೋಗಾಣು (ವೈರಸ್ )ಹತೋಟಿಗೆ ತರಲು ದೇಶದಲ್ಲಿ ಲಾಕ್ ಡಾವನ್,ಸೀಲ್ ಡಾವನ ಹೇರಿತು. ಈ ಕಾರಣದಿಂದ ಅನಿವಾರ್ಯವಾಗಿ ರಾಜ್ಯ,ಜಿಲ್ಲೆ,ತಾಲೂಕು,ಹಳ್ಳಿ,ಪಟ್ಟಣಗಳಲ್ಲಿಯ ಎಲ್ಲ ಸಮುದಾಯಗಳ ಜನತೆ ಸಂಕಷ್ಟದಲ್ಲಿದ್ದಾರೆ.ಅದೇ ತೆರನಾಗಿ ಬುಟ್ಟಿ. ಮರ. ನಿಚ್ಚಣಿಕೆ ಇನ್ನಿತರ ಜೀವನಾವಶ್ಯಕ ವಸ್ತುಗಳನ್ನು ಬಿದರಿನಿಂದ ತಯಾರಿಸಿ ಜೀವನ ನಿರ್ವಹಣ ಮಾಡುವ ಮೇದಾರ್ ಉರ್ಫ್ ಬುರುಡ ಜನಾಂಗವೂ ಕೂಡ ಆದಾಯದ ಮೂಲ ಬಿದಿರು,ಬಂಬುಗಳಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.
ಇದ್ದ ಸಾಮಗ್ರಿಯಲ್ಲಿ ವಸ್ತುಗಳನ್ನು ತಯಾರಿಸಿದರೂ ಹೇರಳವಾಗಿ ಜನ ಖರೀದಿಸದೆ ಸೂಕ್ತ ಮಾರುಕಟ್ಟೆಯೆ ಸಿಗದಂತಾಗಿದೆ. ಆದ್ದರಿಂದ ನಮ್ಮ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡು ಆದಾಯವಿಲ್ಲದೆ ಕಂಗಾಲಾಗಿ ಮತ್ತು ಯಾವುದೇ ಆರ್ಥಿಕ ನೆರವು ಇಲ್ಲದ ನಮ್ಮ ಜನಾಂಗ ತೊಂದರೆಗಿಡಾಗಿದೆ. ಸದರಿ ವಿಷಯದಲ್ಲಿ ಸರಕಾರ ಇತರೆ ಸಮುದಾಯಗಳಿಗೆ ಆರ್ಥಿಕ ನೆರವು ನೀಡಿದಂತೆ ನಮ್ಮ ಸಮಾಜಕ್ಕೂ ನೆರವು ನೀಡಿ ಸಹಕರಿಸಬೇಕೆಂಬ ಮನವಿಯನ್ನು ಎಲ್ಲ ಜನರ ಪರವಾಗಿ ಸಮಾಜದ ಅಧ್ಯಕ್ಷ ಹನುಮಂತ ಬುರುಡ ಅವರು ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಕಮತಗಿಯವರಿಗೆ ಸಲ್ಲಿಸಿದರು.
ಈ ಸಮಯದಲ್ಲಿ ಉಪಾಧ್ಯಕ್ಷ ಹಾಗೂ ಪುರಸಭೆಗೆ ಚುನಾಯಿತ ಬುರುಡ ಸಮಾಜದ ಬಸವರಾಜ, ಗಂಗಪ್ಪ, ಭೀಮಶಿ, ಈರಪ್ಪ, ಬಸವರಾಜ,ಮಲ್ಲಪ್ಪ, ರವೀಂದ್ರ, ಕಲ್ಲಪ್ಪ, ಶಿವಾನಂದ, ಶ್ರೀಕಾಂತ, ಮಹೇಶ, ಮಹಾಲಿಂಗ, ಮಹಾಂತೇಶ, ಹನುಮಂತ, ರಾಯಪ್ಪ, ಪ್ರಭು, ಸಂತೋಷ,ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ರಾಜು ಹೂಗಾರ ಹಾಗೂ ರವಿ ಹಲಸಪ್ಪಗೋಳ ಮುಂತಾದವರಿದ್ದರು.
Share
WhatsApp
Follow by Email